ಏಕಮುಖ ಸಂಚಾರ ವಿರೋಧಿಸಿ ಗೋಣಿಕೊಪ್ಪ ಬಂದ್
ಕೊಡಗು

ಏಕಮುಖ ಸಂಚಾರ ವಿರೋಧಿಸಿ ಗೋಣಿಕೊಪ್ಪ ಬಂದ್

January 17, 2019

ಗೋಣಿಕೊಪ್ಪಲು: ಪಟ್ಟಣದ ಮುಖ್ಯ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಗೊಳಿಸಿರುವ ಏಕಮುಖ ಸಂಚಾರಕ್ಕೆ ವಿರೋಧ ವ್ಯಕ್ತಪಡಿಸಿ ಕೆಲ ವರ್ತಕರು ಕರೆದಿದ್ದ ಸ್ವಯಂ ಘೋಷಿತ ಬಂದ್ ಕರೆಗೆ ಉತ್ತಮ ಪ್ರತಿ ಕ್ರಿಯೆ ವ್ಯಕ್ತವಾಯಿತು.

ಪಟ್ಟಣದ 6-7 ವರ್ತಕರನ್ನು ಹೊರತು ಪಡಿಸಿ ಪಟ್ಟಣ ಸಂಪೂರ್ಣ ಬಂದ್ ಮಾಡ ಲಾಗಿತ್ತು. ಬೆಳಗ್ಗೆ 6 ರಿಂದ ಸಂಜೆ 6ರವರೆಗೂ ಅಂಗಡಿ-ಮುಂಗಟ್ಟು ಮುಚ್ಚಲಾಗಿತ್ತು.
ಹರಿಶ್ಚಂದ್ರಪುರದಿಂದ ಉಮಾಮಹೇ ಶ್ವರಿ ದೇವಾಲಯದವರೆಗೂ ಅಂಗಡಿ-ಮುಂಗಟ್ಟು ಮುಚ್ಚಲಾಗಿತ್ತು. ವಾಹನ, ಆಟೋ, ಖಾಸಗಿ ಬಸ್ ಸೇವೆ ಎಂದಿನಂತೆ ಸೇವೆ ನೀಡಿದ ಕಾರಣ ಸಾರ್ವಜನಿಕರಿಗೆ ತೊಂದರೆ ಉಂಟಾಗಲಿಲ್ಲ. ಆಟೋ ಚಾಲಕರು ಪ್ರತಿಭಟ ನೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದರು.

ವಿರೋಧ ವ್ಯಕ್ತಪಡಿಸಿದ ವರ್ತಕರುಗಳು ಗ್ರಾಪಂ ವಾಣಿಜ್ಯ ಕಟ್ಟಡದ ಎದುರು ಜಮಾ ಯಿಸಿ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂ ಡರು. ಬೆ.10 ಗಂಟೆ ವೇಳೆಗೆ ಜಮಾಯಿಸಿದ ವರ್ತಕರುಗಳು ಏಕಮುಖ ಸಂಚಾರ ದಿಂದ ವ್ಯಾಪಾರಕ್ಕೆ ಆಗುತ್ತಿರುವ ತೊಂದರೆ ಗಳನ್ನು ಪರಸ್ಪರ ಚರ್ಚಿಸಿದರು. ಇಂತಹ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿ ಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವಂತೆ ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರೀಜಾ ಅಚ್ಚು ತ್ತನ್, ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಜಮ್ಮಡ ಕರುಂಬಯ್ಯ, ಹಿರಿಯ ವರ್ತಕರು ಗಳಾದ ಗಿರೀಶ್ ಗಣಪತಿ, ಮಚ್ಚಮಾಡ ಅನೀಶ್ ಮಾದಪ್ಪ ಸೇರಿದಂತೆ ವರ್ತಕರು ಮಾತನಾಡಿ, ಏಕ ಮುಖ ಸಂಚಾರ ನಿಯಮ ಬದಲಾಯಿ ಸುವಂತೆ ಒತ್ತಾಯಿಸಿದರು. ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ ಸೇರಿದಂತೆ ಬೆರಳೆಣಿಕೆಯ ವರ್ತ ಕರು ಅಂಗಡಿ-ಮಳಿಗೆ ತೆರೆದು ತಟಸ್ಥ ನಿಲುವು ವ್ಯಕ್ತಪಡಿಸಿದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಡಿವೈ ಎಸ್‍ಪಿ ನಾಗಪ್ಪ ಪ್ರತಿಭಟನಾಕಾರರ ಮನವಿ ಆಲಿ ಸಿದರು. ಶೀಘ್ರದಲ್ಲಿ ಸಾರ್ವಜನಿಕ ಸಭೆ ಕರೆದು ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

Translate »