ಸರ್ಕಾರಿ ಕಾಲೇಜಿನಲ್ಲಿ ಕುವೆಂಪು ಜನ್ಮ ದಿನಾಚರಣೆ
ಹಾಸನ

ಸರ್ಕಾರಿ ಕಾಲೇಜಿನಲ್ಲಿ ಕುವೆಂಪು ಜನ್ಮ ದಿನಾಚರಣೆ

January 17, 2019

ಹಾಸನ: ವಿಶ್ವಮಾನವ ಕುವೆಂಪು ಯುಗದ ಪ್ರಜ್ಞೆ ಹೊಂದಿ ದಂತಹ ಕನ್ನಡದ ಮೇರು ಕವಿ ಎಂದು ಸಾಂಸ್ಕøತಿಕ ಚಿಂತಕರು ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಹಂಪನಹಳ್ಳಿ ತಿಮ್ಮೇಗೌಡ ಹೇಳಿದರು.

ನಗರದ ಸರ್ಕಾರಿ ಕಲಾ, ವಾಣಿಜ್ಯ ಹಾಗೂ ಸ್ನಾತಕೋತ್ತರ ಕಾಲೇಜಿನ (ಸ್ವಾಯತ್ತ) ಸಭಾಂಗಣದಲ್ಲಿ ಗುರುವಾರ ಕನ್ನಡ ವಿಭಾಗದ ವತಿಯಿಂದ ಆಯೋ ಜಿಸಿದ್ದ ವಿಶ್ವಮಾನವ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಕೇವಲ ಸಾಹಿತಿಯಲ್ಲ, ಒಬ್ಬ ರಾಜಕೀಯ ಚಿಂತಕ, ಸಾಮಾಜಿಕ ಚಿಂತಕ, ವೈಚಾರಿಕ ಚಿಂತಕ, ತತ್ವಜ್ಞಾನಿ, ಬಹು ಮುಖ ಪ್ರತಿಭೆ ಎಂದ ಅವರು, ಮಕ್ಕಳ ಸಾಹಿತ್ಯದಿಂದ ಪ್ರಾರಂಭಿಸಿ ಮಹಾ ಕಾವ್ಯದ ವರೆಗೂ ತಮ್ಮದೇ ಆದ ಛಾಪು ಕನ್ನಡ ಸಾಹಿತ್ಯ ದಲ್ಲಿ ಮೂಡಿಸಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ಕನ್ನಡ ಭಾಷೆಯ ಸ್ಥಾನಮಾನ ವನ್ನು ಕುರಿತು ಅವರು ಮಾತನಾಡುತ್ತಾ, ಇದಕ್ಕೆ ಸಂದಂತಹ ಕುವೆಂಪುರವರ ಹೋರಾಟದ ಕೂಗು ಎಂದಿಗೂ ನೆನಪಿಸಿ ಕೊಳ್ಳುವಂತದ್ದು ಹಾಗೂ ಅವರು ಸಾಹಿತ್ಯ ದಲ್ಲಿ ಶೋಷಿತ ಸಮಾಜವನ್ನು ಶೋಷಣೆ ಯಿಂದ ಮುಕ್ತಗೊಳಿಸುವುದರ ಹಾಗೂ ಸಮಾನತೆಯನ್ನು ತರುವುದರೆಡೆಗೆ ಹೆಚ್ಚು ಒತ್ತು ನೀಡಿದ್ದಾರೆ. ಸರ್ವರಿಗೂ ಸಮ ಬಾಳು, ಸರ್ವರಿಗೂ ಸಮಪಾಲು ಎಂಬ ಧ್ವನಿ ಅವರದಾಗಿತ್ತು. ನಿರಂಕುಶ ಮತಿ ಗಳಾಗಿ, ನಿಮ್ಮ ಮತಿಗೆ ಅಂಕುಶಗಳನ್ನಿ ಡಬೇಡಿ, ಸ್ವತಂತ್ರ ಆಲೋಚನೆಗಳನ್ನು ಮಾಡಿ ಎಂದು ಕುವೆಂಪು ವಿದ್ಯಾರ್ಥಿ ಗಳಿಗೆ ನೀಡಿದ ಕರೆಯನ್ನು ಸ್ಮರಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೊಳೆನರಸೀಪುರದ ಗೃಹ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಪಿ.ಭಾರತಿ ಅವರು ಕುವೆಂಪು ಸಾಹಿತ್ಯ ದಲ್ಲಿ ಮಹಿಳಾ ಸ್ಥಾನಮಾನವನ್ನು ಕುರಿತು ಮಾತನಾಡುತ್ತಾ, ಮಹಿಳೆಯನ್ನು ಮನೆ ಮನೆಯ ತಪಸ್ವಿನಿ ಎಂದು ಕರೆದ ಕುವೆಂಪು ಅವರು ತಮ್ಮ ಕೃತಿಗಳಾದ ಪ್ರೇಮ ಕಾಶ್ಮೀರ, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ಶ್ರೀ ರಾಮಾಯಣ ದರ್ಶನಂ ಕೃತಿಗಳಲ್ಲಿ ಮಹಿಳೆಯ ಮಹತ್ವದ ಮೇಲೆ ಬೆಳಕು ಚೆಲ್ಲಿದ ಕೀರ್ತಿ ಕುವೆಂಪು ಅವರದ್ದು ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿ. ರಾಜಪ್ಪ ಅಧ್ಯಕ್ಷತೆ ವಹಿಸಿದ್ದು, ಕಾಲೇಜಿನ ಡೀನ್ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ವೈ.ಪಿ.ಮಲ್ಲೇಗೌಡ, ಪರೀ ಕ್ಷಾಂಗದÀ ನಿಯಂತ್ರಕರಾದ ಡಾ.ಸುನಿತಾ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಪಿ. ಪುಟ್ಟರಾಜು ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾಲೇಜಿನ ಅಧ್ಯಾಪಕರು ಹಾಗೂ ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ಉಪನ್ಯಾಸಕಿ ಬನಮಾ ಗುರುದತ್ ಅವರು ಪ್ರಾರ್ಥಿಸಿ, ವಿದ್ಯಾರ್ಥಿ ಸಂಜಯ್ ಕಾರ್ಯಕ್ರಮ ವನ್ನು ನಿರೂಪಿಸಿದರು.

Translate »