ಪತ್ರಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯ ತೊರೆಯುವ ಅಗತ್ಯವಿದೆ
ಕೊಡಗು

ಪತ್ರಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯ ತೊರೆಯುವ ಅಗತ್ಯವಿದೆ

January 18, 2019

ಗೋಣಿಕೊಪ್ಪಲು: ಪತ್ರಕರ್ತರು ಸೈದ್ಧಾಂತಿಕ ಭಿನ್ನಾಭಿಪ್ರಾಯ ಬಿಟ್ಟು ಸಾಂವಿ ಧಾನಿಕ ಭದ್ರತೆಗೆ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಚಿಕ್ಕಅಳು ವಾರು ಸ್ನಾತಕೋತ್ತರ ಕೇಂದ್ರದ ಉಪನ್ಯಾ ಸಕ ಜಮೀರ್ ಅಹಮ್ಮದ್ ಅಭಿಪ್ರಾಯಪಟ್ಟರು.
ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ ಸಭಾಂಗಣದಲ್ಲಿ ವಿರಾಜ ಪೇಟೆ ತಾಲೂಕು ಕಾರ್ಯನಿರತ ಪತ್ರಕ ರ್ತರ ಸಂಘದಿಂದ ಆಯೋಜಿಸಿದ್ದ ಸಂಘದ ಕಾರ್ಯಚಟುವಟಿಕೆ ಕಾರ್ಯಕ್ರಮದಲ್ಲಿ ಪತ್ರಕರ್ತರು ಸಾಮಾಜಿಕವಾಗಿ ಎದುರಿಸು ತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು.

ಪತ್ರಕರ್ತರುಗಳು ಅವರದೇ ಆದ ಭಿನ್ನಾ ಭಿಪ್ರಾಯದಿಂದ ಕಾನೂನು ಚೌಕಟ್ಟಿನಲ್ಲಿ ಅವರಿಗೆ ಬೇಕಾದ ಭದ್ರತೆಯನ್ನು ಪಡೆ ಯುವಲ್ಲಿ ವಿಫಲರಾಗುತ್ತಿದ್ದಾರೆ. ಪರಸ್ಪರ ಭಿನ್ನಾಭಿಪ್ರಾಯದಿಂದ ಸರ್ಕಾರದ ಸವ ಲತ್ತು ಪಡೆದುಕೊಳ್ಳಲು ಆಗುತ್ತಿಲ್ಲ. ಸಾಂವಿ ಧಾನಿಕವಾಗಿ ಪತ್ರಿಕಾರಂಗ ನಾಲ್ಕನೇ ಅಂಗ ಎಂಬ ಗೌರವ ಇದ್ದರೂ ಕೂಡ ಅದರಿಂದ ಕಾನೂನಾತ್ಮಕ ಭದ್ರತೆ ದೊರೆಯುತ್ತಿಲ್ಲ. ಸಾಮಾಜಿಕವಾಗಿ ರಕ್ಷಣೆ ಪಡೆದುಕೊಳ್ಳಲು ಪತ್ರಕರ್ತರ ನಡುವಿನ ಸೈದ್ಧಾಂತಿಕ ಭಿನ್ನಾ ಭಿಪ್ರಾಯವನ್ನು ಬಿಟ್ಟು ಸಾಂವಿಧಾನಿಕ ಭದ್ರ ತೆಗೆ ಹೋರಾಟ ನಡೆಸಬೇಕು ಎಂದು ಹೇಳಿ ದರು. ದೇಶಪ್ರೇಮ, ನಾಡು-ನುಡಿ ಪ್ರೇಮದ ಮೂಲಕ ಆರಂಭವಾದ ಮಾಧ್ಯಮಗಳು ಇಂದು ಬಂಡವಾಳಶಾಹಿ ಹಾಗೂ ಪ್ರಭು ತ್ವವಾದಿಗಳ ಹಿಡಿತದಲ್ಲಿದೆ. ಪ್ರಭುತ್ವವಾ ದಿಗಳನ್ನು ಎದುರಿಸಲು ಮಾಧ್ಯಮವನ್ನು ಪ್ರವೃತ್ತಿಯಾಗಿ ತೊಡಗಿಸಿಕೊಂಡಿರುವ ಪತ್ರಕರ್ತರಿಗೆ ಆರ್ಥಿಕ ಹಾಗೂ ಕಾನೂನು ಭದ್ರತೆಯ ಅವಶ್ಯಕತೆ ಇದೆ ಎಂದರು.

