ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)-ನಾವು, ನಾವು ಎಂದು ಮೆರೆದವರು ಮಣ್ಣಾಗಿದ್ದಾರೆ ಎಂಬುದನ್ನು ಕೆ.ಆರ್.ಪೇಟೆ ಮತದಾರರು ಈ ಚುನಾವಣೆ ಮೂಲಕ ತೋರಿಸಿದ್ದಾರೆ ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಅವರು ದೇವೇಗೌಡರ ಕುಟುಂಬದ ಮೇಲೆ ಹರಿಹಾಯ್ದಿದ್ದಾರೆ. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಮೈಸೂರಿನ ಕೆಲವು ಕ್ಷೇತ್ರಗಳು ಒಂದು ಕುಟುಂಬಕ್ಕೆ ಸೀಮಿತವಲ್ಲ ಎಂಬುದನ್ನು ಮತ್ತೊಮ್ಮೆ ಕೆ.ಆರ್.ಪೇಟೆ ಕ್ಷೇತ್ರದ ಪ್ರಬುದ್ದ ಮತದಾರರು ಸಾಬೀತು ಮಾಡಿದ್ದಾರೆ. ನಾನು ಹಾಸನದಲ್ಲಿ ಗೆದ್ದಾಗ ಆಕಸ್ಮಿಕ ಎಂದಿದ್ದರು. ಇಲ್ಲಿನ ಗೆಲುವು ಆ ಹೇಳಿಕೆಗಳಿಗೆ ತಕ್ಕ ಉತ್ತರ ನೀಡಿದೆ. ಹಣ ಬಲದಿಂದ…
ಕೆ.ಆರ್.ಪೇಟೆ ಮೂಲಕ ಮಂಡ್ಯದಲ್ಲಿ ಬಿಜೆಪಿ ಭಾಗ್ಯದ ಬಾಗಿಲು ತೆರೆದಿದೆ
December 10, 2019ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)- ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜನತೆ ಬಿಜೆಪಿಯನ್ನು ಮಂಡ್ಯ ಜಿಲ್ಲೆಯಲ್ಲಿ ಕಟ್ಟಿ ಬೆಳೆಸಲು ಸುವರ್ಣಾವಕಾಶ ಮಾಡಿಕೊಟ್ಟಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಪ್ರತಿನಿಧಿ ಇರಲಿಲ್ಲ ಎಂಬ ಕೊರಗಿತ್ತು. ಇದೀಗ ಎಲ್ಲಾ ಜಿಲ್ಲೆಯಿಂದಲೂ ನಮಗೆ ಪ್ರತಿನಿಧಿ ಸಿಕ್ಕಂತಾಗಿದೆ. ಈಗ ನಮ್ಮ ಪಕ್ಷದ್ದು ಸ್ಥಿರ ಸರ್ಕಾರವಾಗಿದೆ. ಕ್ಷೇತ್ರದ ಜನ ದೊಡ್ಡ ಬಹುಮಾನ ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆ ಯಲ್ಲಿ ಬಿಜೆಪಿ ಖಾತೆ ತೆರೆಯಲು ನಾರಾಯಣಗೌಡರ…
ಕೆಟ್ಟು ನಿಂತ ಕಬ್ಬಿನ ಲಾರಿಗೆ ಬೈಕ್ ಡಿಕ್ಕಿ: ಸವಾರರಿಬ್ಬರ ಸಾವು
