ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಯಶಸ್ವಿಗೆ ಡಿಸಿ ಸೂಚನೆ
ಹಾಸನ

ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಯಶಸ್ವಿಗೆ ಡಿಸಿ ಸೂಚನೆ

January 17, 2019

ಹಾಸನ: ಜಿಲ್ಲೆಯಾದ್ಯಂತ ಫೆ. 3 ರಂದು ನಡೆಯಲಿರುವ ಪಲ್ಸ್ ಪೋಲಿ ಯೋ ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಸಂಪೂರ್ಣ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಲ್ಸ್ ಪೋಲಿಯೋ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಪೋಲಿಯೋ ಮುಕ್ತ ಭಾರತದ ನಿರ್ಮಾಣದ ಉದ್ದೇಶ ಹೊಂದಿ ರುವ ಪಲ್ಸ್ ಪೋಲಿಯೋ ಕಾರ್ಯಕ್ರಮ ಒಂದು ದೇಶ ಕಟ್ಟುವ ಕೆಲಸವಿದ್ದಂತೆ. ಹಾಗಾಗಿ ಎಲ್ಲರೂ ಇದಕ್ಕೆ ಶ್ರಮಿಸಬೇಕು ಎಂದರು.
ಪೋಲಿಯೋ ಲಸಿಕೆಯನ್ನು ಸುರಕ್ಷಿತ ವಾಗಿರಿಸಿಕೊಳ್ಳಲು ಮೂರು ದಿನಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಚೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಾರ್ಯಕ್ರಮಕ್ಕೆ ಅಗತ್ಯವಿರುವ ವೈದ್ಯಾಧಿಕಾರಿಗಳು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರನ್ನು ಮೊದಲೇ ನೇಮಿಸಿ ಸೂಕ್ತ ತರಬೇತಿ ಮತ್ತು ಮಾರ್ಗ ದರ್ಶನ ನೀಡುವಂತೆ ಜಿಲ್ಲಾಧಿಕಾರಿಯ ವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಹಾಗೂ ಜಿಲ್ಲಾ ಆರ್.ಸಿ ಹೆಚ್. ಅಧಿಕಾರಿಗಳಿಗೆ ಸೂಚನೆ ನಿಡಿದರು.

5 ವರ್ಷದೊಳಗಿನ ಯಾವುದೇ ಮಕ್ಕಳು ಪೋಲಿಯೋ ಲಸಿಕೆ ಕಾರ್ಯ ಕ್ರಮದಿಂದ ದೂರ ಉಳಿಯಬಾರದು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣದಲ್ಲಿಯೂ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ರೋಹಿಣಿ ಸಿಂಧೂರಿ ಹೇಳಿದರು.

ಪಲ್ಸ್ ಪೋಲಿಯೋ ಕರ್ತವ್ಯದಲ್ಲಿರು ವವರಿಗೆ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿಗಳ ವತಿ ಯಿಂದ ಊಟದ ವ್ಯವಸ್ಥೆ ಮಾಡಬೇಕು, ಸಾರಿಗೆ ಸಂಸ್ಥೆ ವತಿಯಿಂದ ಅಗತ್ಯ ಪ್ರಮಾ ಣದ ವಾಹನಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಎಲ್ಲಾ ಅಂಗನವಾಡಿ ಹಾಗೂ ಶಾಲೆ ಗಳಲ್ಲಿ ಪೋಲಿಯೋ ಲಸಿಕೆ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಜಿಲ್ಲಾ ಆರ್.ಸಿ ಹೆಚ್. ಅಧಿಕಾರಿ ಡಾ. ಹೆಚ್.ಎಲ್.ಜನಾರ್ಧನ್ ಮಾತನಾಡಿ, 4,43,847 ಮನೆಗಳಿದ್ದು ಜಿಲ್ಲೆಯಲ್ಲಿ 18, 30,870 ಜನ ವಾಸಿಸುತ್ತಿದ್ದಾರೆ. ಅದರಲ್ಲಿ 1,27,699 ಐದು ವರ್ಷದೊಳಗಿನ ಮಕ್ಕ ಳಿದ್ದು ಅವರಿಗೆ ಪೋಲಿಯೋ ಲಸಿಕೆ ಹಾಕ ಬೇಕಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 872 ಪೋಲಿಯೋ ಲಸಿಕಾ ಬೂತ್‍ಗಳನ್ನು ಸ್ಥಾಪಿಸಲಾ ಗುವುದು 15 ಸಂಚಾರಿ ತಂಡಗಳು ಕಾರ್ಯ ನಿರ್ವಹಿಸಲಿವೆ. 3536 ಲಸಿಕೆ ಹಾಕುವ ವರು. 176 ಮೇಲ್ವಿಚಾರಕರು 59 ಯೋಜನಾ ತಂಡಗಳು ಕರ್ತವ್ಯ ನಿರ್ವಹಿಸಲಿವೆ ಎಂದು ಅವರು ಹೇಳಿದರು.
ಇದೇ ರೀತಿ ವಲಸೆ, ಸಂಚಾರಿ ಮತ್ತು ಅಪಾಯಕಾರಿ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕುಟುಂಬಗಳು ಸೇರಿದಂತೆ ಒಟ್ಟು 1,213 ಸ್ಥಳಗಳನ್ನು ಗುರು ತಿಸಲಾಗಿದೆ. ಇದರಲ್ಲಿ 29,152 ಐದು ವರ್ಷದೊಳಗಿನ ಮಕ್ಕಳಿದ್ದಾರೆ. ಅವರೆ ಲ್ಲರಿಗೂ ಲಸಿಕೆ ಹಾಕುವ ವ್ಯವಸ್ಥಿತ ಯೋಜನೆ ರೂಪಿತವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪುಟ್ಟಸ್ವಾಮಿ ಮತ್ತು ನಗರಸಭೆ ಆಯುಕ್ತರಾದ ಬಿ.ಎ.ಪರ ಮೇಶ್ ಅವರು ಹಾಸನ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಸಿಕಾ ತಂಡ ಗಳಿಗೆ ಊಟೋಪಚಾರದ ಜವಾಬ್ದಾರಿ ಹಾಗೂ ಸ್ಥಳೀಯವಾಗಿ ಅಗತ್ಯವಿರುವ ನೆರವನ್ನು ಒದಗಿಸುವುದಾಗಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವೈಶಾಲಿ, ಡಿವೈ ಎಸ್‍ಪಿ ಪುಟ್ಟಸ್ವಾಮಿ ಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಶಂಕರ್, ಉಪವಿಭಾ ಗಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಸತೀಶ್ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Translate »