ರೈತನ ಆತ್ಮಹತ್ಯೆಗೆ ಬ್ಯಾಂಕ್ ಅಧಿಕಾರಿಗಳೇ ನೇರ ಹೊಣೆ: ಆರೋಪ
ಮಂಡ್ಯ

ರೈತನ ಆತ್ಮಹತ್ಯೆಗೆ ಬ್ಯಾಂಕ್ ಅಧಿಕಾರಿಗಳೇ ನೇರ ಹೊಣೆ: ಆರೋಪ

June 26, 2019

ಮೃತ ರೈತನ ಪುತ್ರನಿಗೆ ಸರ್ಕಾರಿ ಹುದ್ದೆ ನೀಡಲು ಬಿಎಸ್‍ಪಿ ಆಗ್ರಹ
ನಾಗಮಂಗಲ, ಜೂ.25- ತಾಲೂಕಿನ ಹೆತ್ತಗೋನಹಳ್ಳಿ ಗ್ರಾಮದ ರೈತ ಹನು ಮಂತನ ಆತ್ಮಹತ್ಯೆಗೆ ಪಟ್ಟಣದ ಎಸ್‍ಬಿಐ ಅಧಿಕಾರಿಗಳೇ ನೇರ ಹೊಣೆ ಎಂದು ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಂ ಕೃಷ್ಣಮೂರ್ತಿ ಆರೋಪಿಸಿದರು.

ಸಾಲಬಾಧೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ರೈತ ಹನುಮಂತನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಸುದ್ದಿಗಾರೊಂದಿಗೆ ಮಾತ ನಾಡಿದ ಅವರು, ಬ್ಯಾಂಕಿನವರು ಅಮಾ ಯಕರಿಗೆ ಲಕ್ಷಾಂತರ ರೂ. ಟ್ರ್ಯಾಕ್ಟರ್ ಸಾಲ ನೀಡಿ ಸಾಲ ತೀರುವಳಿ ಮಾರ್ಗ ಗಳನ್ನು ತಿಳಿಸುತ್ತಿಲ್ಲ. ಸರಿಯಾಗಿ ಅವರಿಗೆ ನೋಟಿಸ್ ಕೊಟ್ಟು ಎಚ್ಚರಿಸುವ ಕೆಲಸ ಕೂಡ ಮಾಡುತ್ತಿಲ್ಲ, ಸಾಲ ಮನ್ನಾ ಆಗಿರಬಹು ದೆಂದು ವಿಚಾರಿಸಲು ಬಂದ ರೈತ ಹನು ಮಂತನಿಗೆ ಬಡ್ಡಿ ಅಸಲು ಸೇರಿ 21 ಲಕ್ಷ ಸಾಲವಿದ್ದು ನಿಮ್ಮ ಸಾಲ ಮನ್ನಾ ಆಗಿಲ್ಲ. ಸಾಲ ತೀರಿಸದಿದ್ದರೆ ಆಸ್ತಿ ಜಪ್ತಿ ಮಾಡ ಲಾಗುವುದು ಎಂದು ತಿಳಿಸಿದ್ದರಿಂದ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದ್ದರಿಂದ ರೈತನ ಸಾವಿಗೆ ನಾಗಮಂಗಲ ಎಸ್‍ಬಿಐ ಬ್ಯಾಂಕಿನ ಅಧಿಕಾರಿಗಳೇ ನೇರ ಹೊಣೆ ಗಾರರು ಎಂದು ಆರೋಪಿಸಿದರು.

ರೈತನ ಮಗನಿಗೆ ಸರ್ಕಾರಿ ಹುದ್ದೆ ನೀಡಿ: ಸಾಲದ ಸುಳಿಗೆ ಸಿಲುಕಿ ಅತ್ಮಹತ್ಯೆ ಮಾಡಿ ಕೊಂಡ ರೈತನ ಕುಟುಂಬಕ್ಕೆ ನೆರವು ನೀಡಲು ರಾಜ್ಯ ಸರ್ಕಾರ ಹನುಮಂತನ ಪುತ್ರ ರಾಜೇಶ್‍ಗೆ ಸರ್ಕಾರಿ ಹುದ್ದೆ ನೀಡ ಬೇಕು ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಕುಟುಂಬಕ್ಕೆ ಸರ್ಕಾರಿ ಸೌಲಭ್ಯಗಳನ್ನು ನೀಡುವ ಮೂಲಕ ಸಾಲದ ಆರ್ಥಿಕ ಹೊರೆಯಿಂದ ರಕ್ಷಿಸ ಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ವೇಳೆ ಬಿಎಸ್‍ಬಿ ಮುಖಂಡರಾದ ವಜ್ರಮುನಿ, ಪ್ರಮೋದ್, ಮಹದೇವ್, ವಿಜಿಕುಮಾರ್ ಮುಂತಾದವರಿದ್ದರು.

Translate »