December 10, 2019ಪಾಂಡವಪುರ, ಡಿ.9- ರಸ್ತೆ ಬದಿ ಕೆಟ್ಟು ನಿಂತಿದ್ದ ಕಬ್ಬಿನ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದೆ. ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದ ನಿವಾಸಿ ಶಿವರುದ್ರಪ್ಪ(24), ಮಹೇಶ್(24) ಸಾವನ್ನಪ್ಪಿದವರು. ಕಾರ್ಯ ನಿಮಿತ್ತ ನಂಜನಗೂಡಿನಿಂದ ಪಾಂಡವಪುರಕ್ಕೆ ಆಗಮಿಸಿದ್ದ ಶಿವರುದ್ರಪ್ಪ ಹಾಗೂ ಮಹೇಶ್ ಕೆಲಸ ಮುಗಿಸಿ ಕೊಂಡು ಭಾನುವಾರ ರಾತ್ರಿ ನಂಜನಗೂಡಿಗೆ ವಾಪಸ್ಸಾಗುವ ವೇಳೆ ರಿಲಯನ್ಸ್ ಪೆಟ್ರೋಲ್ ಬಂಕ್ ಸಮೀಪ ಕೆಟ್ಟು ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್‍ನಲ್ಲಿ ಡಿಕ್ಕಿ…
ಗೃಹಿಣಿ ಆತ್ಮಹತ್ಯೆ
December 10, 2019ಪಾಂಡವಪುರ, ಡಿ.9- ಹೊಟ್ಟೆನೋವು ತಾಳಲಾರದೇ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟ ಣದ ಶಾಂತಿನಗರದ ನಿವಾಸಿ ಶಿವಕುಮಾರ್ ಪತ್ನಿ ಭವ್ಯಾ(30) ಆತ್ಮಹತ್ಯೆ ಮಾಡಿಕೊಂಡವರು. ಆಗಾಗ್ಗೆ ಕಾಣಿಸಿ ಕೊಳ್ಳುತ್ತಿದ್ದ ಹೊಟ್ಟೆ ನೋವಿಗೆ ಭವ್ಯಾ ಸಾಕಷ್ಟು ಚಿಕಿತ್ಸೆ ಪಡೆದಿದ್ದರೂ ಹೊಟ್ಟೆ ನೋವು ಗುಣವಾಗಿರಲಿಲ್ಲ. ಮತ್ತೆ ಭಾನುವಾರ ರಾತ್ರಿ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭವ್ಯಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಬೆಳಿಗ್ಗೆ ಇದನ್ನು ಕಂಡ ಪತಿ ಶಿವಕುಮಾರ್ ಪಟ್ಟಣ ಪೊಲೀಸರಿಗೆ ವಿಷಯ…
ಕೆಸಿಎನ್ ಗೆಲುವು: ಹೊಳೆ ಆಂಜನೇಯನಿಗೆ 101 ಈಡುಗಾಯಿ
December 10, 2019ಮದ್ದೂರು, ಡಿ.9- ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆದ್ದರೆ 101 ತೆಂಗಿನ ಕಾಯಿ ಹೊಡೆಯಲಾಗುವುದು ಎಂದು ಹರಕೆ ಕಟ್ಟಿಕೊಂಡು, ಹರಕೆ ಈಡೇರಿದ ಹಿನ್ನೆಲೆಯಲ್ಲಿ ಮನ್‍ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಹಾಗೂ ಅವರ ಬೆಂಬಲಿಗರು ಪಟ್ಟಣದ ಇತಿಹಾಸ ಪ್ರಸಿದ್ಧ ಹೊಳೆ ಆಂಜನೇಯಸ್ವಾಮಿ ದೇಗುದಲ್ಲಿ ಈಡುಗಾಯಿ ಹೊಡೆದರು. ಈ ವೇಳೆ ಮಾತನಾಡಿದ ಅವರು, ನಾರಾಯಣಗೌಡರು ಉಪ ಚುನಾವಣೆಯಲ್ಲಿ ಜಯಶೀಲರಾದರೆ ಪಟ್ಟಣದ ಹೊಳೆ ಆಂಜ ನೇಯಸ್ವಾಮಿಗೆ 101 ತೆಂಗಿನ ಕಾಯಿ ಈಡುಗಾಯಿ ಹೊಡೆಯುತ್ತೇನೆಂದು ಹರಕೆ ಕಟ್ಟಿಕೊಳ್ಳಲಾಗಿತ್ತು, ಹರಕೆ ಈಡೇರಿದ ಹಿನ್ನೆಲೆಯಲ್ಲಿ…
ರೈತ ಆತ್ಮಹತ್ಯೆ
