ಕೆ.ಆರ್.ಪೇಟೆ ಮೂಲಕ ಮಂಡ್ಯದಲ್ಲಿ ಬಿಜೆಪಿ ಭಾಗ್ಯದ ಬಾಗಿಲು ತೆರೆದಿದೆ
ಮಂಡ್ಯ

ಕೆ.ಆರ್.ಪೇಟೆ ಮೂಲಕ ಮಂಡ್ಯದಲ್ಲಿ ಬಿಜೆಪಿ ಭಾಗ್ಯದ ಬಾಗಿಲು ತೆರೆದಿದೆ

December 10, 2019

ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)- ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಜನತೆ ಬಿಜೆಪಿಯನ್ನು ಮಂಡ್ಯ ಜಿಲ್ಲೆಯಲ್ಲಿ ಕಟ್ಟಿ ಬೆಳೆಸಲು ಸುವರ್ಣಾವಕಾಶ ಮಾಡಿಕೊಟ್ಟಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಮ್ಮ ಪಕ್ಷಕ್ಕೆ ಪ್ರತಿನಿಧಿ ಇರಲಿಲ್ಲ ಎಂಬ ಕೊರಗಿತ್ತು. ಇದೀಗ ಎಲ್ಲಾ ಜಿಲ್ಲೆಯಿಂದಲೂ ನಮಗೆ ಪ್ರತಿನಿಧಿ ಸಿಕ್ಕಂತಾಗಿದೆ. ಈಗ ನಮ್ಮ ಪಕ್ಷದ್ದು ಸ್ಥಿರ ಸರ್ಕಾರವಾಗಿದೆ. ಕ್ಷೇತ್ರದ ಜನ ದೊಡ್ಡ ಬಹುಮಾನ ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆ ಯಲ್ಲಿ ಬಿಜೆಪಿ ಖಾತೆ ತೆರೆಯಲು ನಾರಾಯಣಗೌಡರ ರಾಜೀನಾಮೆ ಕಾರಣವಾಯಿತು. ಕ್ಷೇತ್ರದವರೇ ಸಿಎಂ ಆಗಿರುವುದರಿಂದ ಅಭಿವೃದ್ಧಿಯಾಗುತ್ತದೆ ಎಂದು ಎಲ್ಲಾ ವರ್ಗ ದವರೂ ಕೈ ಹಿಡಿದಿದ್ದಾರೆ. ಜನರ ಭರವಸೆಯನ್ನು ಈಡೇರಿಸುತ್ತೇವೆ ಎಂದರು.

Translate »