ಸಕ್ಕರೆ ನಾಡಿಗೂ ವಕ್ಕರಿಸಿದ ‘ಕೊರೊನಾ ಮಹಾಮಾರಿ’
ಮಂಡ್ಯ

ಸಕ್ಕರೆ ನಾಡಿಗೂ ವಕ್ಕರಿಸಿದ ‘ಕೊರೊನಾ ಮಹಾಮಾರಿ’

April 8, 2020

ತಬ್ಲಿಘಿ ಸಭೆಯಲ್ಲಿ ಭಾಗವಹಿಸಿದ್ದ ಮಳವಳ್ಳಿಯ ಮೂವರಲ್ಲಿ ಸೋಂಕು: ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್

ಮಂಡ್ಯ, ಏ.7(ನಾಗಯ್ಯ)- ಸಕ್ಕರೆ ನಾಡು ಮಂಡ್ಯ ಜಿಲ್ಲೆಗೂ ಕೊರೊನಾ ಮಹಾ ಮಾರಿ ಕಾಲಿಟ್ಟಿದ್ದು, ದೆಹಲಿಯ ನಿಜಾಮು ದ್ದೀನ್ ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಮಳವಳ್ಳಿಯ 3 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಕೊರೊನಾ ವೈರಸ್ ಸೋಂಕಿತ ದೆಹಲಿ ಯ ನಿಜಾಮುದ್ದೀನ್ ಪ್ರಾರ್ಥನಾ ಸಭೆಯ ಐವರು ಮೌಲ್ವಿಗಳ ಸಂಪರ್ಕ ದಲ್ಲಿ ಈ ಮೂವರು ಇದ್ದರು. ಅಲ್ಲದೆ ದೆಹಲಿ ಯ ತಬ್ಲಿಘಿ ಸಭೆಯಲ್ಲಿಯೂ ಕೂಡ ಪಾಲ್ಗೊಂಡಿದ್ದರು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

ಬನ್ನೂರಿನ ಬಳಿ ದೆಹಲಿಯ 10 ಮೌಲ್ವಿಗಳು ಪತ್ತೆಯಾದ ಬಳಿಕ ಅವ ರಿಂದ ಮಾಹಿತಿ ಸಂಗ್ರಹಿಸಿ ಈ 7 ಮಂದಿ ಯನ್ನು ಐಸೋಲೇಷನ್‍ಗೆ ದಾಖಲಿಸಿ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇದೀಗ 3 ಮಂದಿಗೆ ಸೋಂಕು ದೃಢಪಟ್ಟಿರುವುದರಿಂದ ಮಳವಳ್ಳಿ ಸೇರಿದಂತೆ ಜಿಲ್ಲಾದ್ಯಂತ ತೀವ್ರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದರು.

10 ಮಂದಿ ಮೌಲ್ವಿಗಳು ಹಾಗೂ ಈ 7 ಮಂದಿಯೂ ಕೂಡ ಮಳವಳ್ಳಿಯ ದರ್ಗಾ ಪಕ್ಕದ ಮನೆಯೊಂದರಲ್ಲಿ ವಾಸ್ತವ್ಯ ಹೂಡಿ ದ್ದರಿಂದ ದರ್ಗಾ ವ್ಯಾಪ್ತಿಯ 3ಕಿ.ಮೀ. ಪ್ರದೇಶವನ್ನು ‘ಕಂಟೇನ್ಮೆಂಟ್ ಜೋನ್’ ಹಾಗೂ 5ಕಿ.ಮೀ. ಪ್ರದೇಶವನ್ನು ‘ಬಫರ್ ಜೋನ್’ ಎಂದು ಘೋಷಿಸಲಾಗಿದೆ ಎಂದು ತಿಳಿಸಿದರು.

