ಬೆಳೆ ರಕ್ಷಣೆಗಾಗಿ ಅನಿರ್ದಿಷ್ಟ ಹೋರಾಟ
ಮಂಡ್ಯ

ಬೆಳೆ ರಕ್ಷಣೆಗಾಗಿ ಅನಿರ್ದಿಷ್ಟ ಹೋರಾಟ

June 26, 2019
  • ಮುಂದುವರೆದ ರೈತರ ಅಹೋರಾತ್ರಿ ಧರಣಿ
  • ಕಾವೇರಿ ಮಂಡಳಿ ಆದೇಶಕ್ಕೆ ಸ್ವಾಗತ: ನಾಲೆಗಳಿಗೆ ನೀರು ಬಿಡದಿರುವುದಕ್ಕೆ ಆಕ್ರೋಶ
  • ರೈತ ಹೋರಾಟಕ್ಕೆ ಕಾಂಗ್ರೆಸ್‍ನ ಹಲವು ಮುಖಂಡರ ಸಾಥ್

ಮಂಡ್ಯ, ಜೂ.25(ನಾಗಯ್ಯ)- ಬೆಳೆ, ಜನ ಜಾನುವಾರುಗಳಿಗೆ ಕುಡಿಯಲು ವಿಸಿ ಮತ್ತು ಹೇಮಾವತಿ ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ನಗರದ ಕಾವೇರಿ ನೀರಾವರಿ ನಿಗಮದ ಬಳಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ 5ನೇ ದಿನವೂ ಮುಂದುವರಿದಿದೆ.
ಇಂದಿನ ಹೋರಾಟದಲ್ಲಿ ಕರವೇ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಮುಖಂಡರಾದ ರವಿಕುಮಾರ್ ಗಣಿಗ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಅಲ್ಲದೆ ರೈತರು ಧರಣಿ ನಿರತ ಸ್ಥಳದಲ್ಲೇ ಅಡುಗೆ ಮಾಡಿ ಸಾಮೂಹಿಕ ಭೋಜನ ಸ್ವೀಕರಿಸಿದ್ದು ವಿಶೇಷವಾಗಿತ್ತು.

ಕಾವೇರಿ ಮಂಡಳಿ ಆದೇಶಕ್ಕೆ ಸ್ವಾಗತ: ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶವನ್ನು ಜಿಲ್ಲೆಯ ರೈತರು ಸ್ವಾಗತಿಸಿ ದ್ದಾರೆÉ. ಮಳೆ ಬಂದರೆ ನೀರು ಬಿಡಿ ಎಂಬ ಆದೇಶ ರೈತರಿಗೆ ಸಂತಸ ತಂದಿದೆ. ಆದರೆ ನಾಲೆಗಳಿಗೆ ಕೆಆರ್‍ಎಸ್‍ನಿಂದ ನೀರು ಬಿಡದಿರುವುದು ಖಂಡನೀಯ ಎಂದು ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆÉ.

ಕಳೆದ 5 ದಿನಗಳಿಂದ ರೈತರು ನಾಲೆ ಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ನಗರದ ಕಾವೇರಿ ನೀರಾವರಿ ನಿಗಮದ ಎದುರು ಹೋರಾಟ ಪ್ರಾರಂಭಿಸಿದ್ದಾರೆÉ. ಆದರೆ ರಾಜ್ಯ ಸರ್ಕಾರ ನಿರ್ವಹಣಾ ಮಂಡಳಿಯತ್ತ ಬೆಟ್ಟು ತೋರಿಸಿ ನೀರು ಬಿಡಲು ಆಗೋದಿಲ್ಲ ಎಂದು ಹೇಳಿತ್ತು. ಇದರ ನಡುವೆ ಇಂದು ಕಾವೇರಿ ನೀರು ನಿರ್ವಹಣಾ ಮಂಡಳಿಯೂ ಕರ್ನಾಟಕದ ಪರ ನೀಡಿರುವ ಆದೇಶ ಸ್ವಾಗತಾರ್ಹ ಎಂದರು. ಈಗಲಾದರೂ ಸರ್ಕಾರ ರೈತರ ಬೆಳೆ ರಕ್ಷಣೆ, ಜಾನುವಾರುಗಳ ಕುಡಿಯುವ ನೀರಿಗಾಗಿ ಕೆಆರ್‍ಎಸ್‍ನಿಂದ ನೀರು ಬಿಡಬೇಕು. ನೀರು ಬಿಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಮುಖಂಡರ ಬೆಂಬಲ: ಕಾಂಗ್ರೆಸ್ ಮುಖಂಡ ರವಿಕುಮಾರ್ ಗಣಿಗ, ನಗರಸಭಾ ಸದಸ್ಯ ರಾಮಲಿಂಗಯ್ಯ, ಮುಸ್ಲಿಂ ಮುಖಂಡ ನಯೀಂಖಾನ್ ಸೇರಿದಂತೆ ಹಲವರು ಧರಣಿಯಲ್ಲಿ ಪಾಲ್ಗೊಂಡು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಸಾಮೂಹಿಕ ಭೋಜನ: ಕಳೆದ 4 ದಿನಗಳಿಂದ ಕಾವೇರಿ ನೀರಾವರಿ ನಿಗಮದ ಎದುರು ಅಹೋ ರಾತ್ರಿ ಧರಣಿ ನಡೆಸುತ್ತಿ ರುವ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದ ನೂರಾರು ರೈತರು ಇಂದು ವಿಶೇಷವಾಗಿ ಧರಣಿ ನಿರತ ಸ್ಥಳದಲ್ಲಿಯೇ ಅಡುಗೆ ಮಾಡಿ ಸಾಮೂಹಿಕ ಭೋಜನ ಸ್ವೀಕರಿ ಸುವ ಮೂಲಕ ತಮ್ಮ ಬೇಡಿಕೆ ಈಡೇ ರುವ ತನಕ ಹೋರಾಟವನ್ನು ಕೈ ಬಿಡುವು ದಿಲ್ಲ ಎಂಬ ಸಂದೇಶ ಸಾರಿದರು.

ಇಂದಿನ ಪ್ರತಿಭಟನೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ, ಶಂಭೂನಹಳ್ಳಿ ಸುರೇಶ್, ಬೊಮ್ಮೇಗೌಡ, ಲತಾಶಂಕರ್, ಕೀಲಾರ ಚಂದ್ರು, ಕೆ.ವಿ.ರಾಮೇಗೌಡ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Translate »