ಜೆಡಿಎಸ್‍ನೊಂದಿಗೆ ಸರ್ಕಾರ ರಚಿಸಬಾರದಿತ್ತು
ಕೊಡಗು

ಜೆಡಿಎಸ್‍ನೊಂದಿಗೆ ಸರ್ಕಾರ ರಚಿಸಬಾರದಿತ್ತು

January 16, 2019

ಮಡಿಕೇರಿ: ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳು ಅಸಹ್ಯ ಹುಟ್ಟಿಸುವಂತಿದೆ. ಇಂದಿನ ರಾಜಕಾರಣಿಗಳ ಅಧಿಕಾರದ ಆಸೆ ಖಂಡಿತ ರಾಜಕೀಯ ರಂಗಕ್ಕೆ ಮಾದರಿಯಾಗಲಾರದು ಎಂದು ಪ್ರತಿಕ್ರಿಯಿಸಿರುವ ವಿಧಾನ ಪರಿ ಷತ್ ಮಾಜಿ ಸದಸ್ಯ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ಎ. ಹಸನಬ್ಬ, ಜೆಡಿಎಸ್ ಜತೆ ಕಾಂಗ್ರೆಸ್ ಮೈತ್ರಿ ಸರಕಾರ ರಚಿಸಬಾರದಿತ್ತು ಎಂದು ಹೇಳಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಬಿ.ಎ. ಹಸನಬ್ಬ, ನಿರೀಕ್ಷಿತ ಸ್ಥಾನಗಳು ಬಾರದಿದ್ದಾಗ ವಿಪಕ್ಷದಲ್ಲಿಯೇ ಇರುವುದು ಸೂಕ್ತ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮನಸ್ಸಿನ ಅಭಿಪ್ರಾಯಕ್ಕೆ ಸ್ಪಂದಿಸದೇ ಜೆಡಿಎಸ್ ಜತೆ ಸೇರಿ ಕಾಂಗ್ರೆಸ್ ಅಧಿಕಾರಕ್ಕೆ ಕೈಜೋಡಿಸಿದ್ದೇ ತಪ್ಪು. ಕುಮಾರಸ್ವಾಮಿಗೆ ಕಾಂಗ್ರೆಸ್ ಶರಣಾಗಿದ್ದು ಕಾಂಗ್ರೆಸ್‍ನ ನೈಜ ಕಾರ್ಯಕರ್ತನಿಗೆ ನೋವಾಗಿದೆ ಎಂದರಲ್ಲದೇ, ಈಗಲೂ ಅಷ್ಟೇ, ಬಿಜೆಪಿ ಶಾಸಕರನ್ನು ಆಪರೇಷನ್ ಮಾಡಿ ಕಾಂಗ್ರೆಸ್‍ನತ್ತ ಸೆಳೆಯುವ ಪ್ರಯತ್ನಗಳು ನಡೆದರೂ ಸರಿಯಲ್ಲ. ಕಾಂಗ್ರೆಸ್ ಪಕ್ಷದ ಸ್ವಚ್ಚತೆಯನ್ನು ಗಮನದಲ್ಲಿರಿಸಬೇಕೇ ವಿನಾ ಅಧಿ ಕಾರಕ್ಕಾಗಿ ಕಾಂಗ್ರೆಸ್‍ಗೆ ಬರುವವರನ್ನು ಕರೆತಂದು ಕಾಂಗ್ರೆಸ್ ಮಲಿನ ಮಾಡಬಾರದು ಎಂದರು.

ಸದ್ಯದ ರಾಜಕೀಯ ಬೆಳವಣಿಗೆಗಳಿಂದಾಗಿ ನೈಜ ರಾಜಕಾರಣಿ ರಸ್ತೆಯಲ್ಲಿ ಕಿವಿಮುಚ್ಚಿಕೊಂಡು ತೆರಳಬೇಕಾದ ಹೀನಾಯ ಸ್ಥಿತಿಯಿದೆ. ಜನರಿಗೆ ರಾಜಕಾರಣಿ ಎಂದರೆ ಅಸಹ್ಯ ಮೂಡುವಂತಾ ಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಭಾರತದ ಪ್ರಜಾಪ್ರಭುತ್ವ ವಿಶ್ವಕ್ಕೇ ಮಾದರಿಯಾ ಗಿದೆ. ಹೀಗಿರುವಾಗ ಅಧಿಕಾರಕ್ಕಾಗಿ ಆಪರೇಷನ್ ನಡೆಸಿ ಬೇರೆ ಪಕ್ಷಗಳಿಂದ ಶಾಸಕರನ್ನು ಖರೀ ದಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟು ಸರಿ ಎಂದು ಪ್ರಶ್ನಿಸಿದ ಹಸನಬ್ಬ, ಸಂವಿಧಾ ನಕ್ಕೆ ತಿದ್ದುಪಡಿ ತಂದು ಪಕ್ಷಾಂತರ ಮಾಡಿದವರು 5 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಕಾನೂನು ರೂಪಿಸಬೇಕು. ಇಲ್ಲದಿದ್ದಲ್ಲಿ ರಾಜಕಾರಣಿಯಂತೆ ಭಾರತದ ಪ್ರಜಾಪ್ರಭುತ್ವವೂ ಮೌಲ್ಯ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು.

Translate »