ನಾಗಮಂಗಲ, ಏ.9- ತಾಲೂಕಿನ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರಿಗೆ ರಾಜ್ಯ ಪಡಿತರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪನವರು ನಾಗಮಂಗಲ ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ಆರೋಗ್ಯ ಕಿಟ್ ವಿತರಿಸಿದರು. ಮಹಾಮಾರಿ ಕೊರೊನ ವೈರಸ್ ಬಂದಿ ರುವ ಹಿನ್ನೆಲೆಯಲ್ಲಿ ಮನೆ-ಮನೆಗೆ ಪತ್ರಿಕೆ ಯನ್ನು ತಲುಪಿಸುತ್ತಿರುವ ಪತ್ರಿಕಾ ವಿತರP Àರಿಗೆ ಹಾಗೂ ಪತ್ರಕರ್ತರಿಗೆ ಆರೋಗ್ಯದ ದೃಷ್ಟಿಯಿಂದ ಮಾಸ್ಕ್, ಕೈ ಕವಚ, ಸ್ಯಾನಿಟೈಜರ್ ನ್ನು ವಿತರಿಸಲಾಯಿತು. ಆರೋಗ್ಯ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ತಾಲೂಕು ದಂಡಾ ಧಿಕಾರಿ ಕು.ಞ. ಅಹಮದ್, ಪುರಸಭೆ ಮುಖ್ಯಾ…
ಲಾಕ್‍ಡೌನ್ ವಿಸ್ತರಣೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್
April 9, 2020ಲಾಕ್ ಡೌನ್ ವಿಸ್ತರಣೆಗೆ ಜಿಲ್ಲೆಯ ಶಾಸಕರ ಒತ್ತಾಯ ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ನೀಡಲು ಸೂಚನೆ ಮಂಡ್ಯ, ಏ.8(ನಾಗಯ್ಯ)-ರಾಜ್ಯದಲ್ಲಿ ವಿಧಿಸಿರುವ ಲಾಕ್ ಡೌನನ್ನು ವಿಸ್ತರಿಸುವ ಕುರಿತಂತೆ ಶುಕ್ರವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳ ಲಾಗುವುದೆಂದು ಕಂದಾಯ ಸಚಿವರೂ ಆದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್ ಅಶೋಕ್ ತಿಳಿಸಿದರು. ಜಿಲ್ಲಾಪಂಚಾಯತ್‍ನ ಕಾವೇರಿ ಸಭಾಂಗಣದಲ್ಲಿಂದು ಕೋವಿಡ್-19 ನಿಯಂತ್ರಣ ಸಂಬಂಧ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಯಾವುದೇ ಒಂದು ವರ್ಗ, ಧರ್ಮ…
ರೋಗ ಲಕ್ಷಣವಿಲ್ಲದವರಿಗೂ ಕೊರೊನಾ ಸೋಂಕು ಮಳವಳ್ಳಿಯ ನಾಲ್ವರಿಗೆ ರೋಗ ಲಕ್ಷಣಗಳಿರಲಿಲ್ಲ
