ಬೆಂಗಳೂರು: ವಿರೋಧಪಕ್ಷಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಮತ್ತು ಸಚಿವರು ಐಟಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಐತಿಹಾಸಿಕ ಘಟನೆ ನಡೆಯಿತು. ಮುಖ್ಯಮಂತ್ರಿಗಳೇ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲಾಗಿದೆ. ಸಿಬಿಐ ತನಿಖೆ ವಿರೋಧಿಸಿ, ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿಯವರು ಇತ್ತೀಚೆಗಷ್ಟೇ ಕೊಲ್ಕತ್ತಾದಲ್ಲಿ ಕೇಂದ್ರದ ವಿರುದ್ಧ ಸರಣಿ ಧರಣಿ ನಡೆಸಿದ್ದರು. ಇದು ಮಾಸುವ ಮುನ್ನವೇ…
ಹಿಂಸೆಗೆ ಪ್ರಚೋದಿಸುವುದು ದುರದೃಷ್ಟಕರ: ಐಟಿ ತಿರುಗೇಟು
March 29, 2019ಬೆಂಗಳೂರು:ನಾವು ಯಾವುದೇ ಶಾಸಕ ಅಥವಾ ಸಂಸದರನ್ನು ಗುರಿಯಾಗಿಸಿ ಕೊಂಡು ದಾಳಿ ನಡೆಸಿಲ್ಲ, ಕಾನೂನು ಅಡಿಯಲ್ಲಿ ದಾಳಿ ಮಾಡಿದ್ದೇವೆ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ದಾಳಿ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಐಟಿ ಇಲಾಖೆ, ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಹಿಂಸೆಗೆ ಪ್ರಚೋದಿಸುವಂತಹ ಹೇಳಿಕೆ ನೀಡಿರುವುದು ದುರದೃಷ್ಟಕರ ಎಂದು ತಿರುಗೇಟು ನೀಡಿದೆ. ರಾಜಕೀಯ ಪ್ರೇರಿತವಾಗಿ ಐಟಿ ದಾಳಿ ನಡೆದಿದೆ ಎಂಬ ಜೆಡಿಎಸ್, ಕಾಂಗ್ರೆಸ್ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಆದಾಯ ತೆರಿಗೆ ಇಲಾಖೆ, ವಿಶ್ವಾಸಾರ್ಹ ಮೂಲಗಳ ಆಧಾರದ ಮೇಲೆ…
ಮತದಾನಕ್ಕಿನ್ನು ಮೂರೇ ವಾರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ
March 29, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದಲ್ಲಿ ಅಭ್ಯರ್ಥಿಗಳ ಪ್ರಚಾರ ಶರವೇಗದಲ್ಲಿ ಸಾಗಿದೆ. ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಗುರುವಾರ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಮಿಂಚಿನ ಪ್ರಚಾರ ನಡೆಸಿದ್ದು, ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಕೊಡಗಿನಲ್ಲಿ ಮತ ಯಾಚಿಸಿ ದ್ದಾರೆ. ಎಸ್‍ಯುಸಿಐ ಕಮ್ಯು ನಿಸ್ಟ್ ಪಕ್ಷದ ಅಭ್ಯರ್ಥಿ ಪಿ.ಎಸ್.ಸಂಧ್ಯಾ `ಓಟು-ನೋಟು’ ಅಭಿಯಾನ ನಡೆಸಿ, ಮತ ಯಾಚನೆಯೊಂ ದಿಗೆ ಚುನಾವಣಾ ನಿಧಿಗೆ ದೇಣಿಗೆ ಸಂಗ್ರಹಿ ಸುವ ಕಾರ್ಯವನ್ನು ಮುಂದುವರೆಸಿದ್ದಾರೆ. ಬಿಎಸ್‍ಪಿ ಅಭ್ಯರ್ಥಿ…
ಸಂಸದ ಪ್ರತಾಪ್‍ಸಿಂಹರಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ
