ಇದೇ ರೀತಿ ಬಿಜೆಪಿ ರಾಜಕೀಯ ಮಾಡಿದರೇ ಚುನಾವಣೆಯಲ್ಲಿ ಜನತೆಯಿಂದ ತಕ್ಕ ಪಾಠ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಕೆ
ಹಾಸನ

ಇದೇ ರೀತಿ ಬಿಜೆಪಿ ರಾಜಕೀಯ ಮಾಡಿದರೇ ಚುನಾವಣೆಯಲ್ಲಿ ಜನತೆಯಿಂದ ತಕ್ಕ ಪಾಠ ಸಚಿವ ಹೆಚ್.ಡಿ. ರೇವಣ್ಣ ಎಚ್ಚರಿಕೆ

January 17, 2019

ಹಾಸನ: ಇಂತಹ ರಾಜಕೀಯವನ್ನು ಬಿಜೆಪಿ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಎಚ್ಚರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ‘ಆಪರೇಷನ್ ಕಮಲ’ ಮಾಡಿಲ್ಲ ಎಂದು ಹೇಳುತ್ತಿರುವ ಮಾಜಿ ಸಿಎಂ ಯಡಿಯೂರಪ್ಪ ಎಲ್ಲಾ ಶಾಸಕರನ್ನು ಯಾಕೆ ಕರ್ಕೊಂಡು ಹೋದರು? ಎಲ್ಲರನ್ನೂ ರೂಂನಲ್ಲಿರಿ ಸಿಕೊಂಡು ಮಜಾ ಮಾಡೋಕಾ ಶಾಸಕರಿರೋದು? ಬಿಜೆಪಿ ಅವರಿಗೆ ಮಾನ ಮರ್ಯಾದೆ ಇದ್ದರೆ ಮೊದಲು ರಾಜ್ಯದಲ್ಲಿ ತಲೆದೋರಿರುವ ಬರದ ಬಗ್ಗೆ ಚಿಂತನೆ ಮಾಡಲಿ ಎಂದು ಹರಿಹಾಯ್ದ ಅವರು, ನಾವು ಈಗಾಗಲೇ ದೇವೇಗೌಡರೊಟ್ಟಿಗೆ ನಿಯೋಗ ತೆರಳಿ ಬರದ ಬಗ್ಗೆ ಪ್ರಧಾನಿಯವರಿಗೆ ಮನವಿ ಮಾಡಿದ್ದೇವೆ ಎಂದರು.

ಬಿಜೆಪಿಯವರು ಏನೇ ಪ್ರಯತ್ನ ಮಾಡಿದರೂ ರಾಜ್ಯ ಸರಕಾರಕ್ಕೆ ಯಾವುದೇ ಧಕ್ಕೆ ಇಲ್ಲ. ಸಮ್ಮಿಶ್ರ ಸರ್ಕಾರ ಸುಭದ್ರ ವಾಗಿದೆ. ಇನ್ನಷ್ಟು ದಿನ ಐಷಾರಾಮಿ ಹೋಟೆಲ್‍ನಲ್ಲಿದ್ದು ರಾಜ ಕೀಯ ಮಾಡಲಿ ಎಂದು ಗೇಲಿ ಮಾಡಿದರು. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಬದ್ಧತೆ ಇದ್ದರೆ ಕೇಂದ್ರದಿಂದ ಅನುದಾನ ತಂದು ರಾಜ್ಯದ ಹಿತ ಕಾಯುವ ಕೆಲಸ ಮಾಡಲಿ. ಅದನ್ನು ಬಿಟ್ಟು ಈ ರೀತಿಯ ರಾಜಕೀಯ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಇತರರಿಗೆ ಈಗ ನೆನ ಪಾಗಿದೆ ಎಂಬ ಬಿಜೆಪಿ ಟೀಕೆಗೆ ಗರಂ ಆದ ರೇವಣ್ಣ, ಅವರಿಗೆ ಮಾನ ಮರ್ಯಾದೆ ಇದ್ದರೆ ಕಡತ ತೆಗೆದು ನೋಡಲಿ. ದೇವೇಗೌಡರು, ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರು ಬರಕ್ಕೆ ಸಂಬಂಧಿಸಿದಂತೆ ಎಷ್ಟು ಬಾರಿ ಕೇಂದ್ರಕ್ಕೆ ಹೋಗಿ ಮನವಿ ಮಾಡಿದ್ದೇವೆ ಎಂಬುದನ್ನು ಈ ಕಡತದಿಂದ ಖಚಿತ ಪಡಿಸಿಕೊಳ್ಳಲಿ. ಹೋಟೆಲ್‍ನಲ್ಲಿ ಕೂತು ಮಜಾ ಮಾಡೋದಲ್ಲ ಎಂದು ಕಾಲೆಳೆದರು.

ಜಿಲ್ಲೆಯ ಇಲಾಖೆ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿ ರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚೆ ಮಾಡಿ ಸೂಚಿಸಿದ್ದೇನೆ.

Translate »