ಆಪರೇಷನ್ ಷಡ್ಯಂತ್ರದ ಹಿಂದೆ ಮೋದಿ ಕೈವಾಡ
ಕೊಡಗು

ಆಪರೇಷನ್ ಷಡ್ಯಂತ್ರದ ಹಿಂದೆ ಮೋದಿ ಕೈವಾಡ

January 16, 2019

ಮಡಿಕೇರಿ: ಪ್ರಧಾನಿ ಮೋದಿಗೆ ಅಭದ್ರತೆ ಕಾಡುತ್ತಿರುವುದರಿಂದಾಗಿಯೇ ಕರ್ನಾಟಕದಲ್ಲಿ ಬಿಜೆಪಿ ಬೇರೆ ಪಕ್ಷಗಳ ಶಾಸಕರನ್ನು ಸೆಳೆ ಯುವ ಕುತಂತ್ರ ರೂಪಿಸಿದ್ದು, ಈ ಷಡ್ಯಂತ್ರದ ಹಿಂದೆ ಮೋದಿ ಕೈವಾಡವಿದೆ ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ ಎಂ.ಸಿ. ನಾಣಯ್ಯ ಆರೋಪಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಸಿ. ನಾಣಯ್ಯ, ಗೋರೆಗಾಂವ್‍ನಲ್ಲಿ ಬಿಜೆಪಿ ಶಾಸಕರನ್ನು ಸೆರೆ ಮನೆಯಲ್ಲಿಟ್ಟಂತೆ ಕೂಡಿಟ್ಟಿರುವ ವಿದ್ಯಾಮಾನಗಳು, ಬೇರೆ ಪಕ್ಷಗಳಿಂದ ಶಾಸಕರನ್ನು ಖರೀದಿಸುತ್ತಿರುವ ಬೆಳವಣಿಗೆಗಳು ಪ್ರಧಾನಿಗೆ ತಿಳಿದಿ ಲ್ಲವೇ. ಈ ಎಲ್ಲಾ ರಾಜಕೀಯ ಪ್ರಧಾನಿಗೆ ಸ್ಪಷ್ಟವಾಗಿ ತಿಳಿದಿದ್ದರೂ ಲೋಕಸಭಾ ಚುನಾವಣೆ ಯನ್ನು ದೃಷ್ಟಿಯಲ್ಲಿರಿಸಿಕೊಂಡು ದಕ್ಷಿಣ ಭಾರತದಲ್ಲಿ ತನ್ನ ವರ್ಚಸ್ಸು ಕಾಪಾಡಲು ಕರ್ನಾಟಕದ ಸಮ್ಮಿಶ್ರ ಸರ್ಕಾರದ ಅತಂತ್ರಕ್ಕೆ ಮೋದಿ ಸಂಚು ರೂಪಿಸಿದ್ದಾರೆ. ಮುಂದಿನ ಚುನಾವಣೆಯ ನಂತರ ತಾನು ಪ್ರಧಾನ ಮಂತ್ರಿಯಾಗಲಾರೆನೋ ಎಂಬ ಅಭದ್ರತೆ ಯಿಂದ ನಲುಗಿರುವ ಮೋದಿ, ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅತಂತ್ರ ಗೊಳಿಸಲು ಮುಂದಾಗಿದ್ದಾರೆ ಎಂದು ನಾಣಯ್ಯ ದೂರಿದರು.

ಕೇವಲ 6 ತಿಂಗಳು ಕಳೆದಿರುವ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಅಭದ್ರಗೊಳಿಸುವ ತಂತ್ರಗಾರಿ ಕೆಯಿಂದಾಗಿ ತಾನು ವಿಶ್ವನಾಯಕರಲ್ಲೊಬ್ಬ ಎಂದು ನಂಬಿರುವ ಮೋದಿಯ ವರ್ಚಸ್ಸು ಜಗತ್ತಿ ನಾದ್ಯಂತ ಕುಗ್ಗಲಿದೆ. ವಂಶಪಾರಂ ಪರ್ಯ ರಾಜಕೀಯ ಎಂದು ಕಾಂಗ್ರೆಸ್ಸಿಗರನ್ನು ಟೀಕಿಸುತ್ತಿದ್ದ ಮೋದಿ ಇದೀಗ ಸರ್ವಾ ಧಿಕಾರದ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಅಧಿಕಾರಕ್ಕೆ ಬಂದ 1 ತಿಂಗಳಲ್ಲಿಯೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರೈತರ 7 ಸಾವಿರ ಕೋಟಿ ಸಾಲಮನ್ನಾ ಮಾಡಿದಾಗ ಮೌನವಾಗಿದ್ದ ಮೋದಿ ಕರ್ನಾಟಕದಲ್ಲಿ ಸಾಲ ಮನ್ನಾವಾದಾಗ ಅದನ್ನು ಲಾಲಿಪಾಪ್ ಎಂದು ಕರೆದರು. ಹಾಗಿದ್ದರೆ ಉತ್ತರ ಪ್ರದೇಶದಲ್ಲಿನ ಸಾಲ ಮನ್ನಾ ಮೋದಿಯ ಲಾಲಿಪಾಪ್ ಎಂದು ಹೇಳಬಹುದೇ ಎಂದು ಎಂ.ಸಿ.ನಾಣಯ್ಯ ಪ್ರಶ್ನಿಸಿದರು.

Translate »