March 29, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾಧಿಕಾರಿಗೆ ದೂರು ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಸಂಸದ ಪ್ರತಾಪ್ ಸಿಂಹ ಅವರು, ಮೈಸೂರು ತಾಲೂಕಿನ ಸಿದ್ದ ಲಿಂಗಪುರ ಗ್ರಾಮದಲ್ಲಿನ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಚಂದ್ರಮೌಳೇ ಶ್ವರ ದೇವಸ್ಥಾನದಲ್ಲಿ ತಮ್ಮ ಬೆಂಬಲಿಗ ರೊಂದಿಗೆ ದೇವಸ್ಥಾನದ ಮೂಲ ಶಿವನ ವಿಗ್ರಹಕ್ಕೆ ಬಿಜೆಪಿ ಪಕ್ಷದ ಚಿಹ್ನೆ ಇರುವ ಶಲ್ಯವನ್ನು ಅಲಂಕರಿಸಿ…
13,289 ಕೋಟಿ ರೂ. ಅಂದಾಜು ವೆಚ್ಚದ ಜಿಲ್ಲಾ ಸಾಲ ಯೋಜನೆ ಬಿಡುಗಡೆ
March 29, 2019ಮೈಸೂರು: ಮೈಸೂರು ಲೀಡ್ ಬ್ಯಾಂಕ್ 2019-20ನೇ ಸಾಲಿಗೆ ಆದ್ಯತಾ ಮತ್ತು ಆದ್ಯತಾ ರಹಿತ ವಲಯಕ್ಕೆ ಒಟ್ಟು 13,289 ಕೋಟಿ ರೂ.ಗಳ ಅಂದಾಜು ವೆಚ್ಚದ ಜಿಲ್ಲಾ ಸಾಲ ಯೋಜನೆ ಯನ್ನು ಗುರುವಾರ ಬಿಡುಗಡೆ ಮಾಡಿತು. 13,289 ಕೋಟಿ ರೂ. ಪೈಕಿ ಆದ್ಯತಾ ವಲಯಕ್ಕೆ 10,764 ಹಾಗೂ ಆದ್ಯತಾ ರಹಿತ ವಲಯಕ್ಕೆ 2525 ಕೋಟಿ ರೂ.ಗಳ ಯೋಜನೆ ರೂಪಿಸಿರುವ ಜಿಲ್ಲಾ ಸಾಲ ಯೋಜನೆಯನ್ನು ಬೆಂಗಳೂರಿನ ಆರ್‍ಬಿಐ ಎಲ್‍ಡಿಓ ಸರೋಜ್ ಭಾಟಿಯಾ ಅವರು ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಬಿಡುಗಡೆ…
ಡಿಜಿಟಲ್ ತಂತ್ರಜ್ಞಾನದಿಂದ ಜನತೆ ಜೀವನ ಗುಣಮಟ್ಟ ಸುಧಾರಣೆ
March 29, 2019ಮೈಸೂರು: ಕೈಗಾ ರಿಕೋದ್ಯಮ ಹಾಗೂ ಸಾಮಾಜಿಕ ಚಟು ವಟಿಕೆಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಪರಿ ಣಾಮಕಾರಿ ಬಳಕೆಯಾದರೆ ದೇಶದ ಆರ್ಥಿಕ ಅಭಿವೃದ್ಧಿಯೊಂದಿಗೆ ಜನತೆಯ ಜೀವನ ಗುಣಮಟ್ಟ ಸುಧಾರಣೆಯಾಗಲಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಅಭಿಪ್ರಾಯಪಟ್ಟರು. ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿ ಬಿ.ಎನ್.ಬಹದ್ದೂರ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಸೈನ್ಸಸ್‍ನ (ಬಿಐಎಂಎಸ್) ವ್ಯವಹಾರ ಆಡ ಳಿತ ಅಧ್ಯಯನ ವಿಭಾಗದ ವತಿಯಿಂದ `ನಾಲ್ಕನೇ ಕೈಗಾರಿಕಾ ಕ್ರಾಂತಿ’ ಕುರಿತಂತೆ ಹಮ್ಮಿಕೊಂಡಿರುವ ಎರಡು ದಿನಗಳ ಅಂತಾ ರಾಷ್ಟ್ರೀಯ ಸಮ್ಮೇಳನಕ್ಕೆ…
ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಮ್ಮೇಳನಕ್ಕೆ ಕೌಟಿಲ್ಯ ವಿದ್ಯಾರ್ಥಿನಿ ಸಾಯಿಧನ್ಯ
March 29, 2019ಮೈಸೂರು: ಕೌಟಿಲ್ಯ ವಿದ್ಯಾಲಯದ ವಿದ್ಯಾರ್ಥಿನಿ ಯು.ಸಾಯಿ ಧನ್ಯ ಅವರು 2019ರ ಮೇ ತಿಂಗಳಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಕೆನಡಿ ಸ್ಪೇಸ್ ಸೆಂಟರ್‍ನಲ್ಲಿ ರುವ ನ್ಯಾಷನಲ್ ಏರೋ ನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಸಂಸ್ಥೆಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಬಾಹ್ಯಾಕಾಶ ವಿಜ್ಞಾನ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಸ್ಟ್ರೋನಾಟ್ ಮೆಮೋರಿ ಯಲ್ ಫೌಂಡೇಷನ್ ಮತ್ತು ಫ್ಲೋರಿಡಾ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳು ದಿ ಹಿಂದೂ ಎಜುಕೇಷನಲ್ ಸೀರೀಸ್‍ನ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧಕರು…