ತಂಡ ರಚನೆ: ಕಂಟೇನ್ಮೆಂಟ್ ಜೋನ್ ನಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಜನರ ಓಡಾಟ ವನ್ನು ನಿಷೇಧಿಸಲಾಗಿದೆ. ಅಲ್ಲಿನ ಪ್ರತಿ ಮನೆಗೂ ಅವಶ್ಯಕ ವಸ್ತುಗಳ ಸರಬ ರಾಜಿಗೆ ಅವಕಾಶ ಕಲ್ಪಿಸಲಾಗಿದೆ. ಬಫರ್ ಜೋನ್‍ನಲ್ಲಿ ಪ್ರತಿ 50 ಮನೆಗಳಿಗೆ 1 ತಂಡದಂತೆ 130 ತಂಡಗಳನ್ನು ರಚನೆ ಮಾಡಲಾಗಿದ್ದು, ಅವರಿಗೆ ವಿಶೇಷ ತರಬೇತಿ ನೀಡಲಾಗಿದೆ. ಅವರು ಪ್ರತಿ ಮನೆಗೆ ಭೇಟಿ ನೀಡಿ ಪ್ರತಿಯೊಬ್ಬರ ಆರೋಗ್ಯ ವಿಚಾರಿಸಲಿದ್ದಾರೆ ಎಂದು ಹೇಳಿದರು.

1000 ಮಂದಿ ಜನಸಂಖ್ಯೆಗೆ ಒಬ್ಬ ವೈದ್ಯ ಹಾಗೂ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ನಿತ್ಯವೂ ಅಲ್ಲಿನ ಆರೋಗ್ಯ ಸ್ಥಿತಿಗತಿ ಬಗ್ಗೆ ಉಪವಿಭಾಗಾ ಧಿಕಾರಿ ನೇತೃತ್ವದ ತಂಡ ಪ್ರತಿದಿನ ಸಂಜೆ 4 ಗಂಟೆಯೊಳಗೆ ವರದಿ ನೀಡಲಿದೆ. ಜಿಲ್ಲಾ ಡಳಿತ ಸಂಜೆ 6 ಗಂಟೆಯೊಳಗೆ ಸರ್ಕಾರಕ್ಕೆ ಈ ವರದಿಯನ್ನು ರವಾನಿಸಲಿದೆ ಎಂದು ತಿಳಿಸಿದರು. ಸೋಂಕಿತ 3 ಮಂದಿಯ ಕುಟಂಬಸ್ಥರು ಹಾಗೂ ಸಂಪರ್ಕದಲ್ಲಿದ್ದ 28 ಮಂದಿಯನ್ನೂ ಮಳವಳ್ಳಿಯ ಕ್ವಾರೆಂಟೈನ್‍ನಲ್ಲಿ ಇರಿಸಲಾಗಿದೆ. ಎಲ್ಲರ ರಕ್ತ ಮತ್ತು ಗಂಟಲು ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.

ಸ್ವಯಂ ಪ್ರೇರಿತರಾಗಿ ತಪಾಸಣೆಗೆ ಒಳಪಡಿ: ಮಾ. 10ರಿಂದ 16ರವರೆಗೆ ದೆಹಲಿ ಯಲ್ಲಿ ನಡೆದ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದವರಷ್ಟೇ ಅಲ್ಲದೆ ಅವರ ಸಂಪರ್ಕದಲ್ಲಿರುವವರು ಮತ್ತು ದೆಹಲಿ ಜಮಾತ್ ಸಭೆಗೆ ಜನವರಿ, ಫೆಬ್ರವರಿ ಸೇರಿದಂತೆ ಬೇರೆ ಸಂದರ್ಭದಲ್ಲಿ ಭೇಟಿ ನೀಡಿರುವವರೂ ಸ್ವಯಂ ಪ್ರೇರಿತರಾಗಿ ತಪಾಸಣೆಗೆ ಒಳಗಾಗಬೇಕು ತಪ್ಪಿದ್ದಲ್ಲಿ ಪೊಲೀಸ್ ಮೂಲಕ ತಪಾಸಣೆಗೊಳಪಡಿ ಸುವ ಕೆಲಸ ಮಾಡುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಂಜನಗೂಡಿನ 18 ಮಂದಿ, ಮಳ ವಳ್ಳಿಯ 28 ಹಾಗೂ ನಾಗಮಂಗಲದ 24 ಮಂದಿ ಕ್ವಾರೆಂಟೈನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಂಜನಗೂಡಿನವರು 14 ದಿನಗಳ ಚಿಕಿತ್ಸೆ ಪೂರೈಸಿದ್ದಾರೆ.

