ವಿಜೃಂಭಣೆಯ ಗುತ್ತಿನಕೆರೆ ರಂಗನಾಥಸ್ವಾಮಿ ರಥೋತ್ಸವ
ಹಾಸನ

ವಿಜೃಂಭಣೆಯ ಗುತ್ತಿನಕೆರೆ ರಂಗನಾಥಸ್ವಾಮಿ ರಥೋತ್ಸವ

January 17, 2019

ಅರಸೀಕೆರೆ: ತಾಲೂಕಿನ ಶ್ರೀ ಕ್ಷೇತ್ರ ಗುತ್ತಿನಕೆರೆ ರಂಗನಾಥ ಸ್ವಾಮಿಯ ಮಹಾರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಗುರುವಾರ ನೆರವೇರಿತು.

ಪ್ರಾತಃ ಕಾಲದಿಂದಲೇ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪ್ರಾರಂಭ ಗೊಂಡ ಕಾರ್ಯಕ್ರಮಗಳು ಭಕ್ತಾದಿಗಳ ಕಣ್ಮನ ಸೂರೆಗೊಂಡಿತು. ಸಂಕ್ರಾಂತಿ ದಿನದಿಂದ ಮೂರು ದಿನಗಳ ಕಾಲ ನಡೆದ ಮಹಾ ರಥೋತ್ಸವ ಕಾರ್ಯಕ್ರಮಗಳು, ಕಲ್ಯಾಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಗುರುವಾರ ಅಂತಿಮವಾಗಿ ತೆರೆ ಎಳೆಯಲಾಯಿತು.
ಪದ್ಮಾವತಿ ಸಮೇತರಾಗಿ ರಥದಲ್ಲಿ ವಿಜೃಂ ಭಿಸಿದ ರಂಗನಾಥ ಸ್ವಾಮಿಯನ್ನು ಕಣ್ತುಂಬಿ ಕೊಂಡ ಭಕ್ತಾದಿಗಳು ಗೋವಿಂದಾ ಗೋವಿಂದಾ ಎಂದು ನಾಮ ಸ್ಮರಣೆ ಮಾಡುತ್ತಾ ರಥದೊಂದಿಗೆ ಸಾಗಿದರು. ಜಾತ್ರೆಯಲ್ಲಿ ಹಾನರಹಳ್ಳಿ ಕೋಡಮ್ಮ ದೇವಿ, ಎಳವಾರೆ ಹುಚ್ಚಮ್ಮ ದೇವಿ ಸುತ್ತ ಮುತ್ತಲಿನ ಗ್ರಾಮಗಳ ದೇವತೆಗಳು ಉತ್ಸವ ದಲ್ಲಿ ಭಾಗವಹಿಸಿ ಜಾತ್ರೆಗೆ ಮೆರಗನ್ನು ತಂದವು.

ಬಂದಂತಹ ಭಕ್ತಾದಿಗಳಿಗೆ ಅನ್ನ ದಾಸೋಹ, ಆಯಾ ಕಟ್ಟಿನ ಸ್ಥಳಗಳಲ್ಲಿ ಭಕ್ತ ವೃಂದದಿಂದ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಶಾಸಕ ಕೆ.ಎಂ.ಶಿವ ಲಿಂಗೇಗೌಡ, ತಹಸೀಲ್ದಾರ್ ಎನ್.ವಿ ನಟೇಶ್, ಹಾರನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್, ತಾ.ಪಂ ಮಾಜಿ ಅಧ್ಯಕ್ಷ ಶಿವ ಮೂರ್ತಪ್ಪ, ಮುಖಂಡರಾದ ಧರ್ಮೇಶ್, ಧರ್ಮರಾಜ್, ಉದ್ಯಮಿ ಕೆ.ಪಿ.ಎಸ್ ವಿಶ್ವ ನಾಥ್, ಸಂಸ್ಕಾರ ಭಾರತೀಯ ಕಾಮೇಶ್ವರಿ ಭಟ್,ವಿಷ್ಣು ಭಟ್,ಸುಧಾ, ಮೋಹನ್ ಕುಮಾರ್ ಇನ್ನಿತರರು ಭಾಗವಹಿಸಿದ್ದರು.

Translate »