ವಿರಾಜಪೇಟೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ
ಕೊಡಗು

ವಿರಾಜಪೇಟೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಭಟನೆ

January 18, 2019

ವಿರಾಜಪೇಟೆ: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಚುನಾಯಿತ ಶಾಸಕರಿಗೆ ಹಣದ ಆಮಿಷ ತೋರಿಸಿ ಮೈತ್ರಿ ಸರ್ಕಾ ರವನ್ನು ಅಧಿಕಾರದಿಂದ ಇಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ವಿರಾಜ ಪೇಟೆ ತಾಲೂಕು ಕಾಂಗ್ರೆಸ್ ಸಮಿತಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿ ತಹಶಿಲ್ದಾರ್ ಆರ್.ಗೋವಿಂದ ರಾಜ್ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಮೈತ್ರಿ ಸರಕಾರದ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಖರೀದಿ ಮಾಡಿ ಮೈತ್ರಿ ಸರಕಾರವನ್ನು ಬುಡಮೇಲು ಮಾಡಲು ಹೊರಟಿದ್ದ ಬಿಜೆ ಪಿಯ ಅಮಿತ್ ಶಾ ಮತ್ತು ಯಡಿಯೂ ರಪ್ಪ ಅವರು ಅಧಿಕಾರದ ಆಸೆಯಿಂದ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆಂದು ಕಾಂಗ್ರೆಸ್ ಮುಖಂಡರು ದೂರಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಧರ್ಮಜ್ ಉತ್ತಪ್ಪ, ವಿರಾಜ ಪೇಟೆಯ ಅಬ್ದುಲ್ ಸಲಾಂ, ಕಾನೂನು ಸಲಹೆಗಾರ ಡಿ.ಸಿ.ಧ್ರ್ರುವಕುಮಾರ್, ಪ.ಜಾತಿ ಪಂಗಡದ ಅಧ್ಯಕ್ಷ ವಿ.ಕೆ.ಸತೀಶ್ ಕುಮಾರ್, ನಗರ ಅಧ್ಯಕ್ಷ ಜಿ.ಜಿ.ಮೋಹನ್, ಮುಖಂಡ ರಾದ ಎಂ.ಎಸ್.ಪೂವಯ್ಯ, ಬೆಲ್ಲು ಬೋಪಯ್ಯ, ಕಾಂಗ್ರೆಸ್ ಸೇವಾದಳದ ಚಿಲ್ಲವಂಡ ಕಾವೇ ರಪ್ಪ, ಶರಣು ನಂಜಪ್ಪ, ಮಹಿಳಾ ಘಟಕದ ವಿನಿತ ಕಾವೆರಮ್ಮ, ಆರ್‍ಎಂಸಿ ಸದಸ್ಯ ಎಂ. ಬೋಪಣ್ಣ, ಪಪಂ ಸದಸ್ಯ ಮಹ್ಮದ್ ರಫಿ, ಮಾಜಿ ಸದಸ್ಯೆ ಶಿಭಾ ಹಾಗೂ ಕಾಂಗ್ರೆಸ್ ಕಾರ್ಯಕರ್ತರುಗಳು ಭಾಗವಹಿಸಿದ್ದರು.

Translate »