ಕೂಲಿ ಕಾರ್ಮಿಕರ ಕಾಲೋನಿಗೆ ನೋಡಲ್ ಅಧಿಕಾರಿ ಭೇಟಿ
ಮಂಡ್ಯ

ಕೂಲಿ ಕಾರ್ಮಿಕರ ಕಾಲೋನಿಗೆ ನೋಡಲ್ ಅಧಿಕಾರಿ ಭೇಟಿ

April 9, 2020

ಪಾಂಡವಪುರ, ಏ.8- ತಾಲೂಕಿನ ಎಲೆಕೆರೆ ಗ್ರಾಮದಲ್ಲಿರುವ ಕೂಲಿ ಕಾರ್ಮಿಕರ ಕಾಲೋನಿಗೆ ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರ್ಣಾಧಿಕಾರಿ ಹಾಗೂ ನಿರ್ಗತಿಕರ ನೋಡಲ್ ಅಧಿಕಾರಿ ಎಸ್.ಆರ್. ಹರೀಶ್ ಬುಧವಾರ ಭೇಟಿ ನೀಡಿ, ಅಲ್ಲಿನ ನಿವಾಸಿಗಳ ಸ್ಥಿತಿಗತಿ ಪರಿಶೀಲಿಸಿದರು.

ಸರ್ಕಾರದಿಂದ ನೀಡುವ ಪಡಿತರವನ್ನು ವಿತರಣೆ ಮಾಡದೆ ಇಲ್ಲಿನ ನಿವಾಸಿಗಳು ಹಸಿವಿನಿಂದ ನರಳುತ್ತಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಎಸ್.ಆರ್. ಹರೀಶ್ ಭೇಟಿ ನೀಡಿ, ಅಲ್ಲಿನ ನಿವಾಸಿ ಗಳೊಂದಿಗೆ ಚರ್ಚಿಸಿದರು. ಎಲೆಕೆರೆ ಗ್ರಾಮದ ಕೂಲಿಕಾರ್ಮಿಕರ ಕಾಲೋನಿಯಲ್ಲಿ ಬುಡು ಬುಡುಕೆ, ಹಾವಾಡಿಗ, ಹಕ್ಕಿಪಿಕ್ಕಿ, ಸೋಲಿ ಗರು, ಬೋವಿ ಜನಾಂಗ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ನಿವಾಸಿಗಳು ವಾಸಿಸುತ್ತಿದ್ದು, ಇವರೆಲ್ಲರೂ ಕೂಲಿಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಕೊರೊನಾ ಎಫೆಕ್ಟ್‍ನಿಂದ ಇವರ ಕೂಲಿ ಕೆಲಸಕ್ಕೆ ತೊಂದರೆಯಾಗಿದೆ ಎಂದು ಇಲ್ಲಿನ ನಿವಾಸಿ ಗಳು ಅಳಲು ತೋಡಿಕೊಂಡರು.ಊಟ, ಆಶ್ರಯ ಎಲ್ಲವನ್ನು ಸರಕಾರದಿಂದ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ನಿವಾಸಿ ಗಳಿಗೆ ಹರೀಶ್ ಭರವಸೆ ನೀಡಿದರು.

ಅಲ್ಲಿನ ನಿವಾಸಿಗಳು ಹಲವು ಕುಂದು ಕೊರತೆಯನ್ನು ಹಂಚಿಕೊಂಡದರು. ಇಲ್ಲಿನ ಕೆಲವು ನಿವಾಸಿಗಳಿಗೆ ಬಿಪಿಎಲ್ ಕಾರ್ಡ್ ಇಲ್ಲ, ಕೆಲವರಿಗೆ ಮಾತ್ರ ಕಾರ್ಡ್ ಸೌಲಭ್ಯ ವಿದೆ. ಬಿಪಿಎಲ್ ಕಾರ್ಡ್ ಇಲ್ಲದವರಿಗೆ ಪಡಿತರ ಅಕ್ಕಿ ವಿತರಣೆ ಮಾಡಿದ್ದಾರೆ, ಕಾರ್ಡ್ ಇರುವವರಿಗೆ ನಾಳೆ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಇಲ್ಲಿನ ನಿವಾಸಿಗಳಿಗೆ ಆಹಾರದ ಸಮಸ್ಯೆಇಲ್ಲ, ನಮಗೆ ಸ್ವಂತ ನಿವೇಶನದ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ಇದೆ. ಅದನ್ನು ನಿವಾರಿಸಿಕೊಡಿ, ಪಂಚಾಯಿತಿ ವತಿಯಿಂದ ನಮ್ಮ ಕಾಲೋನಿಗೆ ಸ್ವಚ್ಚಗೊಳಿಸಿ ಔಷಧ ಸಿಂಪಡಿಸಿಕೊಡಿ ಎಂದು ಸ್ಥಳೀಯ ನಿವಾಸಿಗಳಾದ ಶ್ರೀನಿವಾಸ್, ಗೌತಮಿ, ಅಂಬಿಕ, ಮಲ್ಲಿಕಾ, ರಾಜು, ಬಾಬು ಚಿನ್ನಯ್ಯ ಮನವಿ ಮಾಡಿದರು.

ನಿಮ್ಮ ಕಾಲೋನಿಯಲ್ಲಿ ಸ್ವಚ್ಚತೆ ಕಾಪಾ ಡಲು ಪಂಚಾಯಿತಿ ಅವರಿಗೆ ಸೂಚನೆ ನೀಡ ಲಾಗುವುದು, ಪಡಿತರವನ್ನು ಸಹ ಸರಿಯಾದ ಸಮಯಕ್ಕೆ ವಿತರಣೆ ಮಾಡಿಸಲಾಗುವುದು, ನಿಮಗೆ ಯಾವುದೇ ಸಮಸ್ಯೆ ಇದ್ದರೂ ನನ್ನ ದೂರವಾಣಿಗೆ ಕೆರೆ ಮಾಡಿ ಮಾಹಿತಿ ಮುಟ್ಟಿಸಿ, ಕೊರೊನಾ ಬಗ್ಗೆ ಜಾಗೃತಿಯಿಂದ ಇರಿ ವೈಯುಕ್ತಿಕ ಸ್ವಚ್ಚತೆ ಕಾಪಾಡಿಕೊಳ್ಳಿ ಎಂದು ನೋಡಲ್ ಅಧಿಕಾರಿ ಎಸ್.ಆರ್. ಹರೀಶ್ ಮನವಿ ಮಾಡಿದರು.

Translate »