ಸರ್ಕಾರ ಮಾಧ್ಯಮದವರಿಗೆ ನೀಡುವ ಸವಲತ್ತು ಪಡೆದುಕೊಳ್ಳಲು ಉದ್ದೇಶಪೂ ರ್ವಕವಾಗಿ ನಾನಾ ನಿಯಮಗಳನ್ನು ರೂಪಿ ಸುತ್ತಿದೆ. ಜೀವವಿಮೆ ಪಡೆಯಲು ಕ್ರಿಮಿ ನಲ್ ಮೊಕದ್ದಮೆ ಇಲ್ಲದ ಪತ್ರಕರ್ತರಿಗೆ ಅವಕಾಶವಿದೆ. ಸಮಾಜದಲ್ಲಿ ನಡೆಯುತ್ತಿ ರುವ ಭ್ರಷ್ಟಾಚಾರದ ವಿರುದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಮಾನನಷ್ಟ ಮೊಕ ದ್ದಮೆಗಳು ಸಾಮಾನ್ಯ. ಇದರಿಂದಾಗಿ ಇಂತಹ ಸವಲತ್ತು ದೊರಕದ ರೀತಿಯಲ್ಲಿ ನಿಯಮ ಹೊರಡಿಸುತ್ತಿದೆ ಎಂದು ಆರೋಪಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಸವಿತಾರೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ಸದಸ್ಯ ರನ್ನು ಒಟ್ಟುಗೂಡಿಸಿಕೊಂಡು ಸಂಘವನ್ನು ಮುನ್ನಡೆಸುವ ಮೂಲಕ ಸಂಘಟಿತ ರಾಗಲು ಮುಂದಾಗಬೇಕು ಎಂದು ಸಲಹೆ ನಿಡಿದರು.

ರಾಷ್ಟ್ರೀಯ ಸಮಿತಿ ಸದಸ್ಯ ಎಸ್. ಎ. ಮುರುಳಿಧರ್, ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಗೂ ಜಿಲ್ಲಧ್ಯಕ್ಷೆ ಸವಿತಾರೈ ಅವರುಗಳನ್ನು ಸನ್ಮಾನಿಸಲಾಯಿತು.
ತಾಲೂಕು ಸಂಘದಿಂದ ಉತ್ತಮ ವರ ದಿಗೆ ವಾರ್ಷಿಕ ಪ್ರಶಸ್ತಿ ನೀಡಲು ದತ್ತಿನಿಧಿ ಸ್ಥಾಪಿಸಲು ಹಣ ನೀಡುವುದಾಗಿ ಕಾರ್ಯನಿ ರತ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಎ.ಮುರುಳಿಧರ್, ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ, ತಾಲೂಕು ಅಧ್ಯಕ್ಷ ಎಸ್. ಎಂ. ಚೆಂಗಪ್ಪ ಘೋಷಿಸಿದರು. ಈ ಸಂದರ್ಭ ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಬಿ. ಎನ್.ಪ್ರಕಾಶ್, ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್, ಕ್ಷೇಮಾಭಿವೃದ್ಧಿ ಸಮಿತಿ ಜಿಲಾ ್ಲಧ್ಯಕ್ಷ ಎಸ್.ಮಹೇಶ್ ಹಾಗೂ ಸೋಮ ವಾರಪೇಟೆ ತಾಲೂಕು ಅಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದರು. ಖಜಾಂಚಿ ರಾಜೇಶ್ ಪದ್ಮನಾಭ್ ಸ್ವಾಗತಿಸಿದರು. ಉಪಾಧ್ಯಕ್ಷ ಸುಬ್ರಮಣಿ ನಿರೂಪಿಸಿದರು. ಪ್ರ. ಕಾರ್ಯದರ್ಶಿ ರೆಜಿತ್‍ಕುಮಾರ್ ವಂದಿಸಿದರು.

Translate »