ಐಸೋಲೇಷನ್‍ಗೆ 55 ಮಂದಿ ದಾಖಲು
ಮಂಡ್ಯ

ಐಸೋಲೇಷನ್‍ಗೆ 55 ಮಂದಿ ದಾಖಲು

April 8, 2020

ಮಂಡ್ಯ, ಏ.7- ಮಂಗಳವಾರದ ಮಂಡ್ಯ ಹೆಲ್ತ್ ಬುಲೇಟಿನ್ ಪ್ರಕಟ ಗೊಂಡಿದ್ದು, ಇಂದಿನ ವರದಿಯಲ್ಲಿ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 55 ಮಂದಿ ಶಂಕಿತರನ್ನು ಐಸೋಲೇಷನ್‍ಗೆ ದಾಖಲಿಸಲಾಗಿದೆ.

ನಾಗಮಂಗಲ 24, ಮಳವಳ್ಳಿಯ 36 ಐಸೋಲೇಷನ್‍ನಲ್ಲಿ ಹಾಗೂ ನಂಜನಗೂಡ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಜಿಲ್ಲೆಯ 18 ಮಂದಿ ಯನ್ನು ಕ್ವಾರೆಂಟೆನ್‍ನಲ್ಲಿ ಇರಿಸಲಾಗಿದೆ.

ಕಡ್ಡಾಯವಾಗಿ ಗೃಹವಾಸ್ತವ್ಯಕ್ಕೆ 95 ಮಂದಿಯನ್ನು ಒಳಪಡಿಸಲಾಗಿದ್ದು, ಮಂಗಳವಾರ ಇಬ್ಬರು 14 ದಿನಗಳ ಗೃಹ ವಾಸ್ತವ್ಯ ಪೂರೈಸಿ ಬಿಡುಗಡೆಗೊಂಡಿ ದ್ದಾರೆ. 32 ಮಂದಿಯ ರಕ್ತವನ್ನು ಸಂಗ್ರ ಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 3 ಪಾಸಿಟಿವ್, 18 ನೆಗೆಟಿವ್ ಫಲಿ ತಾಂಶ ಬಂದಿದೆ. ಉಳಿದ 11 ಮಂದಿಯ ಫಲಿತಾಂಶ ಬರಬೇಕಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

Translate »