ಹಾವು ಕಚ್ಚಿ ವ್ಯಕ್ತಿ ಸಾವು
ಮಂಡ್ಯ

ಹಾವು ಕಚ್ಚಿ ವ್ಯಕ್ತಿ ಸಾವು

April 8, 2020

ಮಂಡ್ಯ, ಏ.7(ನಾಗಯ್ಯ)- ಹಾವು ಕಚ್ಚಿ ವ್ಯಕ್ತಿಯೋರ್ವ ಮೃತಪಟ್ಟಿ ರುವ ಘಟನೆ ತಾಲೂಕಿನ ಹೊಳಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಲಕ್ಷ್ಮಯ್ಯ(55) ಸಾವನ್ನಪ್ಪಿದ ವ್ಯಕ್ತಿ. ಮಾ. 18ರಂದು ಲಕ್ಷ್ಮಯ್ಯ ಅವರು ತಮ್ಮ ಕಬ್ಬಿನ ಗದ್ದೆಗೆ ನೀರು ಹಾಯಿಸಲು ತೆರಳಿದ್ದ ಸಂದರ್ಭ ದಲ್ಲಿ ವಿಷಪೂರಿತ ಹಾವು ಕಚ್ಚಿದೆ. ತಕ್ಷಣ ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರಾದರೂ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸಾಂತ್ವನ: ಲಕ್ಷ್ಮಯ್ಯ ಮೃತಪಟ್ಟ ವಿಚಾರ ತಿಳಿದ ಪಿಡಿಓ ಭಾಗ್ಯ, ಕಾರ್ಯದರ್ಶಿ ಹಾಗೂ ಡೈರಿ ಅಧ್ಯಕ್ಷರಾದ ಟಿ.ಟಿ.ಶ್ರೀನಿವಾಸ್, ಆರ್‍ಎಪಿಸಿಎಂಎಸ್‍ನ ನಿರ್ದೇಶಕರಾದ ಹೆಚ್.ಸಿ.ಶ್ರೀಧರ್, ಆರೋಗ್ಯ ಸಹಾಯಕ ಶಿವಲಿಂಗು ರೈತ ಲಕ್ಷ್ಮಯ್ಯ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸರ್ಕಾರದಿಂದ ಬರುವ ಪರಿಹಾರವನ್ನು ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ಮೃತರು ಒಬ್ಬ ಮಗ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Translate »