ಕೆ.ಆರ್.ಪೇಟೆಯ ವಿವಿಧ ಗ್ರಾಮಗಳಲ್ಲಿ ಸ್ವಚ್ಛತಾ ರಥಕ್ಕೆ ಸ್ವಾಗತ
ಮಂಡ್ಯ

ಕೆ.ಆರ್.ಪೇಟೆಯ ವಿವಿಧ ಗ್ರಾಮಗಳಲ್ಲಿ ಸ್ವಚ್ಛತಾ ರಥಕ್ಕೆ ಸ್ವಾಗತ

June 26, 2019

ಕೆ.ಆರ್.ಪೇಟೆ, ಜೂ.25(ಶ್ರೀನಿವಾಸ್)- ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ರೋಗ ರುಜಿನಗಳಿಂದ ದೂರ ಇರಬಹುದು ಎಂದು ತೆಂಡೇಕೆರೆ ಗ್ರಾಪಂ ಅಧ್ಯಕ್ಷೆ ಜಯಮ್ಮ ತಿಳಿಸಿದರು.

ತಾಲೂಕಿನ ತೆಂಡೇಕೆರೆ ಗ್ರಾಪಂನಲ್ಲಿ ಸ್ವಚ್ಛಮೇವ ಜಯತೆ ಆಂದೋಲನದ ಜನಜಾಗೃತಿಗಾಗಿ ಆಗಮಿಸಿದ “ಸ್ವಚ್ಛತಾ ರಥ”ಕ್ಕೆ ಸ್ವಾಗತ ಕೋರಿ ಅವರು ಮಾತನಾಡಿದರು. ಈ ವೇಳೆ ಉಪಾಧ್ಯಕ್ಷೆ ಶಾಂತಮ್ಮ, ಪಿಡಿಓ ಮಹಾಲಕ್ಷ್ಮೀ, ಕಾರ್ಯದರ್ಶಿ ಗಂಟಯ್ಯ, ಗ್ರಾಪಂ ಸದಸ್ಯರು, ನೌಕರರು, ಶಿಕ್ಷಕ ಧರ್ಮ ರತ್ನಾಕರ್ ಮತ್ತಿತರರಿದ್ದರು.

ಐಚನಹಳ್ಳಿ: ಇಲ್ಲಿನ ಗ್ರಾಪಂಗೆ ಆಗಮಿಸಿದ ಸ್ವಚ್ಛತಾ ರಥವನ್ನು ಅಧ್ಯಕ್ಷ ಮೋಹನ್ ಸ್ವಾಗತಿಸಿದರು. ಪಿಡಿಓ ರಮೇಶ್‍ಮೂರ್ತಿ, ನೌಕರರಾದ ಅಶೋಕ್, ರೇವಣ್ಣ, ಮುಖಂಡರಾದ ಹೊನ್ನೇಗೌಡ, ಕುಮಾರಣ್ಣ ಮತ್ತಿತರರಿದ್ದರು.

ಬೂಕನಕೆರೆ: ಬೂಕನಕೆರೆ ಗ್ರಾಪಂನಿಂದ ವಿವಿಧ ಗ್ರಾಮಗಳಿಗೆ ಅರಿವು ಮೂಡಿಸಲು ಹೊರಟ ಸ್ವಚ್ಛತಾ ರಥಕ್ಕೆ ಪಿಡಿಓ ಡಾ.ನರಸಿಂಹರಾಜು ಚಾಲನೆ ನೀಡಿದರು. ಗ್ರಾಪಂ ಸದಸ್ಯರಾದ ಕೆಂಚೇಗೌಡ, ದೇವರಾಜು, ನಾಗರಾಜು, ಯೋಗೇಶ್ ಮತ್ತಿತರರಿದ್ದರು.

ಬಲ್ಲೇನಹಳ್ಳಿ: ಗ್ರಾಪಂಗೆ ಆಗಮಿಸಿದ ಸ್ವಚ್ಛತಾ ರಥಕ್ಕೆ ಪಿಡಿಓ ಹರ್ಷವರ್ಧನ್, ಗ್ರಾಪಂ ನೌಕರರು ಸ್ವಾಗತಿಸಿ ದರು. ಗ್ರಾಪಂಸದಸ್ಯರಾದ ಮಂಜು, ಪುಟ್ಟಯ್ಯ, ಶಾಂತಮ್ಮ, ನೌಕರರಾದ ಗೋಪಾಲ್, ಎಂ.ಬಿ.ಚಂದ್ರೇ ಗೌಡ, ರವಿ, ರವೀಶ್, ಡಿ.ಕುಮಾರ್ ಇದ್ದರು.

ಗಂಜಿಗೆರೆ: ಗಂಜಿಗೆರೆ ಗ್ರಾಪಂಗೆ ಆಗಮಿಸಿದ ಸ್ವಚ್ಛತಾ ರಥವನ್ನು ಗ್ರಾಪಂ ಸದಸ್ಯ ವಿಜಯಕುಮಾರ್ ಸ್ವಾಗತಿಸಿದರು. ಗ್ರಾಪಂ ಲೆಕ್ಕ ಸಹಾಯಕ ರಘುನಾಥ್ ಸಾರ್ವಜನಿಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಸೋಮನಹಳ್ಳಿ: ಗ್ರಾಪಂಗೆ ಆಗಮಿಸಿದ ಸ್ವಚ್ಛತಾ ರಥಕ್ಕೆ ಗ್ರಾಪಂ ಸದಸ್ಯ ಮಹಾದೇವ್ ನೇತೃತ್ವದಲ್ಲಿ ಸ್ವಾಗತ ಕೋರಲಾಯಿತು. ಕಂಪ್ಯೂಟರ್ ಆಪರೇಟರ್ ಕಾಂತಾ ಅವರು ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಿದರು.

ಆಲಂಬಾಡಿಕಾವಲು: ತಾಲೂಕಿನ ಆಲಂಬಾಡಿ ಕಾವಲು ಗ್ರಾಪಂಗೆ ಆಗಮಿಸಿದ ಸ್ವಚ್ಛತಾ ರಥವನ್ನು ತಾಪಂ ಮಾಜಿ ಅಧ್ಯಕ್ಷ ಪಿ.ನಂಜುಂಡೇಗೌಡ ಸ್ವಾಗತಿಸಿ ದರು. ಕಂಪ್ಯೂಟರ್ ಆಪರೇಟರ್ ಬಿ.ಪಿ.ಪಲ್ಲವಿ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಎ.ರಾಜು, ಅತೀಕ್ ಪಾಷಾ, ಎ.ಜೆ.ನಾಗೇಶ್, ಕಾಂತರಾಜು, ಎ.ಎಂ.ಮಂಜುನಾಥ್ ಮತ್ತಿತರರಿದ್ದರು.

Translate »