ಶಾಸಕರಿಂದ ಜನರಿಗೆ ಆಹಾರದ ಕಿಟ್ ವಿತರಣೆ
ಮಂಡ್ಯ

ಶಾಸಕರಿಂದ ಜನರಿಗೆ ಆಹಾರದ ಕಿಟ್ ವಿತರಣೆ

April 8, 2020

ಶ್ರೀರಂಗಪಟ್ಟಣ, ಏ.7(ವಿನಯ್‍ಕಾರೇಕುರ)- ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಮಂಗಳವಾರ ತಾಲೂಕಿನ ಮೋಗರಹಳ್ಳಿ(ಮಂಟಿ) ಸೇರಿದಂತೆ ವಿವಿಧೆಡೆ ಜನರಿಗೆ ಅಕ್ಕಿ, ತರಕಾರಿ, ಸೋಪು ಹಾಗೂ ಮಾಸ್ಕ್‍ಗಳನ್ನು ಉಚಿತವಾಗಿ ವಿತರಿಸಿದರು.

ದೇಶದ್ಯಾಂತ ಲಾಕ್‍ಡೌನ್ ಜಾರಿಯಲ್ಲಿದ್ದು, ಬಡವರು ಕೆಲಸವಿಲ್ಲದೆ ಜೀವನಸಾಗಿಸಲು ಕಷ್ಟಪಡುತ್ತಿದ್ದಾರೆ. ಈ ಹಿನೆÀ್ನಲೆಯಲ್ಲಿ ಶಾಸಕರು ಮಂಗಳವಾರ ತಾಲೂಕಿನ ರೈತರು ಬೆಳೆದ ಸೋರೆಕಾಯಿ, ಟೊಮೆಟೊ, ಹೂ ಕೋಸು, ಎಲೆ ಕೋಸು, ಸೋರೆಕಾಯಿ, ಕುಂಬಳಕಾಯಿ ಖರೀದಿಸಿ ಕ್ಷೇತ್ರದಲ್ಲಿರುವ ಬಡ ಜನರಿಗೆ ಉಚಿತವಾಗಿ ಹಂಚಿದರು.

ಈ ವೇಳೆ ಜನರಿಗೆ ಸ್ವಚ್ಛತೆ ಕಾಪಾಡಬೇಕು ಎಂದು ಕಿವಿ ಮಾತು ಹೇಳಿ ಪ್ರತಿ ಕುಟುಂಬಕ್ಕೂ ಎರಡು ಲೈಫ್ ಬಾಯ್ ಸೋಪು, ಎರಡು ಮಾಸ್ಕ್ ಹಾಗೂ 5ಕೆ.ಜಿ. ಅಕ್ಕಿಯನ್ನು ಆಟೋಗಳಲ್ಲಿ ತುಂಬಿಸಿ ವ್ಯವಸ್ಥಿತವಾಗಿ ಗ್ರಾಮದ ಸುಮಾರು 1,000 ಕುಟುಂಬಗಳಿಗೆ ಕಾರ್ಯಕರ್ತರ ಜೊತೆಗೂಡಿ ವಿತರಿಸಿದರು.

ಬಳಿಕ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ತಾಲೂಕಿನ ಹಲವು ಜನರು ಯಾವುದೇ ವ್ಯವಸಾಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ. ಇದರಿಂದ ಕೇವಲ ಕೂಲಿಯನ್ನೇ ನಂಬಿ ಬದುಕುತ್ತಿದ್ದವರಿಗೆ ಜೀವನ ನಡೆಸಲು ಕಷ್ಟವಾಗಿದೆ. ಆದ್ದರಿಂದ ಇಂಥಹ ಕುಟುಂಬಗಳನ್ನು ಗುರುತಿಸಿ ಉಚಿತವಾಗಿ ಆಹಾರದ ಕಿಟ್ ವಿತರಿಸಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿಯೂ ತಾಲೂಕಿನಾದ್ಯಂತ ವ್ಯವಸಾಯ ಮಾಡದೇ ಕೇವಲ ಕೂಲಿ ಮಾಡಿ ಬದುಕುತ್ತಿರುವ ಜನರನ್ನು ಗುರುತಿಸಿ ಅಂಥವರಿಗೆ ನಿರಂತರವಾಗಿ ಈ ರೀತಿಯ ಆಹಾರ ಕಿಟ್, ಸಾಬೂನು ಹಾಗೂ ಮಾಸ್ಕ್‍ಗಳನ್ನು ವಿತರಿಸ ಲಾಗುವುದು ಎಂದು ತಿಳಿಸಿದರು.

ಈ ವೇಳೆ ಕೆಆರ್‍ಎಸ್ ಗ್ರಾಪಂ ಉಪಾಧÀ್ಯಕ್ಷ ಮಂಜುನಾಥ್, ಸದಸ್ಯರಾದ ಡಾನ್ ಹೆನ್ರಿ, ಪಾಪಣ್ಣ, ವಿಜಯ್‍ಕುಮಾರ್, ಮುಖಂಡರಾದ ಬಿ.ವಿ.ಲೋಕೇಶ್, ಮಂಟಿ ವಿವೇಕ್, ಷÀಣ್ಮುಗಂ, ಕೆಆರ್‍ಎಸ್ ಠಾಣೆಯ ಪಿಎಸ್‍ಐ ನವೀನ್‍ಗೌಡ, ಆರೋಗ್ಯ ಇಲಾಖೆಯ ಡಾ.ಮೋಹನ್, ಪಿಡಿಓ ಸೇಂದಿಲ್ ಇದ್ದರು.

Translate »