ಸೋಮವಾರ ಪರಾರಿಯಾಗಿ ಪತ್ತೆಯಾದ ಮಳವಳ್ಳಿಯ ಶಂಕಿತ ವ್ಯಕ್ತಿ ಮೊದಲು ಗುತ್ತಲಿಗೆ ತೆರಳಿದ್ದು, ಶಂಕರ ಮಠಕ್ಕೂ ಭೇಟಿ ನೀಡಿದ್ದ. ಈ ಸಂದರ್ಭ ಆತನ ಸಂಪರ್ಕದಲ್ಲಿ ಯಾರು ಯಾರೂ ಇದ್ದರೂ ಎಂಬುದನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಆತ ಪರಾರಿ ಯಾಗಿದ್ದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯಾ ಮತ್ತು ಕುಟಂಬ ಕಲ್ಯಾಣಾ ಧಿಕಾರಿ ಡಾ.ಮಂಚೇಗೌಡ, ಅಬಕಾರಿ ಜಿಲ್ಲಾಧಿಕಾರಿ ಬಿ.ಶಿವಪ್ರಸಾದ್, ವಾರ್ತಾ ಧಿಕಾರಿ ಟಿ.ಕೆ.ಹರೀಶ್ ಇದ್ದರು.

ಕೋಟ್
ಮಳವಳ್ಳಿಯ ಜನತೆ ಆತಂಕ ಪಡುವ ಅವಶ್ಯಕತೆಯಿಲ್ಲ. ಜಿಲ್ಲಾಡಳಿತ, ತಾಲೂಕು ಆಡಳಿತ ಜನರ ಸುರಕ್ಷತೆಗಾಗಿ ಸಕಲ ಸಿದ್ಧತೆ ಕೈಗೊಂಡಿದೆ. ಎಲ್ಲರೂ 28 ದಿನಗಳ ಕಾಲ ಜಿಲ್ಲಾಡಳಿತ ದೊಂದಿಗೆ ಸಹಕರಿಸಿದರೆ, ನಂತರ ಎಲ್ಲಾ ಚಟುವಟಿಕೆ ನಡೆಸಲು ಸಾಧ್ಯವಾಗಲಿದೆ. -ಡಾ.ಎಂವಿ.ವೆಂಕಟೇಶ್, ಜಿಲ್ಲಾಧಿಕಾರಿ

ಸೋಂಕಿತರ ಟ್ರಾವೆಲ್ ಹಿಸ್ಟರಿ
ಮಳವಳ್ಳಿಯಿಂದ 7 ಮಂದಿ ಫೆ. 4ರಂದು ದೆಹಲಿಯ ನಿಜಾಮುದ್ದಿನ್‍ಗೆ ತೆರಳಿ ಫೆ. 13ರವರೆಗೂ ನಡೆದ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದರು. ಫೆ. 13ರಂದೇ ದೆಹಲಿಯಿಂದ ಹೊರಟ ಅವರು, ಫೆ. 17ರ ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು.

ಬಳಿಕ ಖಾಸಗಿ ಟ್ಯಾಕ್ಸಿಯಲ್ಲಿ ರಾತ್ರಿ 2 ಗಂಟೆಗೆ ಸ್ಯಾಟ್‍ಲೈಟ್ ನಿಲ್ದಾಣಕ್ಕೆ ಬಂದಿಳಿದಿ ದ್ದಾರೆ. ನಂತರ ಸಾರಿಗೆ ಬಸ್‍ನಲ್ಲಿ ರಾತ್ರಿ 3 ಗಂಟೆಗೆ ಮದ್ದೂರು ತಲುಪಿದ್ದಾರೆ. ಅಲ್ಲಿಂದ ಮಾರುತಿ 800 ಕಾರು ಹಾಗೂ ಮತ್ತೊಂದು ಖಾಸಗಿ ಕಾರಿನಲ್ಲಿ ಮುಂಜಾನೆ 4 ಗಂಟೆಗೆ ಮಳವಳ್ಳಿಗೆ ಬಂದು ವಾಸ್ತವ್ಯ ಹೂಡಿದ್ದರು. ಅಲ್ಲದೆ ಇವರು ಮಳವಳ್ಳಿ ತಾಲೂಕಿನ ಬಿಜಿಪುರ ತೋಟಕ್ಕೂ ಭೇಟಿ ನೀಡಿದ್ದರು. ಬನ್ನೂರಿಗೂ ಸಹ ತೆರಳಿ ವಾಪಸ್ಸಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ವಿವರಿಸಿದರು.

Translate »