ಸುಂಟಿಕೊಪ್ಪ: ರಾಷ್ಟ್ರೀಯ ಹೆದ್ದಾರಿ ಬದಿಯ ಮೋರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಕೊಡಗರ ಹಳ್ಳಿ ಸಮೀಪ ನಡೆದಿದೆ.
ಗರಗಂದೂರಿನ ಚಾಮುಂಡ್ವೇಶ್ವರಿ ಕಾಲೋನಿ ನಿವಾಸಿ ಶಿವನ್, ಗುಂಡುಗುಟ್ಟಿ ನಿವಾಸಿ ಪುನೀತ್(ಮುನ್ನ), ಸುಂಟಿಕೊಪ್ಪ ಪಂಪ್ ಹೌಸ್ ನಿವಾಸಿ ಮಣಿಕಂಠ ಗಾಯಗೊಂ ಡವರು. ಈ ಮೂವರು ಬೈಕಿನಲ್ಲಿ ಗುರು ವಾರ ಕುಶಾಲನಗರದಲ್ಲಿ ವಿವಾಹ ಸಮಾ ರಂಭಕ್ಕೆ ತೆರಳಿ ರಾತ್ರಿ 11.15ರ ಸಮ ಯದಲ್ಲಿ ಹಿಂದಿರುಗುತ್ತಿದ್ದರು.
ಈ ಸಂದರ್ಭ ಕೊಡಗರಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯ ಮೋರಿಗೆ ಬೈಕು ಡಿಕ್ಕಿ ಹೊಡೆದಿದ್ದು, ಪರಿಣಾಮ ಶಿವನ್ ಮತ್ತು ಪುನೀತ್(ಮುನ್ನ) ಅವರ ಕಾಲು ಮತ್ತು ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಮಂಗಳೂರು ಆಸ್ಪತ್ರೆಗೆ ಕರದೊಯ್ಯಲಾಗಿದೆ.ಇನ್ನೊಬ್ಬ ಹಿಂಬದಿ ಸವಾರ ಮಣಿಕಂಠ ಅವರಿಗೆ ಗಾಯಗಳಾಗಿ ಮಡಿಕೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಗೆ ಅತಿವೇಗವೇ ಕಾರಣವೆನ್ನಲಾಗುತ್ತಿದ್ದು, ಸುಂಟಿ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.