December 10, 2019ಪಾಂಡವಪುರ, ಡಿ.9- ಸಾಲಬಾಧೆ ತಾಳ ಲಾರದೇ ರೈತರೊಬ್ಬರು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಗಾಣದ ಹೊಸೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಸ್ವಾಮೀ ಗೌಡ(45) ಆತ್ಮಹತ್ಯೆ ಮಾಡಿಕೊಂಡವರು. ತಂದೆ ಮಾಸ್ತೀಗೌಡÀರ ಹೆಸರಲ್ಲಿದ್ದ 20 ಗುಂಟೆ ಹಾಗೂ ತಾತ ಜವರೇಗೌಡರ ಹೆಸರಿನಲ್ಲಿದ್ದ 1 ಎಕರೆ ಜಮೀನಿನಲ್ಲಿ ಸ್ವಾಮೀಗೌಡರು ಬೇಸಾಯ ಮಾಡುತ್ತಿದ್ದರು. ಇದಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಸೇರಿದಂತೆ ವಿವಿಧ ಖಾಸಗಿ ಬ್ಯಾಂಕ್ ಹಾಗೂ ಕೈ ಸಾಲ ಸೇರಿದಂತೆ 7 ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲಗಾರರ…
ಬೆಳೆ ರಕ್ಷಣೆಗಾಗಿ ಅನಿರ್ದಿಷ್ಟ ಹೋರಾಟ
June 26, 2019ಮುಂದುವರೆದ ರೈತರ ಅಹೋರಾತ್ರಿ ಧರಣಿ ಕಾವೇರಿ ಮಂಡಳಿ ಆದೇಶಕ್ಕೆ ಸ್ವಾಗತ: ನಾಲೆಗಳಿಗೆ ನೀರು ಬಿಡದಿರುವುದಕ್ಕೆ ಆಕ್ರೋಶ ರೈತ ಹೋರಾಟಕ್ಕೆ ಕಾಂಗ್ರೆಸ್‍ನ ಹಲವು ಮುಖಂಡರ ಸಾಥ್ ಮಂಡ್ಯ, ಜೂ.25(ನಾಗಯ್ಯ)- ಬೆಳೆ, ಜನ ಜಾನುವಾರುಗಳಿಗೆ ಕುಡಿಯಲು ವಿಸಿ ಮತ್ತು ಹೇಮಾವತಿ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ನಗರದ ಕಾವೇರಿ ನೀರಾವರಿ ನಿಗಮದ ಬಳಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ 5ನೇ ದಿನವೂ ಮುಂದುವರಿದಿದೆ. ಇಂದಿನ ಹೋರಾಟದಲ್ಲಿ ಕರವೇ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಮುಖಂಡರಾದ ರವಿಕುಮಾರ್ ಗಣಿಗ ಸೇರಿದಂತೆ ಹಲವು ಕಾಂಗ್ರೆಸ್…
ಬೆಳೆಗೆ ನೀರು ಹರಿಸುವಂತೆ ರೈತರ ಅಹೋರಾತ್ರಿ ಧರಣಿ
June 26, 2019ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಮಂಜುಶ್ರೀ ಪತ್ರ ಮಂಡ್ಯ, ಜೂ.25- ಕೆಆರ್‍ಎಸ್ ನಿಂದ ಬೆಳೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗದಲ್ಲಿ ಕಳೆದ 5 ದಿನ ಗಳಿಂದ ಕರ್ನಾಟಕ ರಾಜ್ಯ ರೈತ ಸಂಘದಿಂದ ಅಹೋ ರಾತ್ರಿ ಧರಣಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಂಜುಶ್ರೀ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್‍ಗೆ ಪತ್ರ ಬರೆದಿದ್ದಾರೆ. ಪ್ರಸ್ತುತ ಕೆಆರ್‍ಎಸ್ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಿದ್ದು, ಈ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳುವಂತೆ ಕಾವೇರಿ ನೀರಾವರಿ…
ರೈತನ ಆತ್ಮಹತ್ಯೆಗೆ ಬ್ಯಾಂಕ್ ಅಧಿಕಾರಿಗಳೇ ನೇರ ಹೊಣೆ: ಆರೋಪ
June 26, 2019ಮೃತ ರೈತನ ಪುತ್ರನಿಗೆ ಸರ್ಕಾರಿ ಹುದ್ದೆ ನೀಡಲು ಬಿಎಸ್‍ಪಿ ಆಗ್ರಹ ನಾಗಮಂಗಲ, ಜೂ.25- ತಾಲೂಕಿನ ಹೆತ್ತಗೋನಹಳ್ಳಿ ಗ್ರಾಮದ ರೈತ ಹನು ಮಂತನ ಆತ್ಮಹತ್ಯೆಗೆ ಪಟ್ಟಣದ ಎಸ್‍ಬಿಐ ಅಧಿಕಾರಿಗಳೇ ನೇರ ಹೊಣೆ ಎಂದು ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಂ ಕೃಷ್ಣಮೂರ್ತಿ ಆರೋಪಿಸಿದರು. ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ರೈತ ಹನುಮಂತನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಸುದ್ದಿಗಾರೊಂದಿಗೆ ಮಾತ ನಾಡಿದ ಅವರು, ಬ್ಯಾಂಕಿನವರು ಅಮಾ ಯಕರಿಗೆ ಲಕ್ಷಾಂತರ ರೂ. ಟ್ರ್ಯಾಕ್ಟರ್ ಸಾಲ ನೀಡಿ ಸಾಲ…
ಕೆ.ಆರ್.ಪೇಟೆಯ ವಿವಿಧ ಗ್ರಾಮಗಳಲ್ಲಿ ಸ್ವಚ್ಛತಾ ರಥಕ್ಕೆ ಸ್ವಾಗತ
June 26, 2019ಕೆ.ಆರ್.ಪೇಟೆ, ಜೂ.25(ಶ್ರೀನಿವಾಸ್)- ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ರೋಗ ರುಜಿನಗಳಿಂದ ದೂರ ಇರಬಹುದು ಎಂದು ತೆಂಡೇಕೆರೆ ಗ್ರಾಪಂ ಅಧ್ಯಕ್ಷೆ ಜಯಮ್ಮ ತಿಳಿಸಿದರು. ತಾಲೂಕಿನ ತೆಂಡೇಕೆರೆ ಗ್ರಾಪಂನಲ್ಲಿ ಸ್ವಚ್ಛಮೇವ ಜಯತೆ ಆಂದೋಲನದ ಜನಜಾಗೃತಿಗಾಗಿ ಆಗಮಿಸಿದ “ಸ್ವಚ್ಛತಾ ರಥ”ಕ್ಕೆ ಸ್ವಾಗತ ಕೋರಿ ಅವರು ಮಾತನಾಡಿದರು. ಈ ವೇಳೆ ಉಪಾಧ್ಯಕ್ಷೆ ಶಾಂತಮ್ಮ, ಪಿಡಿಓ ಮಹಾಲಕ್ಷ್ಮೀ, ಕಾರ್ಯದರ್ಶಿ ಗಂಟಯ್ಯ, ಗ್ರಾಪಂ ಸದಸ್ಯರು, ನೌಕರರು, ಶಿಕ್ಷಕ ಧರ್ಮ ರತ್ನಾಕರ್ ಮತ್ತಿತರರಿದ್ದರು. ಐಚನಹಳ್ಳಿ: ಇಲ್ಲಿನ ಗ್ರಾಪಂಗೆ ಆಗಮಿಸಿದ ಸ್ವಚ್ಛತಾ ರಥವನ್ನು ಅಧ್ಯಕ್ಷ ಮೋಹನ್ ಸ್ವಾಗತಿಸಿದರು. ಪಿಡಿಓ…