ಶೀಘ್ರದಲ್ಲೇ ನಿಖಿಲ್ ಮಂಡ್ಯದಲ್ಲಿ ಹೊಸ ಮನೆಗೆ ಪ್ರವೇಶ
ಮಂಡ್ಯ

ಶೀಘ್ರದಲ್ಲೇ ನಿಖಿಲ್ ಮಂಡ್ಯದಲ್ಲಿ ಹೊಸ ಮನೆಗೆ ಪ್ರವೇಶ

June 26, 2019

ಮೃತ ಜೆಡಿಎಸ್ ಕಾರ್ಯಕರ್ತನ ನಿವಾಸಕ್ಕೆ ಭೇಟಿ, ಸಾಂತ್ವನ
ಮಂಡ್ಯ, ಜೂ.25(ನಾಗಯ್ಯ)- ಲೋಕ ಸಭಾ ಚುನಾವಣೆಯಲ್ಲಿ ಸೋಲನ್ನನುಭವಿ ಸಿದ ಬಳಿಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸೋತರೂ ಕ್ಷೇತ್ರದಿಂದ ದೂರ ಇರಲ್ಲ. ಅಲ್ಲೇ ಮನೆ ಮಾಡಿ ಕೊಂಡು ಜನರ ಜತೆ ಇರುತ್ತೇನೆ ಎಂದಿದ್ದರು. ಅದರಂತೆ ಇದೀಗ ಮಂಡ್ಯ ದಿಂದ ಒಂದು ಕಿ.ಮೀ.ದೂರದಲ್ಲೇ ನಿಖಿಲ್ ತೋಟ ಖರೀದಿಸಿದ್ದಾರೆ.

ಈ ಕುರಿತು ಮಳವಳ್ಳಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮಂಡ್ಯ ಸಿಟಿಗೆ ಒಂದು ಕಿ.ಮೀ. ದೂರದಲ್ಲೇ ತೋಟ ಖರೀದಿಸಿದ್ದೇನೆ. `ನಿಮ್ಮ ಮನೆ’ ಎಂದು ಮನೆಗೆ ಹೆಸರಿಡುತ್ತೇನೆ. ನಾನು ಮನೆಯಲ್ಲಿ ಇಲ್ಲ ಅಂದ್ರೂ ಯಾರು ಬೇಕಾದರೂ ಮನೆಗೆ ಬರಬಹುದು. 15 ದಿನದೊಳಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದರು.

ಮಂಡ್ಯ ಪ್ರವಾಸದ ಬಗ್ಗೆ ಜೆಡಿಎಸ್ ವರಿಷ್ಠರ ಜತೆ ಚರ್ಚಿಸಿದ್ದೇನೆ. ನನಗೆ ಮತ ಚಲಾಯಿಸಿದ ಮತದಾರರಿಗೆ ಧನ್ಯವಾದ ಗಳು. ಚುನಾವಣೆ ಫಲಿತಾಂಶದ ನಂತರ ನಿಖಿಲ್ ಸೋತಿದ್ದರಿಂದ ಧೃತಿಗೆಟ್ಟು ಕುಡಿದು ಗಲಾಟೆ ಮಾಡಿದ್ದಾರೆಂದು ಯಾವುದೋ ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬರೆದಿದ್ದರು. ಆದರೆ ಆ ರೀತಿ ಬರೆಯುವ ಮುನ್ನಾ ಆ ಮಾಹಿತಿ ಸರಿ ಇದೆಯಾ ಇಲ್ಲವಾ ಎನ್ನುವು ದನ್ನು ಪರಿಶೀಲಿಸಿ. ಈ ಸಂಗತಿ ನನಗೆ ಬಹಳ ನೋವುಂಟು ಮಾಡಿದೆ. ನನ್ನ ಧೃತಿ ಗೆಡಿಸುವುದಕ್ಕೆ ಸಾಧ್ಯವಿಲ್ಲ ಎಂದರು.

ಕಾಲೇಜು ದಿನಗಳಲ್ಲಿ ನಾನು ಕುಡಿಯು ತ್ತಿದ್ದೆ. 8 ವರ್ಷ ಆಯ್ತು ನಾನು ಕುಡಿಯು ವುದು ಬಿಟ್ಟು. ಆರೋಗ್ಯದ ದೃಷ್ಟಿಯಿಂದ, ಸಾರ್ವಜನಿಕ ಬದುಕಲ್ಲಿ ಇರುವುದರಿಂದ ನಾನು ಕುಡಿಯುವುದನ್ನು ಬಿಟ್ಟಿದ್ದೇನೆ. ದೇವೇಗೌಡರ ಮುಂದೆ ನಿಂತು ಮಾತ ನಾಡುವ ಧೈರ್ಯ ನನಗಿಲ್ಲ. ಹೀಗಿರುವಾಗ ನಾನು ಕುಡಿದು ಅವರ ಮುಂದೆ ನಿಲ್ಲಲು ಸಾಧ್ಯಾನಾ? ರಾಜ್ಯಾಧ್ಯಕ್ಷ ಸ್ಥಾನ, ಯುವ ಘಟಕಕ್ಕೆ ಅಧ್ಯಕ್ಷ ಸ್ಥಾನ ಪಡೆಯಲು ನನಗಿನ್ನು ಅನುಭವದ ಅವಶ್ಯಕತೆ ಇದೆ. ನಾನು ಕಾರ್ಯಕರ್ತನಾಗೆ ಜೆಡಿಎಸ್ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು.

