ವಿರಾಜಪೇಟೆಯಲ್ಲಿ ಬಿ.ಟಿ.ಪ್ರದೀಪ್ ಪುಣ್ಯ ಸ್ಮರಣೆ
ಕೊಡಗು

ವಿರಾಜಪೇಟೆಯಲ್ಲಿ ಬಿ.ಟಿ.ಪ್ರದೀಪ್ ಪುಣ್ಯ ಸ್ಮರಣೆ

January 18, 2019

ವಿರಾಜಪೇಟೆ: ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದ ಬಿ.ಟಿ.ಪ್ರದೀಪ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ವಿರಾಜಪೇಟೆಯಲ್ಲಿ ಅವರ ಅಭಿಮಾನಿ ಬಳಗದಿಂದ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ಹಂಚಲಾಯಿತು.

ಬಿ.ಟಿ.ಪ್ರದಿಪ್ ಅವರ ಅಭಿಮಾನಿಗಳು, ಪಟ್ಟಣ ಪಂಚಾಯಿತಿ ಸದಸ್ಯರಾದ ಪಿ.ರಂಜಿ ಪೂಣಚ್ಚ, ಡಿ.ಪಿ.ರಾಜೇಶ್, ಮಹ್ಮದ್ ರಫಿ ಅವರ ಮುಂದಾಳತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‍ನ ಅಬ್ದುಲ್ ಸಲಾಂ, ಜಿ.ಜಿ.ಮೋಹನ್, ಸಿ.ಬಿ.ರವಿ, ನರೇಂದ್ರ ಕಾಮತ್, ಎಜಾಜ್ ಅಹ್ಮದ್, ಪಟ್ಟಣ ಪಂಚಾಯಿತಿ ಸದಸ್ಯರಾದ ಎಂ.ದೇಚಮ್ಮ ಕಾಳಪ್ಪ, ಎಸ್.ಹೆಚ್.ಮತಿನ್, ಸಿ.ಕೆ.ಪೃಥ್ವಿನಾಥ್, ಫಸಿಹ ತಬಸುಂ, ಅಗಸ್ಟಿನ್ ಬೇನ್ನಿ ಮುಂತಾದವರು ಉಪಸ್ಥಿತರಿದ್ದರು.

Translate »