April 9, 2020ಮಂಡ್ಯ, ಏ.8(ನಾಗಯ್ಯ)-ನೆಗಡಿ, ಕೆಮ್ಮು, ಜ್ವರದಂತಹ ಲಕ್ಷಣಗಳಿಲ್ಲದಿದ್ದವರಲ್ಲೂ ಕೊರೊನಾ ವೈರಸ್ ಪತ್ತೆಯಾಗಿದೆ. ಮಳವಳ್ಳಿಯ ನಾಲ್ವರಲ್ಲಿಯೂ ರೋಗ ಲಕ್ಷಣಗಳಿಲ್ಲದಿದ್ದರೂ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದೆಹಲಿಯ ತಬ್ಲಘಿ ಜಮಾತ್‍ನ 10 ಮೌಲ್ವಿಗಳ ಸಂಪರ್ಕದಲ್ಲಿದ್ದ ಮಳವಳ್ಳಿಯ 7 ಮಂದಿಯ ರಕ್ತ ಮಾದರಿ ಯನ್ನು ತಪಾಸಣೆ ಗೊಳಪಡಿಸಲಾಗಿತ್ತು, ಈ ಪೈಕಿ ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ನಾಲ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದರು. ಇದುವರೆಗೂ ನೆಗಡಿ, ಕೆಮ್ಮು, ಜ್ವರದಂತಹ…
ಕೂಲಿ ಕಾರ್ಮಿಕರ ಕಾಲೋನಿಗೆ ನೋಡಲ್ ಅಧಿಕಾರಿ ಭೇಟಿ
April 9, 2020ಪಾಂಡವಪುರ, ಏ.8- ತಾಲೂಕಿನ ಎಲೆಕೆರೆ ಗ್ರಾಮದಲ್ಲಿರುವ ಕೂಲಿ ಕಾರ್ಮಿಕರ ಕಾಲೋನಿಗೆ ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರ್ಣಾಧಿಕಾರಿ ಹಾಗೂ ನಿರ್ಗತಿಕರ ನೋಡಲ್ ಅಧಿಕಾರಿ ಎಸ್.ಆರ್. ಹರೀಶ್ ಬುಧವಾರ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಸ್ಥಿತಿಗತಿ ಪರಿಶೀಲಿಸಿದರು. ಸರ್ಕಾರದಿಂದ ನೀಡುವ ಪಡಿತರವನ್ನು ವಿತರಣೆ ಮಾಡದೆ ಇಲ್ಲಿನ ನಿವಾಸಿಗಳು ಹಸಿವಿನಿಂದ ನರಳುತ್ತಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಎಸ್.ಆರ್. ಹರೀಶ್ ಭೇಟಿ ನೀಡಿ, ಅಲ್ಲಿನ ನಿವಾಸಿ ಗಳೊಂದಿಗೆ ಚರ್ಚಿಸಿದರು. ಎಲೆಕೆರೆ ಗ್ರಾಮದ ಕೂಲಿಕಾರ್ಮಿಕರ ಕಾಲೋನಿಯಲ್ಲಿ ಬುಡು ಬುಡುಕೆ, ಹಾವಾಡಿಗ, ಹಕ್ಕಿಪಿಕ್ಕಿ, ಸೋಲಿ…
ಸಕ್ಕರೆ ನಾಡಿಗೂ ವಕ್ಕರಿಸಿದ ‘ಕೊರೊನಾ ಮಹಾಮಾರಿ’
April 8, 2020ತಬ್ಲಿಘಿ ಸಭೆಯಲ್ಲಿ ಭಾಗವಹಿಸಿದ್ದ ಮಳವಳ್ಳಿಯ ಮೂವರಲ್ಲಿ ಸೋಂಕು: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಂಡ್ಯ, ಏ.7(ನಾಗಯ್ಯ)- ಸಕ್ಕರೆ ನಾಡು ಮಂಡ್ಯ ಜಿಲ್ಲೆಗೂ ಕೊರೊನಾ ಮಹಾ ಮಾರಿ ಕಾಲಿಟ್ಟಿದ್ದು, ದೆಹಲಿಯ ನಿಜಾಮು ದ್ದೀನ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಮಳವಳ್ಳಿಯ 3 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೊರೊನಾ ವೈರಸ್ ಸೋಂಕಿತ ದೆಹಲಿ ಯ ನಿಜಾಮುದ್ದೀನ್ ಪ್ರಾರ್ಥನಾ ಸಭೆಯ ಐವರು ಮೌಲ್ವಿಗಳ ಸಂಪರ್ಕ ದಲ್ಲಿ ಈ ಮೂವರು ಇದ್ದರು. ಅಲ್ಲದೆ ದೆಹಲಿ ಯ ತಬ್ಲಿಘಿ ಸಭೆಯಲ್ಲಿಯೂ ಕೂಡ ಪಾಲ್ಗೊಂಡಿದ್ದರು ಎಂದು ಜಿಲ್ಲಾಧಿಕಾರಿ…