ರಾಜಕೀಯ ಪಾಠ ಹೇಳಿಸಿ ಕೊಳ್ಳುತ್ತಿದ್ದೇನೆ: ನಾನು ಪ್ರತಿನಿತ್ಯ ಕುಮಾರಸ್ವಾಮಿ, ದೇವೇ ಗೌಡರ ಜೊತೆ ಚರ್ಚಿಸುತ್ತಿದ್ದೇನೆ. ಅವರ ರಾಜಕೀಯ ಅನುಭವವನ್ನು ನನಗೆ ಹೇಳಿಕೊಡುತ್ತಿದ್ದಾರೆ. ನನಗೆ ಚುನಾವಣೆಗೆ ನಿಲ್ಲಲು ಅವಕಾಶ ಮಾಡಿಕೊಟ್ಟ ಜಿಲ್ಲೆಯ ಶಾಸಕರು, ಕಾರ್ಯಕರ್ತರಿಗೆ ಧನ್ಯವಾದ ಗಳು. ನಾನು ಜೆಡಿಎಸ್ ಕಾರ್ಯಕರ್ತರ ಪರವಾಗಿ ಸಾಯುವವರೆಗೂ ಇರುತ್ತೇನೆ ಎಂದಿದ್ದೆ. ಆ ಮಾತು ಚುನಾವಣೆಗೆ ಮಾತ್ರ ಸೀಮಿತ ಅಲ್ಲ. ಮನೆ ಬಳಿ ಸಿಎಂ ನೋಡಲು ರಾಜ್ಯದ ಹಲವೆಡೆ ಇಂದು ಜನರು ಬರುತ್ತಾರೆ. ಕೆಲಸದ ಒತ್ತಡದಿಂದ ಎಲ್ಲ ರನ್ನೂ ಸಿಎಂ ಭೇಟಿ ಮಾಡಲು ಸಾಧ್ಯ ವಿಲ್ಲ. ಆ ವೇಳೆ ಆ ಜನರ ಸಮಸ್ಯೆಗೆ ಮನೆ ಬಳಿ ಸ್ಪಂದಿಸುತ್ತಿದ್ದೇನೆ ಎಂದರು.

ಸುಮಲತಾ ವಿರುದ್ಧ ವ್ಯಂಗ್ಯ: ಚಲುವಣ್ಣ ನಿಗೆ ಇವತ್ತು ಕಾವೇರಿ ನೀರಿನ ಬಗ್ಗೆ ಕಾಳಜಿ ಬಂದಿದೆ. ಆರಿಸಿ ಕಳಿಸಿರುವ ಸಂಸದರು ಕಾವೇರಿ ವಿಚಾರವಾಗಿ ಹೋರಾಟ ಮಾಡು ತ್ತಾರೆ. ಬಿಜೆಪಿ ಬೆಂಬಲ ನೂತನ ಸಂಸದರಿ ಗಿದೆ. ಸಖತ್ ಶಕ್ತಿಶಾಲಿ ಅವರು. ನಾವೆಲ್ಲ ಯಾರು? ನಾವೆಲ್ಲ ಸಣ್ಣವರು. ಹೋರಾಟ ಮಾಡುತ್ತಾರೆ, ಜನರ ನಿರೀಕ್ಷೆಗೆ ತಕ್ಕಂತೆ ಅವರು ಕೆಲಸ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಮೃತ ಜೆಡಿಎಸ್ ಕಾರ್ಯಕರ್ತನ ಮನೆಗೆ ಭೇಟಿ: ಇದೇ ವೇಳೆ ಅನಾರೋಗ್ಯದಿಂದ ಮೃತಪಟ್ಟಿದ್ದ ಮಳವಳ್ಳಿಯ ಜೆಡಿಎಸ್ ಕಾರ್ಯಕರ್ತ ಸಂತೋಷ್ ನಿವಾಸಕ್ಕೆ ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವನ ಹೇಳಿ, ಭಾವುಕರಾದರು. ನಿವಾಸಕ್ಕೆ ಆಗಮಿ ಸುತ್ತಿದ್ದಂತೆ ನಿಖಿಲ್ ಕಾಲಿಗೆ ಬಿದ್ದು ನಮ ಸ್ಕರಿಸಿದ ಮೃತ ಸಂತೋಷ ತಾಯಿ ಜಯಮ್ಮ ಅವರನ್ನು ಸಂತೈಸಿದ ನಿಖಿಲ್, ಬಳಿಕ ಜಯಮ್ಮ ಕಾಲಿಗೆ ನಮಸ್ಕರಿಸಿ ಸಂಸ್ಕಾರ ಮೆರೆದ ಸಿಎಂ ಪುತ್ರನ ನಡವಳಿಕೆ ಎಲ್ಲರ ಮೆಚ್ಚುಗೆಗೆ ಪಾತ್ರ ವಾಯಿತು. ಇದೇ ವೇಳೆ 1 ಲಕ್ಷ ರೂ.ಗಳನ್ನು ಸಂತೋಷ್ ಕುಟುಂಬದವರಿಗೆ ನೀಡಿದರು.

ಈ ವೇಳೆ ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಎಂಎಲ್‍ಸಿ ಮರಿತಿಬ್ಬೇಗೌಡ ಸೇರಿದಂತೆ ಇನ್ನಿತರರು. ಉಪಸ್ಥಿತರಿದ್ದರು. ಆದರೆ ಶಾಸಕ ಅನ್ನದಾನಿ ಗೈರು ಎದ್ದು ಕಾಣುತ್ತಿತ್ತು.

Translate »