ನಾಳೆ ಜಯಚಾಮರಾಜೇಂದ್ರ  ಒಡೆಯರ್ ಜನ್ಮಶತಮಾನೋತ್ಸವ
ಮೈಸೂರು

ನಾಳೆ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಮಾನೋತ್ಸವ

January 17, 2019

ಮೈಸೂರು: ಮೈಸೂರಿನ ಪುರಭವನದಲ್ಲಿ ಜ.19ರಂದು ಬೆಳಿಗ್ಗೆ 11.30ಕ್ಕೆ ಜಯಚಾಮರಾಜೇಂದ್ರ ಒಡೆಯರ್ ಜನ್ಮಶತಮಾನೋತ್ಸವ ಮತ್ತು ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸಂಸ್ಮರಣೆ ಹಾಗೂ ಸಂಕ್ರಾಂತಿ ಕವಿಗೋಷ್ಠಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಹೆಚ್.ಎಲ್. ಯಮುನಾ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11.30ಕ್ಕೆ ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿ ದ್ದಾರೆ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮು, ಸುಯೋಗ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ, ಪತ್ರಕರ್ತ ಕೆ.ದೀಪಕ್ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

ಸಂಕ್ರಾಂತಿ ಕವಿಗೋಷ್ಠಿಯನ್ನು ಸಾಹಿತಿ ಹೆಚ್.ಎಸ್.ಲಕ್ಷ್ಮೇಗೌಡ ಉದ್ಘಾಟಿಸಲಿದ್ದಾರೆ. ಚನ್ನಪಟ್ಟಣದ ಚುಟುಕು ಕವಿ ಎಂ.ಟಿ.ನಾಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಡಾ.ಸುನೀತ, ಹಂಚ್ಯಾ ಸ್ವಾಮಿಗೌಡ, ಉದ್ಯಮಿ ಪಿ.ಚಂದ್ರಶೇಖರ್, ಎಸ್.ವಿಜಯೇಂದ್ರ ಪಾಲ್ಗೊಳ್ಳಲಿದ್ದಾರೆ. ಶ್ರೀಮನ್ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ವಿಷಯ ವಾಗಿ ರಾಜವಂಶಸ್ಥ ಆರ್.ರಾಜಚಂದ್ರ, `ತ್ರಿವಿಧ ದಾಸೋಹಿ ಪದ್ಮಭೂಷಣ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ’ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇ ಶಕ ಟಿ.ಎನ್.ದಾಸೇಗೌಡ ಉಪನ್ಯಾಸ ನೀಡುವರು. ಕವಿಗೋಷ್ಠಿಯಲ್ಲಿ ಭಾಗವಹಿಸ ಲಿಚ್ಛಿಸುವವರು ಹೆಸರು ನೋಂದಾಯಿಸಿಕೊಳ್ಳಲು ಮೊ.ಸಂ. 9902698623 ಸಂಪರ್ಕಿ ಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಅರಸು ಮಂಡಲಿ ಅಧ್ಯಕ್ಷ ನಂದೀಶ್ ಅರಸ್, ವೇದಿಕೆಯ ಪದಾಧಿಕಾರಿಗಳಾದ ದಾಸೇಗೌಡ, ಲಕ್ಷ್ಮೀಗೌಡ, ಕುಮಾರ್ ಇದ್ದರು.

Translate »