ಐಸೋಲೇಷನ್‍ಗೆ 55 ಮಂದಿ ದಾಖಲು
April 8, 2020ಮಂಡ್ಯ, ಏ.7- ಮಂಗಳವಾರದ ಮಂಡ್ಯ ಹೆಲ್ತ್ ಬುಲೇಟಿನ್ ಪ್ರಕಟ ಗೊಂಡಿದ್ದು, ಇಂದಿನ ವರದಿಯಲ್ಲಿ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 55 ಮಂದಿ ಶಂಕಿತರನ್ನು ಐಸೋಲೇಷನ್‍ಗೆ ದಾಖಲಿಸಲಾಗಿದೆ. ನಾಗಮಂಗಲ 24, ಮಳವಳ್ಳಿಯ 36 ಐಸೋಲೇಷನ್‍ನಲ್ಲಿ ಹಾಗೂ ನಂಜನಗೂಡ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಜಿಲ್ಲೆಯ 18 ಮಂದಿ ಯನ್ನು ಕ್ವಾರೆಂಟೆನ್‍ನಲ್ಲಿ ಇರಿಸಲಾಗಿದೆ. ಕಡ್ಡಾಯವಾಗಿ ಗೃಹವಾಸ್ತವ್ಯಕ್ಕೆ 95 ಮಂದಿಯನ್ನು ಒಳಪಡಿಸಲಾಗಿದ್ದು, ಮಂಗಳವಾರ ಇಬ್ಬರು 14 ದಿನಗಳ ಗೃಹ ವಾಸ್ತವ್ಯ ಪೂರೈಸಿ ಬಿಡುಗಡೆಗೊಂಡಿ ದ್ದಾರೆ. 32 ಮಂದಿಯ ರಕ್ತವನ್ನು ಸಂಗ್ರ ಹಿಸಿ ಪರೀಕ್ಷೆಗೆ…
ಶಾಸಕರಿಂದ ಜನರಿಗೆ ಆಹಾರದ ಕಿಟ್ ವಿತರಣೆ
April 8, 2020ಶ್ರೀರಂಗಪಟ್ಟಣ, ಏ.7(ವಿನಯ್‍ಕಾರೇಕುರ)- ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಮಂಗಳವಾರ ತಾಲೂಕಿನ ಮೋಗರಹಳ್ಳಿ(ಮಂಟಿ) ಸೇರಿದಂತೆ ವಿವಿಧೆಡೆ ಜನರಿಗೆ ಅಕ್ಕಿ, ತರಕಾರಿ, ಸೋಪು ಹಾಗೂ ಮಾಸ್ಕ್‍ಗಳನ್ನು ಉಚಿತವಾಗಿ ವಿತರಿಸಿದರು. ದೇಶದ್ಯಾಂತ ಲಾಕ್‍ಡೌನ್ ಜಾರಿಯಲ್ಲಿದ್ದು, ಬಡವರು ಕೆಲಸವಿಲ್ಲದೆ ಜೀವನಸಾಗಿಸಲು ಕಷ್ಟಪಡುತ್ತಿದ್ದಾರೆ. ಈ ಹಿನೆÀ್ನಲೆಯಲ್ಲಿ ಶಾಸಕರು ಮಂಗಳವಾರ ತಾಲೂಕಿನ ರೈತರು ಬೆಳೆದ ಸೋರೆಕಾಯಿ, ಟೊಮೆಟೊ, ಹೂ ಕೋಸು, ಎಲೆ ಕೋಸು, ಸೋರೆಕಾಯಿ, ಕುಂಬಳಕಾಯಿ ಖರೀದಿಸಿ ಕ್ಷೇತ್ರದಲ್ಲಿರುವ ಬಡ ಜನರಿಗೆ ಉಚಿತವಾಗಿ ಹಂಚಿದರು. ಈ ವೇಳೆ ಜನರಿಗೆ ಸ್ವಚ್ಛತೆ ಕಾಪಾಡಬೇಕು ಎಂದು ಕಿವಿ…
ಹಾವು ಕಚ್ಚಿ ವ್ಯಕ್ತಿ ಸಾವು
