13,289 ಕೋಟಿ ರೂ. ಅಂದಾಜು  ವೆಚ್ಚದ ಜಿಲ್ಲಾ ಸಾಲ ಯೋಜನೆ ಬಿಡುಗಡೆ
ಮೈಸೂರು

13,289 ಕೋಟಿ ರೂ. ಅಂದಾಜು ವೆಚ್ಚದ ಜಿಲ್ಲಾ ಸಾಲ ಯೋಜನೆ ಬಿಡುಗಡೆ

March 29, 2019

ಮೈಸೂರು: ಮೈಸೂರು ಲೀಡ್ ಬ್ಯಾಂಕ್ 2019-20ನೇ ಸಾಲಿಗೆ ಆದ್ಯತಾ ಮತ್ತು ಆದ್ಯತಾ ರಹಿತ ವಲಯಕ್ಕೆ ಒಟ್ಟು 13,289 ಕೋಟಿ ರೂ.ಗಳ ಅಂದಾಜು ವೆಚ್ಚದ ಜಿಲ್ಲಾ ಸಾಲ ಯೋಜನೆ ಯನ್ನು ಗುರುವಾರ ಬಿಡುಗಡೆ ಮಾಡಿತು.

13,289 ಕೋಟಿ ರೂ. ಪೈಕಿ ಆದ್ಯತಾ ವಲಯಕ್ಕೆ 10,764 ಹಾಗೂ ಆದ್ಯತಾ ರಹಿತ ವಲಯಕ್ಕೆ 2525 ಕೋಟಿ ರೂ.ಗಳ ಯೋಜನೆ ರೂಪಿಸಿರುವ ಜಿಲ್ಲಾ ಸಾಲ ಯೋಜನೆಯನ್ನು ಬೆಂಗಳೂರಿನ ಆರ್‍ಬಿಐ ಎಲ್‍ಡಿಓ ಸರೋಜ್ ಭಾಟಿಯಾ ಅವರು ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಬಿಡುಗಡೆ ಮಾಡಿದರು.

ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ ಅಂದಾಜಿಸಲಾಗಿರುವ ಒಟ್ಟು ಸಾಲ ಯೋಜನೆಯಲ್ಲಿ ಶೇ.33ರಷ್ಟು ಹೆಚ್ಚಾಗಿದೆ. ಈ ಪೈಕಿ ಆದ್ಯತಾ ವಲಯದಲ್ಲಿ ಶೇ.21 (1896 ಕೋಟಿ ರೂ.) ಹಾಗೂ ಆದ್ಯತಾ ರಹಿತ ವಲಯದಲ್ಲಿ ಶೇ.30ರಷ್ಟು (589 ಕೋಟಿ ರೂ.) ಹೆಚ್ಚಾಗಿದೆ. ಈ ಪೈಕಿ ವಿವಿಧ ಸರ್ಕಾರಿ ಪ್ರಾಯೋಜಿತ ಕಾರ್ಯ ಕ್ರಮಗಳಿಗೆ 869 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಏಜೆನ್ಸಿವಾರು ಸಾಲ ಯೋಜ ನೆಯಡಿ ಆದ್ಯತಾ ವಲಯದಲ್ಲಿ ಸಾರ್ವ ಜನಿಕ ವಲಯದ ಬ್ಯಾಂಕ್‍ಗಳಿಗೆ 7487 ಕೋಟಿ ರೂ., ಖಾಸಗಿ ವಲಯ ಬ್ಯಾಂಕ್ ಗಳಿಗೆ 1231 ಕೋಟಿ ರೂ., ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳಿಗೆ 1187, ಸಹಕಾರಿ ಬ್ಯಾಂಕ್‍ಗಳಲ್ಲಿ ಡಿಸಿಸಿ ಬ್ಯಾಂಕ್‍ಗಳಿಗೆ 703 ಕೋಟಿ, ಭೂ ಅಭಿವೃದ್ಧಿ ಬ್ಯಾಂಕ್‍ಗಳಿಗೆ 79 ಕೋಟಿ ಹಾಗೂ ಕೆಎಸ್‍ಎಫ್‍ಸಿಗೆ 77 ಕೋಟಿ ನಿಗದಿ ಮಾಡಲಾಗಿದೆ.
ವಲಯವಾರು ಹಂಚಿಕೆಯಡಿ ಕೃಷಿ ವಲಯಕ್ಕೆ 5147 ಕೋಟಿ ರೂ. ನಿಗದಿ ಪಡಿಸಿದ್ದು, ಈ ಪೈಕಿ ಬೆಳೆ ಸಾಲಕ್ಕೆ 3477 ಕೋಟಿ ರೂ., ಅವಧಿ ಸಾಲಕ್ಕೆ 1670 ಕೋಟಿ ರೂ. ತೆಗೆದಿರಿಸಲಾಗಿದೆ. ಎಸ್‍ಎಸ್‍ಐ/ಎಂಎಸ್‍ಎಂಇಗೆ 2449 ಕೋಟಿ ರೂ. ಹಾಗೂ ವ್ಯಾಪಾರ ಮತ್ತು ಸೇವೆಗೆ 3168 ಕೋಟಿ ರೂ. ನಿಗದಿ ಯಾಗಿದೆ. ಜಿಲ್ಲಾ ಸಾಲ ಯೋಜನೆಯಲ್ಲಿ ಜಿಲ್ಲೆಯ ತಾಲೂಕುವಾರು ನಿಗದಿಯಾಗಿ ರುವ ಅನುದಾನ. ಮೈಸೂರು ತಾಲೂಕಿಗೆ 5945 ಕೋಟಿ ರೂ., ನಂಜನಗೂಡು ತಾಲೂಕಿಗೆ 1463, ಕೆ.ಆರ್.ನಗರಕ್ಕೆ 1009 ಕೋಟಿ ರೂ., ಪಿರಿಯಾಪಟ್ಟಣಕ್ಕ 1441 ಕೋಟಿ, ಹುಣಸೂರಿಗೆ 1502 ಕೋಟಿ, ತಿ.ನರಸೀಪುಕ್ಕೆ 1169 ಕೋಟಿ ಹಾಗೂ ಹೆಚ್.ಡಿ.ಕೋಟೆ ತಾಲೂಕಿಗೆ 760 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.

ಜಿಲ್ಲಾ ಸಾಲ ಯೋಜನೆ ಬಿಡುಗಡೆ ಸಂದರ್ಭದಲ್ಲಿ ಎಸ್‍ಬಿಐ ಆರ್‍ಬಿಓ-2 ಮೈಸೂರು ಎಜಿಎಂ ಮಹದೇವ ಕುಮಾರ್, ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್ ವೆಂಕಟಾಚಲಪತಿ, ನಬಾರ್ಡ್ ಮೈಸೂರು ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಮಣಿ ಕಂಠನ್, ಕಾವೇರಿ ಗ್ರಾಮೀಣ ಬ್ಯಾಂಕ್ ಮೈಸೂರು ಪ್ರಾದೇಶಿಕ ವ್ಯವಸ್ಥಾಪಕ ಆನಂದ ಹೆಗ್ಡೆ, ಮೈಸೂರು ಜಿಪಂ ಯೋಜನಾ ನಿರ್ದೇಶಕಿ ಸುಶೀಲಾ ಉಪಸ್ಥಿತರಿದ್ದರು.

Translate »