ಕೊಡಗು

ಮೋರಿಗೆ ಬೈಕ್ ಡಿಕ್ಕಿ; ಮೂವರಿಗೆ ಗಾಯ
ಕೊಡಗು

ಮೋರಿಗೆ ಬೈಕ್ ಡಿಕ್ಕಿ; ಮೂವರಿಗೆ ಗಾಯ

January 18, 2019

ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ ಬದಿಯ ಮೋರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಕೊಡಗರ ಹಳ್ಳಿ ಸಮೀಪ ನಡೆದಿದೆ. ಗರಗಂದೂರಿನ ಚಾಮುಂಡ್ವೇಶ್ವರಿ ಕಾಲೋನಿ ನಿವಾಸಿ ಶಿವನ್, ಗುಂಡುಗುಟ್ಟಿ ನಿವಾಸಿ ಪುನೀತ್(ಮುನ್ನ), ಸುಂಟಿಕೊಪ್ಪ ಪಂಪ್ ಹೌಸ್ ನಿವಾಸಿ ಮಣಿಕಂಠ ಗಾಯಗೊಂ ಡವರು. ಈ ಮೂವರು ಬೈಕಿನಲ್ಲಿ ಗುರು ವಾರ ಕುಶಾಲನಗರದಲ್ಲಿ ವಿವಾಹ ಸಮಾ ರಂಭಕ್ಕೆ ತೆರಳಿ ರಾತ್ರಿ 11.15ರ ಸಮ ಯದಲ್ಲಿ ಹಿಂದಿರುಗುತ್ತಿದ್ದರು. ಈ ಸಂದರ್ಭ ಕೊಡಗರಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯ ಮೋರಿಗೆ ಬೈಕು…

ವಿರಾಜಪೇಟೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ
ಕೊಡಗು

ವಿರಾಜಪೇಟೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ

January 18, 2019

ವಿರಾಜಪೇಟೆ: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಚುನಾಯಿತ ಶಾಸಕರಿಗೆ ಹಣದ ಆಮಿಷ ತೋರಿಸಿ ಮೈತ್ರಿ ಸರ್ಕಾ ರವನ್ನು ಅಧಿಕಾರದಿಂದ ಇಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ವಿರಾಜ ಪೇಟೆ ತಾಲೂಕು ಕಾಂಗ್ರೆಸ್ ಸಮಿತಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿ ತಹಶಿಲ್ದಾರ್ ಆರ್.ಗೋವಿಂದ ರಾಜ್ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು…

ಇಂದು ಸೆಸ್ಕಾಂ ಜನಸಂಪರ್ಕ ಸಭೆ
ಕೊಡಗು

ಇಂದು ಸೆಸ್ಕಾಂ ಜನಸಂಪರ್ಕ ಸಭೆ

January 18, 2019

ಮಡಿಕೇರಿ: ಸೋಮವಾರಪೇಟೆ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸುವ ಜನಸಂಪರ್ಕ ಸಭೆಯು ಜ.19 ರಂದು ಬೆಳಗ್ಗೆ 10 ರಿಂದ 11.30 ಗಂಟೆ ವರೆಗೆ ಸೋಮವಾರಪೇಟೆ ಉಪ ವಿಭಾಗ ಕಚೇರಿ ಆವರಣದಲ್ಲಿ ಅಧೀಕ್ಷಕ ಎಂಜಿನಿಯರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕುಶಾಲನಗರ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಜನ ಸಂಪರ್ಕ ಸಭೆಯು ಜನವರಿ 19 ರಂದು ಮಧ್ಯಾಹ್ನ 12.30 ಗಂಟೆಯಿಂದ 2 ಗಂಟೆವರೆಗೆ ಕುಶಾಲನಗರ ಉಪ ವಿಭಾಗ ಕಚೇರಿ ಆವರಣದಲ್ಲಿ ನಡೆಯಲಿದೆ. ಸೋಮವಾರಪೇಟೆ ಮತ್ತು…

ಇಂದು ಹಿರಿಯ ನಾಗರಿಕರ ವೇದಿಕೆ ಸಾಮಾನ್ಯ ಸಭೆ
ಕೊಡಗು

ಇಂದು ಹಿರಿಯ ನಾಗರಿಕರ ವೇದಿಕೆ ಸಾಮಾನ್ಯ ಸಭೆ

January 18, 2019

ಮಡಿಕೇರಿ: ಹಿರಿಯ ನಾಗರಿಕರ ವೇದಿಕೆಯ ಸಾಮಾನ್ಯ ಸಭೆಯು ಅಧ್ಯಕ್ಷ ಕೊಂಗಾಂಡ ಎ.ತಿಮ್ಮಯ್ಯ ಅಧ್ಯಕ್ಷತೆಯಲ್ಲಿ ಜ.19 ರಂದು ಬೆಳಗ್ಗೆ 10 ಗಂಟೆಗೆ ಸಿದ್ದಾಪುರ ರಸ್ತೆಯಲ್ಲಿರುವ ಕ್ಯಾಪಿಟಲ್ ವಿಲೇಜ್‍ನಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಮನೋಹರ್ ಜಿ.ಪಾಟ್ಕರ್, ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಇತರರು ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗೆ 9448422279, 9972167576 ಮತ್ತು 9448292477 ನ್ನು ಸಂಪರ್ಕಿಸಬಹುದು.

ನಾಳೆ ಕುಶಾಲನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಕೊಡಗು

ನಾಳೆ ಕುಶಾಲನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

January 18, 2019

ಮಡಿಕೇರಿ:ಕುಶಾಲನಗರ ವಿದ್ಯುತ್ ಉಪ-ಕೇಂದ್ರದಲ್ಲಿ ಕಾಮಗಾರಿ ಹಮ್ಮಿ ಕೊಂಡಿರುವುದರಿಂದ ಜನವರಿ 20 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕೂಡು ಮಂಗಳೂರು, ಕೂಡ್ಲೂರು, ಕೂಡಿಗೆ, ಶಿರಂಗಾಲ, ಹಾರಂಗಿ, ಯಡವನಾಡು, ಸೀಗೆಹೊಸೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಏಕಮುಖ ಸಂಚಾರ ವಿರೋಧಿಸಿ ಗೋಣಿಕೊಪ್ಪ ಬಂದ್
ಕೊಡಗು

ಏಕಮುಖ ಸಂಚಾರ ವಿರೋಧಿಸಿ ಗೋಣಿಕೊಪ್ಪ ಬಂದ್

January 17, 2019

ಗೋಣಿಕೊಪ್ಪಲು: ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಗೊಳಿಸಿರುವ ಏಕಮುಖ ಸಂಚಾರಕ್ಕೆ ವಿರೋಧ ವ್ಯಕ್ತಪಡಿಸಿ ಕೆಲ ವರ್ತಕರು ಕರೆದಿದ್ದ ಸ್ವಯಂ ಘೋಷಿತ ಬಂದ್ ಕರೆಗೆ ಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಯಿತು. ಪಟ್ಟಣದ 6-7 ವರ್ತಕರನ್ನು ಹೊರತು ಪಡಿಸಿ ಪಟ್ಟಣ ಸಂಪೂರ್ಣ ಬಂದ್ ಮಾಡ ಲಾಗಿತ್ತು. ಬೆಳಗ್ಗೆ 6 ರಿಂದ ಸಂಜೆ 6ರವರೆಗೂ ಅಂಗಡಿ-ಮುಂಗಟ್ಟು ಮುಚ್ಚಲಾಗಿತ್ತು. ಹರಿಶ್ಚಂದ್ರಪುರದಿಂದ ಉಮಾಮಹೇ ಶ್ವರಿ ದೇವಾಲಯದವರೆಗೂ ಅಂಗಡಿ-ಮುಂಗಟ್ಟು ಮುಚ್ಚಲಾಗಿತ್ತು. ವಾಹನ, ಆಟೋ, ಖಾಸಗಿ ಬಸ್ ಸೇವೆ ಎಂದಿನಂತೆ ಸೇವೆ ನೀಡಿದ ಕಾರಣ ಸಾರ್ವಜನಿಕರಿಗೆ…

ಕೊಡಗು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ
ಕೊಡಗು

ಕೊಡಗು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ

January 17, 2019

ವೀರಾಜಪೇಟೆ: ಕೊಡಗಿನಲ್ಲಿ ಇತ್ತೀಚೆಗೆ ನಡೆದ ಪ್ರಕೃತಿ ವಿಕೋಪದಿಂದ ಬೆಳೆ, ಆಸ್ತಿ ಮನೆಗಳನ್ನು ಕಳೆದುಕೊಂಡು ಐದು ತಿಂಗಳುಗಳು ಕಳೆದರೂ ಇದು ವರೆಗೆ ಸಂತ್ರಸ್ತರಿಗೆ ಪರಿಹಾರವನ್ನು ಒದ ಗಿಸದೆ ಇರುವುದು ಸರಕಾರದ ವೈಫಲ್ಯ ತೆಯನ್ನು ತೋರುತ್ತದೆ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹೇಳಿದರು. ಅಖಿಲ ಕೊಡವ ಸಮಾಜದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಮಾತಂಡ ಮೊಣ್ಣಪ್ಪ, ಪ್ರಕೃತಿ ವಿಕೋಪ ನಡೆದ ಸಂದರ್ಭ ಜನರ ಕಷ್ಟಗಳಿಗೆ ಸ್ಪಂದಿಸಿದವರು ಆನಂ ತರದ ದಿನಗಳಲ್ಲಿ ಪರಿಹಾರ ಕಾರ್ಯಗಳು ಕುಂಟುತ್ತಾ ಸಾಗುತ್ತಿದೆ. ಕೇವಲ…

ಕುಶಾಲನಗರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಕೊಡಗು

ಕುಶಾಲನಗರದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

January 17, 2019

ಕುಶಾಲನಗರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಅತಂತ್ರ ಸ್ಥಿತಿಗೆ ತರಲು ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಯತ್ನಿಸಿ ವಿಫಲವಾಗಿದೆ ಎಂದು ದೂರಿದ ಕಾಂಗ್ರೆಸ್ ಕಾರ್ಯ ಕರ್ತರು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾ ಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಧಿಕ್ಕಾರ…

ಮತದಾರರ ಪಟ್ಟಿ ಪರಿಷ್ಕರಣೆ; ಜಿಲ್ಲೆಯಲ್ಲಿ 4,34,256 ಮತದಾರರು
ಕೊಡಗು

ಮತದಾರರ ಪಟ್ಟಿ ಪರಿಷ್ಕರಣೆ; ಜಿಲ್ಲೆಯಲ್ಲಿ 4,34,256 ಮತದಾರರು

January 16, 2019

ಮಡಿಕೇರಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಭಾವಚಿತ್ರ ವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2019 ರ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಅಂತಿಮ ಮತ ದಾರರ ಪಟ್ಟಿಯಲ್ಲಿ ಒಟ್ಟು 4,34,256 ಮತದಾರರಿದ್ದಾರೆ. ಹೊಸದಾಗಿ 5,444 ಮತದಾರರು (2502 ಪುರುಷರು ಹಾಗೂ 2942 ಮಹಿಳೆಯರು) ಸೇರ್ಪಡೆಯಾಗಿ ದ್ದಾರೆ. ಜೊತೆಗೆ 6,449 ಮತದಾರರನ್ನು (ಮೃತ, ಸ್ಥಳಾಂತರ ಮತ್ತು ಪುನರಾವರ್ತನೆ ಗೊಂಡಿರುವ ಕಾರಣಗಳಿಂದ) ಮತದಾ ರರ ಪಟ್ಟಿಯಿಂದ ಕೈಬಿಡಲಾಗಿರುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿ ವಾಸ್ ಮಾಹಿತಿ ನೀಡಿದ್ದಾರೆ. ನಗರದ…

ಆಪರೇಷನ್ ಷಡ್ಯಂತ್ರದ ಹಿಂದೆ ಮೋದಿ ಕೈವಾಡ
ಕೊಡಗು

ಆಪರೇಷನ್ ಷಡ್ಯಂತ್ರದ ಹಿಂದೆ ಮೋದಿ ಕೈವಾಡ

January 16, 2019

ಮಡಿಕೇರಿ: ಪ್ರಧಾನಿ ಮೋದಿಗೆ ಅಭದ್ರತೆ ಕಾಡುತ್ತಿರುವುದರಿಂದಾಗಿಯೇ ಕರ್ನಾಟಕದಲ್ಲಿ ಬಿಜೆಪಿ ಬೇರೆ ಪಕ್ಷಗಳ ಶಾಸಕರನ್ನು ಸೆಳೆ ಯುವ ಕುತಂತ್ರ ರೂಪಿಸಿದ್ದು, ಈ ಷಡ್ಯಂತ್ರದ ಹಿಂದೆ ಮೋದಿ ಕೈವಾಡವಿದೆ ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ ಎಂ.ಸಿ. ನಾಣಯ್ಯ ಆರೋಪಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಸಿ. ನಾಣಯ್ಯ, ಗೋರೆಗಾಂವ್‍ನಲ್ಲಿ ಬಿಜೆಪಿ ಶಾಸಕರನ್ನು ಸೆರೆ ಮನೆಯಲ್ಲಿಟ್ಟಂತೆ ಕೂಡಿಟ್ಟಿರುವ ವಿದ್ಯಾಮಾನಗಳು, ಬೇರೆ ಪಕ್ಷಗಳಿಂದ ಶಾಸಕರನ್ನು ಖರೀದಿಸುತ್ತಿರುವ ಬೆಳವಣಿಗೆಗಳು ಪ್ರಧಾನಿಗೆ ತಿಳಿದಿ ಲ್ಲವೇ. ಈ ಎಲ್ಲಾ ರಾಜಕೀಯ ಪ್ರಧಾನಿಗೆ ಸ್ಪಷ್ಟವಾಗಿ ತಿಳಿದಿದ್ದರೂ ಲೋಕಸಭಾ ಚುನಾವಣೆ ಯನ್ನು…

1 77 78 79 80 81 187
Translate »