April 8, 2020ಮಂಡ್ಯ, ಏ.7(ನಾಗಯ್ಯ)- ಹಾವು ಕಚ್ಚಿ ವ್ಯಕ್ತಿಯೋರ್ವ ಮೃತಪಟ್ಟಿ ರುವ ಘಟನೆ ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲಕ್ಷ್ಮಯ್ಯ(55) ಸಾವನ್ನಪ್ಪಿದ ವ್ಯಕ್ತಿ. ಮಾ. 18ರಂದು ಲಕ್ಷ್ಮಯ್ಯ ಅವರು ತಮ್ಮ ಕಬ್ಬಿನ ಗದ್ದೆಗೆ ನೀರು ಹಾಯಿಸಲು ತೆರಳಿದ್ದ ಸಂದರ್ಭ ದಲ್ಲಿ ವಿಷಪೂರಿತ ಹಾವು ಕಚ್ಚಿದೆ. ತಕ್ಷಣ ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರಾದರೂ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸಾಂತ್ವನ: ಲಕ್ಷ್ಮಯ್ಯ ಮೃತಪಟ್ಟ ವಿಚಾರ ತಿಳಿದ ಪಿಡಿಓ ಭಾಗ್ಯ, ಕಾರ್ಯದರ್ಶಿ ಹಾಗೂ ಡೈರಿ ಅಧ್ಯಕ್ಷರಾದ ಟಿ.ಟಿ.ಶ್ರೀನಿವಾಸ್, ಆರ್‍ಎಪಿಸಿಎಂಎಸ್‍ನ…
ಬೈಕ್‍ಗೆ ಅಪರಿಚಿತ ವಾಹನ ಡಿಕ್ಕಿ: ಸವಾರ ಸಾವು
April 8, 2020ಮದ್ದೂರು, ಏ.7- ಬೈಕ್‍ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ಪಟ್ಟಣದ ಮೈಸೂರು- ಬೆಂಗಳೂರು ರಸ್ತೆಯಲ್ಲಿ ಮಂಗಳವಾರ ನಡೆದಿದೆ. ತಾಲೂಕಿನ ವೈದ್ಯನಾಥಪುರ ಗ್ರಾಮದ ವೆಂಕಟಯ್ಯ(70) ಮೃತಪಟ್ಟ ಸವಾರ. ವೆಂಕಟಯ್ಯ ಸ್ವ ಗ್ರಾಮದಿಂದ ಶಿವಪುರಕ್ಕೆ ಹೋಗುತ್ತಿದ್ದಾಗ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರ ಗಾಯಗೊಂಡು ರಸ್ತೆಯಲ್ಲಿ ಅಶ್ವಸ್ಥಗೊಂಡಿದ್ದ ಅವರನ್ನು ಸ್ಥಳೀಯರು ಮದ್ದೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ವೆಂಕಟಯ್ಯ ಮೃತಪಟ್ಟಿದ್ದಾರೆ. ಈ ಸಂಬಂಧ ಮದ್ದೂರು…
ಮಳವಳ್ಳಿ: 7ಕಿ.ಮೀ. ವ್ಯಾಪ್ತಿ ‘ಬಫರ್ ಝೋನ್’
April 7, 202028 ದಿನಗಳ ಕಾಲ ತೀವ್ರ ನಿಗಾ, ಅನುಮತಿಯಿಲ್ಲದೆ ಯಾರೂ ಓಡಾಟ ಮಾಡುವಂತಿಲ್ಲ: ಜಿಲ್ಲಾಧಿಕಾರಿ ವೆಂಕಟೇಶ್ ಮಂಡ್ಯ, ಏ.6(ನಾಗಯ್ಯ)- ಕೊರೊನಾ ಸೋಂಕು ಇರುವ ದೆಹಲಿ ಮೂಲದ ಮೌಲ್ವಿಗಳು ಸಂಚರಿಸಿರುವ ಹಿನ್ನೆಲೆಯಲ್ಲಿ ಮಳವಳ್ಳಿಯಲ್ಲಿ ತೀವ್ರ ಕಟ್ಟೆಚ್ಚರವಹಿಸ ಲಾಗಿದ್ದು, ಸೋಮವಾರದಿಂದ 3ಕಿ.ಮೀ. ವ್ಯಾಪ್ತಿಯನ್ನು ಕಂಟೋನ್ಮೆಂಟ್ ಜೋನ್ ಹಾಗೂ ಪಟ್ಟಣದ 7ಕಿ.ಮೀ. ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್ ಘೋಷಿಸಿದರು. ಪಟ್ಟಣಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಘಿ…