ಕನ್ನಡ ಬಳಕೆ ಇಲ್ಲದ ಬ್ಯಾಂಕ್‍ನಲ್ಲಿ ಖಾತೆ ಬೇಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸಿದ್ದರಾಮಯ್ಯ
ಹಾಸನ

ಕನ್ನಡ ಬಳಕೆ ಇಲ್ಲದ ಬ್ಯಾಂಕ್‍ನಲ್ಲಿ ಖಾತೆ ಬೇಡ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸಿದ್ದರಾಮಯ್ಯ

January 17, 2019

ಹಾಸನ: ಯಾವ ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಇರುವುದಿಲ್ಲವೋ ಅಂತಹ ಬ್ಯಾಂಕಿನಿಂದ ಖಾತೆ ನಿಷೇಧಿಸಿ, ಕನ್ನಡ ಬಳಕೆ ಮಾಡುವ ಬ್ಯಾಂಕುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಕ್ಕ ಪಾಠ ಕಲಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮನವಿ ಮಾಡಿದರು.

ನಗರದ ಹಿಮ್ಸ್ ನಿರ್ದೇಶಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾವ ಬ್ಯಾಂಕಿನಲ್ಲಿ ಕನ್ನಡದಲ್ಲಿ ವ್ಯವಹಾರ ಮಾಡದೆ ಗ್ರಾಹಕರಿಗೆ ಸ್ಪಂದಿಸುವುದಿಲ್ಲವೋ ಅಂತಹ ಬ್ಯಾಂಕಿನ ಖಾತೆಯನ್ನು ನಿಷೇಧಿಸಿ, ಕನ್ನಡ ವ್ಯವಹಾ ರದ ಬ್ಯಾಂಕುಗಳಲ್ಲಿ ಗ್ರಾಹಕರು ವ್ಯವಹಾರ ಮಾಡುವ ಮೂಲಕ ಕನ್ನಡಕ್ಕೆ ಮಾನ್ಯತೆ ಕೊಡುವಂತೆ ಮನವಿ ಮಾಡಿದರು.

ರಾಜ್ಯ ಸರಕಾರ ಇಂಗ್ಲೀಷ್ ಭಾಷೆ ತರಲು ಹೊರಟಾಗ ಮೊದಲು ವಿರೋಧ ಮಾಡಲಾ ಗಿದ್ದು ಕನ್ನಡ ಪ್ರಾಧಿಕಾರ. ನೆಲದ ಭಾಷೆ ಮೊದಲು ಬರಬೇಕು. ನಂತರದಲ್ಲಿ ಉಳಿದ ಭಾಷೆಯಾಗಲಿ ಎಂದರು. ಖಾಸಗಿ ಶಾಲೆಗೆ ಬೇಕಾಬಿಟ್ಟಿ ಪರವಾ ನಗಿ ಕೊಡುವುದನ್ನು ಮೊದಲು ನಿಲ್ಲಿಸಲಿ. ಒಂದು ಭಾಷೆಯನ್ನಾಗಿ ಮಾತ್ರ ಆಂಗ್ಲ ಭಾಷೆ ಇರಬೇಕು. ಭಾಷೆ ನಾಶವಾದರೆ ಆ ಪ್ರದೇಶ ನಾಶವಾದಂತೆ. ಶಿಕ್ಷಣ ಎಂಬುದು ವೈಜ್ಞಾನಿಕವಾದುದು ಎಂಬುದು ಸತ್ಯ ಎಂದರು.

ಇಲ್ಲಿರುವ ಬ್ಯಾಂಕುಗಳಿಗೆ ಕನ್ನಡೇತರ ಅಧಿ ಕಾರಿಗಳು ಬರುತ್ತಿರುವುದು ರಾಜ್ಯದ ಎಲ್ಲಾ ಕಡೆ ಇರುವ ಸಮಸ್ಯೆ. 2014 ರಲ್ಲಿ ಇದ್ದ ಪಾಲಿಸಿ ಯನ್ನು ಮುಂದುವರೆಸಬೇಕು. ಕೇಂದ್ರ ಸರಕಾರ ಮಾಡಿರುವ ಆದೇಶದಿಂದ ಎಲ್ಲಾ ಸ್ಥಳೀಯ ಭಾಷೆಗಳಿಗೆ ಹೊಡೆತ ಬೀಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಇದರ ವಿರುದ್ಧವಾಗಿ ಕೇಂದ್ರ ಸರಕಾರಕ್ಕೆ ಮನವಿ ಜೊತೆಗೆ ಎರಡು ಬಾರಿ ನಿಯೋಗ ಮನವಿ ಕೊಡಲಾಗಿದ್ದರೂ ಇನ್ನೂ ಬದಲಾಗಿರುವುದಿಲ್ಲ ಎಂದರು. ಮುಂದೆ ನಡೆಯಲಿರುವ ಅಧಿವೇಶನದೊಳಗೆ ಅವರಿಗೂ ಮನವಿ ಕೊಟ್ಟು 2015ರಲ್ಲಿ ಮಾಡಿದ ಪಾಲಿಸಿಯನ್ನು ಬದಲಾಯಿಸಿಕೊಳ್ಳುವಂತೆ ಹೇಳಲಾಗುವುದು. ಸ್ಥಳೀಯ ಭಾಷೆ ಬಾರದವರು 6 ತಿಂಗಳ ಒಳಗೆ ಕಲಿಯಬೇಕು. ಕಲಿಯದಿದ್ದರೆ ಅಂತಹವರನ್ನು ವಾಪಸ್ ಕಳುಹಿಸುವ ಅವಕಾಶವಿದೆ ಎಂದು ಜಿಲ್ಲಾಡಳಿತಕ್ಕೆ ಸೂಚನೆ ಕೊಡಲಾಗಿದೆ ಎಂದರು.

ಕನ್ನಡ ಪ್ರಾಧಿಕಾರವು ಇಡೀ ರಾಜ್ಯಾದ್ಯಂತ 25 ಜಿಲ್ಲೆಗಳನ್ನು ಪರಿಶೀಲನೆಗೆ ಒಳಪಡಿಸಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲಿಸಲಾಗಿದೆ. ಬಹು ತೇಕ ಜಿಲ್ಲೆಗಳಲ್ಲಿ ಜಾಲತಾಣಗಳು ಬರಿ ಇಂಗ್ಲೀ ಷ್‍ನಲ್ಲಿ ಇತ್ತು ಎಂದರು. ಮೂರ್ನಾಲ್ಕು ಜಿಲ್ಲೆಗಳನ್ನು ಬಿಟ್ಟರೆ ಉಳಿದ ಜಿಲ್ಲೆಗಳಲ್ಲಿ ಜಾಲತಾಣಗಳಲ್ಲಿ ಕನ್ನಡ ಇರಲಿಲ್ಲ. ಈಗ ಮೂರು ಜಿಲ್ಲೆಗಳನ್ನು ಬಿಟ್ಟರೆ ಉಳಿದ ಜಿಲ್ಲೆಗಳಲ್ಲಿ ಕನ್ನಡ ಬಳಕೆಯಾ ಗುತ್ತಿದೆ. ಮುಖಪುಟವಾಗಿ ಕನ್ನಡ ಭಾಷೆಯನ್ನು ಬಳಸುತ್ತಾ, ಒಳ ಮಾಹಿತಿಯನ್ನು ಸಂಪೂರ್ಣ ವಾಗಿ ಕನ್ನಡದಲ್ಲಿ ಇದ್ದು, ಆಯ್ಕೆ ಭಾಷೆಯನ್ನಾಗಿ ಇಂಗ್ಲೀಷನ್ನು ಬಳಸುವುದಕ್ಕೆ ಅವಕಾಶವಿದೆ ಎಂದು ಹೇಳಿದರು.
ಹಾಸನದಲ್ಲಿ ಹಿಂದೆ ಬಂದರೆ ಜಾಲತಾಣದಲ್ಲಿ ಕನ್ನಡ ಇರಲಿಲ್ಲ… ಎಲ್ಲಾ ಇಂಗ್ಲಿಷ್‍ನಲ್ಲಿ ಇತ್ತು. ಈಗ ಎಲ್ಲವೂ ಕನ್ನಡದಲ್ಲಿ ಇರುವುದರಿಂದ ಜಿಲ್ಲಾ ಡಳಿತವನ್ನು ಕನ್ನಡ ಪ್ರಾಧಿಕಾರ ಸ್ವಾಗತಿಸುತ್ತದೆ. ಜಿಲ್ಲಾ ಪಂಚಾಯತ್‍ನಲ್ಲಿ ಗ್ರಾಮಾಂತರ ಪ್ರದೇಶಕ್ಕೆ ಸಂಬಂಧಪಟ್ಟ ವಿಚಾರ ಕನ್ನಡದಲ್ಲಿ ಜಾಲತಾಣ ದೊಳಗೆ ಇದ್ದು, ರಾಜ್ಯ ಮಟ್ಟದಲ್ಲಿ ಮಾತ್ರ ಇಂಗ್ಲೀಷ್ ನಲ್ಲಿ ಮಾತ್ರ ಇತ್ತು. ಇನ್ನು 15 ದಿನಗಳ ಒಳಗೆ ಅದನ್ನು ಕೂಡ ಕನ್ನಡದಲ್ಲಿ ಮಾಡಲು ಸಂಬಂಧ ಪಟ್ಟ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನವನ್ನು ಕೊಡಲಾಗಿದ್ದು, ಜಿಲ್ಲಾಧಿಕಾರಿ ಗಳು ಇದರ ಹೊಣೆ ಹೊತ್ತುಕೊಂಡಿದ್ದಾರೆ ಎಂದರು.

ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆ ಯಾಗಿ ಕಡ್ಡಾಯವಾಗಿ ಕಲಿಸಬೇಕು ಎಂಬ ಸರಕಾರಿ ಆದೇಶವನ್ನು ಉಲ್ಲಂಘಿಸಿ ಕಲಿಸುತ್ತಿ ದ್ದಾರೆ ಎಂದು ಡಿಡಿಪಿಐ ಪರಿಶೀಲನೆ ಮಾಡಲಾ ಗಿದೆ ಎಂದಿದ್ದಾರೆ. ಆರ್.ಟಿ.ಇ. ಕಾಯಿದೆ ವೇಳೆ ಇದನ್ನು ಕೂಡ ಪರಿಶೀಲಿಸಿರುವುದಾಗಿ, ಇದರ ಬಗ್ಗೆ ನಾವು ಮಾಹಿತಿ ತರಿಸಿಕೊಳ್ಳುತ್ತೇವೆ. ಏನಾ ದರೂ ತಪ್ಪು ಮಾಹಿತಿ ಕೊಟ್ಟರೆ ಡಿಡಿಪಿಐ ಮೇಲೂ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.

ಹಾಸನ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡದ ಸಿಬ್ಬಂದಿಗಳನ್ನೇ ನೇಮಕ ಮಾಡಿ ಕೊಂಡಿರುವುದಕ್ಕೆ ನಿರ್ದೇಶಕ ಬಿ.ಸಿ. ರವಿ ಕುಮಾರ್ ಅವರನ್ನು ಅಭಿನಂದಿಸಿದರು. ಜಾಲ ತಾಣಗಳಲ್ಲಿ ಮುಖಪುಟ ಕನ್ನಡದಲ್ಲಿ, ಕೆಲ ಟೆಕ್ನಿಕಲ್ ಸೇರಿ ದಂತೆ ಎಲ್ಲಾ ಕನ್ನಡದಲ್ಲಿ ನಡೆ ಯುತ್ತಿರುವುದು ಸಂತೋಷ ಎಂದರು.

ಈ ಸಂದರ್ಭದಲ್ಲಿ ಹಿಮ್ಸ್ ನಿರ್ದೇಶಕ ರವಿ ಕುಮಾರ್, ಜಿಲ್ಲಾ ಸರಕಾರಿ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಶಂಕರ್, ಕನ್ನಡ ಮುಖ್ಯ ಆಡಳಿತ ವಿಭಾಗದ ಸಿ.ಆರ್.ಕಲ್ಪಶ್ರೀ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಕಲ್ಲಹಳ್ಳಿ ಹರೀಶ್, ತಾಲೂಕು ಅಧ್ಯಕ್ಷ ಜಿ.ಓ. ಮಹಾಂತಪ್ಪ ಇತರರು ಉಪಸ್ಥಿತರಿದ್ದರು.

Translate »