ಕೊಡಗು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ
ಕೊಡಗು

ಕೊಡಗು ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ

January 17, 2019

ವೀರಾಜಪೇಟೆ: ಕೊಡಗಿನಲ್ಲಿ ಇತ್ತೀಚೆಗೆ ನಡೆದ ಪ್ರಕೃತಿ ವಿಕೋಪದಿಂದ ಬೆಳೆ, ಆಸ್ತಿ ಮನೆಗಳನ್ನು ಕಳೆದುಕೊಂಡು ಐದು ತಿಂಗಳುಗಳು ಕಳೆದರೂ ಇದು ವರೆಗೆ ಸಂತ್ರಸ್ತರಿಗೆ ಪರಿಹಾರವನ್ನು ಒದ ಗಿಸದೆ ಇರುವುದು ಸರಕಾರದ ವೈಫಲ್ಯ ತೆಯನ್ನು ತೋರುತ್ತದೆ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹೇಳಿದರು.

ಅಖಿಲ ಕೊಡವ ಸಮಾಜದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಮಾತಂಡ ಮೊಣ್ಣಪ್ಪ, ಪ್ರಕೃತಿ ವಿಕೋಪ ನಡೆದ ಸಂದರ್ಭ ಜನರ ಕಷ್ಟಗಳಿಗೆ ಸ್ಪಂದಿಸಿದವರು ಆನಂ ತರದ ದಿನಗಳಲ್ಲಿ ಪರಿಹಾರ ಕಾರ್ಯಗಳು ಕುಂಟುತ್ತಾ ಸಾಗುತ್ತಿದೆ. ಕೇವಲ ಮನೆ ಕಳೆದುಕೊಂಡವರಿಗೆ ಮನೆಕಟ್ಟಿ ಕೊಡುವ ಕಾರ್ಯ ಪ್ರಗತಿಯಲ್ಲಿದ್ದು, ಆಸ್ತಿ ಪಾಸ್ತಿ, ಬೆಳೆಗಳನ್ನು ಕಳೆದುಕೊಂಡು ಬದುಕಲು ದಾರಿ ತೋಚದೇ ಕಂಗಾಲಾಗಿರುವ ಜನ ತೆಯ ಬಗೆ ಕರುಣೆ ತೋರುವವರೇ ಇಲ್ಲ ದಂತಾಗಿದೆ. ಕುಸಿದ ಭೂಮಿಯಲ್ಲಿ ಈಗಾ ಗಲೇ ಕಾಡು ಗಿಡ ಗಂಟಿಗಳು ಬೆಳೆದು ಮೇಲ್ನೋಟಕ್ಕೆ ಏನೂ ಮಾಡದಂತಾಗಿದೆ. ಕಂದಾಯ ಇಲಾಖಾಧಿಕಾರಿಗಳು ಇನ್ನೂ ಸರ್ವೆ ಕಾರ್ಯಗಳನ್ನೆ ಮಾಡುತ್ತಿರುವ ನಾಟ ಕದಲ್ಲಿದ್ದಾರೆ. ಅದರಿಂದ ಸರ್ಕಾರ ದಿಡ್ಡಳ್ಳಿ ವಿಚಾರದಲ್ಲಿ ಸ್ಪಂದಿಸಿದ ರೀತಿಯಲ್ಲಿ ಪ್ರಕೃತಿ ವಿಕೋಪದಲ್ಲಿ ತುತ್ತಾದವರಿಗೂ ಕೂಡಲೇ ಸ್ಪಂದಿಸಬೇಕೆಂದು ಆಗ್ರಹಿಸಿದರು.

ಸಮಾಜದ ಕಾರ್ಯಾಧ್ಯಕ್ಷ ಪ್ರೊ. ಇಟ್ಟಿರ ಬಿದ್ದಪ್ಪ ಮಾತನಾಡಿ, ಕೊಡಗಿಗೆ ಆದ ಪ್ರಕೃತಿ ವಿಕೋಪವನ್ನು ತಮಗಾದ ನೋವೆಂದು ಭಾವಿಸಿದ ಜನತೆ ಕರ್ನಾಟಕ ಸೇರಿದಂತೆ ದೇಶದ ಮೂಲೆ ಮೂಲೆಯಿಂದಲು ಲೆಕ್ಕ ವಿಲ್ಲದಷ್ಟು ಪರಿಹಾರ ಸಾಮಗ್ರಿಗಳು ಹರಿದು ಬಂದಿದೆ. ಸರ್ಕಾರ ಕೂಡ ಅನುದಾನ ನೀಡು ವುದಾಗಿ ಭರವಸೆ ನೀಡಿತ್ತು, ಆದರೆ ಈ ಎಲ್ಲ ಅನುದಾನಗಳು ಮತ್ತು ಸಾಮಗ್ರಿಗಳು ಏನಾ ಯಿತು ಎಲ್ಲಿಹೋಯಿತು ಎಂಬುವುದೇ ಯಕ್ಷ ಪ್ರಶ್ನೆಯಾಗಿದೇ ಎಂದರು.

ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಗಳ ಪರಿಹಾರ ನಿಧಿಗೆ ನೂರಕ್ಕೂ ಅಧಿಕ ಕೋಟಿ ಪರಿಹಾರದ ಹಣ ಬಂದಿದೆ ಹಾಗೂ ಕೇಂದ್ರ ಸರ್ಕಾರ ಈಗಾಗಲೇ ತನ್ನ ಪಾಲಿನ ರೂ.540 ಕೋಟಿ ಘೋಷಿಸಿದೆ. ಅದು ಕೂಡ ಜಿಲ್ಲಾಧಿಕಾರಿಗಳ ಪರಿಹಾರ ನಿಧಿಗೆ ಪ್ರತ್ಯೇಕ ಅನುದಾನ ಬಂದಿದೆ. ಆದರೂ ಸರ್ಕಾರ ಸಂತ್ರಸ್ತರ ನೋವಿಗೆ ಸ್ಪಂದಿಸು ತ್ತಿಲ್ಲವೆಂದರೆ ಇದು ಮಲತಾಯಿ ಧೋರ ಣೆಯಂತೆ ಕಾಣುತ್ತದೆ. ಸರ್ಕಾರ ಕೊಡ ಗಿನ ಜನತೆಯ ತಾಳ್ಮೆಯನ್ನು ಪರೀಕ್ಷಿಸದೇ ನಮ್ಮ ನೋವಿಗೆ ಕೂಡಲೆ ಸ್ಪಂದಿಸ ಬೇಕೆಂದು ಆಗ್ರಹಿಸಿದರು.

ಖಜಾಂಚಿ ಮಂಡೆಪಂಡ ಸುಗುಣ ಮುತ್ತಣ್ಣ ಮಾತನಾಡಿ, ಪರಿಹಾರ ಕಾರ್ಯದಲ್ಲಿ ಸರ ಕಾರ ವಿಳಂಬ ಧೋರಣೆಗೆ ಕಾರಣವೇ ನೆಂಬುದು ತಿಳಿದು ಬಂದಿಲ್ಲ. ಸಂತ್ರಸ್ಥರ ಪರಿಹಾರಕ್ಕಾಗಿ ಬಂದಿರುವಂತ ಟನ್ನುಗ ಟ್ಟಲೇ ಸಾಮಗ್ರಿಗಳು ಇನ್ನೂ ವಿತರಣೆ ಯಾಗದೆ ಹಾಗೆ ಇದೆ. ಜಿಲ್ಲಾಧಿಕಾರಿಗಳ ಪರಿಹಾರ ನಿಧಿಗೆ ಬಂದಿರುವ ಒಟ್ಟು ಅನು ದಾನದ ಮೊತ್ತ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಬಂದಿರುವ ಪರಿಹಾರ ಧನದ ಮೊತ್ತದಲ್ಲಿ ಕೊಡಗಿನ ಪಾಲೆಷ್ಟು, ಕೇಂದ್ರ ಸರ್ಕಾರ ಘೋಷಿಸಿದ 540 ಕೋಟಿ ಯಲ್ಲಿ ಹಂಚಿಕೆ ಕಾರ್ಯ ಹೇಗೆ ನಡೆ ಯುತ್ತಿದೆ. ಅದರಲ್ಲಿ ಜಿಲ್ಲೆಗೆ ಎಷ್ಟು ನೀಡ ಲಾಗುತ್ತಿದೆ ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಉಪಾದ್ಯಕ್ಷ ಅಜ್ಜಿಕುಟ್ಟಿರ ಎನ್.ಮಾದಯ್ಯ ಸುಬ್ರಮಣಿ, ಗೌ. ಕಾರ್ಯ ದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಜಂಟಿ ಕಾರ್ಯದರ್ಶಿ ನಂದೇಟಿರ ರಾಜಾ ಮಾದಪ್ಪ, ನಿರ್ದೇಶಕರುಗಳಾದ ಮೂವೇರ ರೇಖಾ ಪ್ರಕಾಶ್, ಚಾಮೇರ ದಿನೇಶ್ ಇತರರು ಉಪಸ್ಥಿತರಿದ್ದರು.

Translate »