ಮದ್ಯದ ಅಂಗಡಿ ತೆರವುಗೊಳಿದಿದ್ದರೆ ಚುನಾವಣೆ ಬಹಿಷ್ಕಾರ
March 29, 2019ಸರಗೂರು: ಹಿರೇಹಳ್ಳಿ ಗ್ರಾಮದ ಸರ್ಕಲ್‍ನಲ್ಲಿ ಇರುವ ಎಂಎಸ್‍ಐಎಲ್ ಮದ್ಯದ ಅಂಗಡಿ ಬಂದ್ ಮಾಡಿ ಇಲ್ಲವಾದಲ್ಲಿ ಲೋಕಸಭಾ ಚುನಾವಣೆ ಬಹಿಸ್ಕರಿಸುವುದಾಗಿ ಮಾಡಲು ಬಿ.ಮಟಕೆರೆ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದರು. ಬಿ.ಮಟಕೆರೆ ಗ್ರಾಪಂ ವ್ಯಾಪ್ತಿಗೆ ಬರುವ ಹಿರೇಹಳ್ಳಿ ಗ್ರಾಮದ ಸರ್ಕಲ್‍ನಲ್ಲಿರುವÀ ಎಂಎಸ್‍ಐಎಲ್ ಮದ್ಯದ ಅಂಗಡಿಯನ್ನು ಒಂದು ತಿಂಗಳ ಹಿಂದೆ ತೆರೆಯಲಾಗಿತ್ತು. ಇದರಿಂದಾಗಿ ಮದ್ಯಪಾನಿಯರ ಹಾವಳಿ ಜಾಸ್ತಿಯಾಗಿ ಸಾರ್ವಜನಿಕರಿಗೆ ಇನ್ನಿಲ್ಲದ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಬಿ.ಮಟಕೆರೆ ಗ್ರಾಪಂ 33 ಗ್ರಾಮಗಳನ್ನು ಒಳಪಟ್ಟಿದೆ. ಇಲ್ಲಿ ಆರೋಗ್ಯ ಇಲಾಖೆಗೆ, ಶಾಲಾ ಕಾಲೇಜು, ಬ್ಯಾಂಕ್, ಇನ್ನಿತರ ಕೆಲಸಗಳಿಗೆ…
ಧ್ರುವನಾರಾಯಣ್ ಪರ ಪ್ರಚಾರದ ನಡುವೆಯೇ ‘ಕೈ’ ಸೇರ್ಪಡೆಗೂ ಯತೀಂದ್ರ ಆಹ್ವಾನ
March 29, 2019ತಿ.ನರಸೀಪುರ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ ಪರ ಪ್ರಚಾರ ನಡೆಸಿರುವ ಶಾಸಕ ಡಾ.ಎಸ್.ಯತೀಂದ್ರ ಅವರು ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿದ್ದಾರೆ. ಕಾಂಗ್ರೆಸ್‍ಗೆ ಸೇರ್ಪಡೆಯಾಗಿ ಎಂದೂ ಆಹ್ವಾನಿಸುತ್ತಿದ್ದಾರೆ. ತಾಲೂಕಿನ ಹೊಸ ಕೆಂಪಯ್ಯನಹುಂಡಿ ಗ್ರಾಮದಲ್ಲಿರುವ ಉಪ್ಪಾರ ಮಹಾಸಭಾ ರಾಜ್ಯ ಉಪಾಧ್ಯಕ್ಷ ಹಾಗೂ ಜೆಡಿಎಸ್ ಕಾರ್ಯದರ್ಶಿ ಆರ್.ಬಸವರಾಜು ಅವರ ನಿವಾಸಕ್ಕೆ ಭೇಟಿ ನೀಡಿದ ಎಸ್.ಯತೀಂದ್ರ ಅವರು ಅಭ್ಯರ್ಥಿ ಆರ್.ಧ್ರುವನಾರಾಯಣ್ ಅವರ ಗೆಲುವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ…
ಬಾಹ್ಯಾಕಾಶದಲ್ಲೂ ಭಾರತದ ಸರ್ಜಿಕಲ್ ಸ್ಟ್ರೈಕ್
March 28, 2019ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು, ಲೈವ್ ಸ್ಯಾಟಲೈಟ್‍ವೊಂದನ್ನು ಹೊಡೆದುರು ಳಿಸುವ ಮೂಲಕ ಅತ್ಯಂತ ಅಪರೂಪದ ಸಂಶೋ ಧನೆಯಿಂದ ವಿಶ್ವಮಾನ್ಯರಾಗಿದ್ದಾರೆ. ಭಾರತದ ಹೆಮ್ಮೆಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್‍ಡಿಓ ಸಹಯೋಗದಲ್ಲಿ ಬಾಹ್ಯಾಕಾಶದ ಲೋ ಅರ್ಥ್ ಆರ್ಬಿಟ್‍ನಲ್ಲಿ ಎ-ಸ್ಯಾಟ್ ಆ್ಯಂಟಿ ಸ್ಯಾಟಲೈಟ್ ಮಿಸೈಲ್ ಮೂಲಕ ಲೈವ್ ಸ್ಯಾಟಲೈಟ್ ಅನ್ನು ಯಶಸ್ವಿಯಾಗಿ ಹೊಡೆದುರು ಳಿಸಿದೆ. ಈ ಬಗ್ಗೆ ಪ್ರಧಾನಿ ಮೋದಿ ದೇಶದ ಜನತೆಗೆ ಮಾಹಿತಿ ನೀಡಿದ್ದು, ವಿಜ್ಞಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಏನಿದು ಉಪಗ್ರಹ…










