ಮತದಾನಕ್ಕಿನ್ನು ಮೂರೇ ವಾರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ
ಮೈಸೂರು

ಮತದಾನಕ್ಕಿನ್ನು ಮೂರೇ ವಾರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ

March 29, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದಲ್ಲಿ ಅಭ್ಯರ್ಥಿಗಳ ಪ್ರಚಾರ ಶರವೇಗದಲ್ಲಿ ಸಾಗಿದೆ. ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಗುರುವಾರ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಮಿಂಚಿನ ಪ್ರಚಾರ ನಡೆಸಿದ್ದು, ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಕೊಡಗಿನಲ್ಲಿ ಮತ ಯಾಚಿಸಿ ದ್ದಾರೆ. ಎಸ್‍ಯುಸಿಐ ಕಮ್ಯು ನಿಸ್ಟ್ ಪಕ್ಷದ ಅಭ್ಯರ್ಥಿ ಪಿ.ಎಸ್.ಸಂಧ್ಯಾ `ಓಟು-ನೋಟು’ ಅಭಿಯಾನ ನಡೆಸಿ, ಮತ ಯಾಚನೆಯೊಂ ದಿಗೆ ಚುನಾವಣಾ ನಿಧಿಗೆ ದೇಣಿಗೆ ಸಂಗ್ರಹಿ ಸುವ ಕಾರ್ಯವನ್ನು ಮುಂದುವರೆಸಿದ್ದಾರೆ. ಬಿಎಸ್‍ಪಿ ಅಭ್ಯರ್ಥಿ ಡಾ.ಬಿ.ಚಂದ್ರ ಸೇರಿದಂತೆ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿ ಗಳೂ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಳಿದಿರುವ 20 ದಿನಗಳಲ್ಲಿ ಕ್ಷೇತ್ರದೆಲ್ಲೆಡೆ ಸಂಚರಿಸಿ, ಪ್ರತಿ ಮತದಾರರ ಬೆಂಬಲ ಯಾಚಿಸುವ ಸವಾಲಿ ನೊಂದಿಗೆ ಬಿರುಸಿನ ತಿರುಗಾಟ ನಡೆಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಹಾಗೂ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ನಡುವೆ ನೇರ ಹಣಾಹಣಿ ನಡೆಯಲಿರುವ ಹಿನ್ನೆಲೆಯಲ್ಲಿ ಉಭಯ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕ್ಷೇತ್ರ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಚಲಾವಣೆಯಾಗುವ ಒಟ್ಟು ಮತಗಳಲ್ಲಿ ಶೇ.51ರಷ್ಟು ಮತ ಗಳಿಕೆ ಬಿಜೆಪಿಗೆ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮದೇ ವ್ಯಾಪ್ತಿಯಲ್ಲಿ ಶ್ರಮಿಸುತ್ತಿದ್ದಾರೆ. ಗುರುವಾರ ಚಾಮುಂಡೇಶ್ವರಿ ಕ್ಷೇತ್ರದ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಮತ ಯಾಚಿಸಿದ ಪ್ರತಾಪ ಸಿಂಹ, ಶುಕ್ರವಾರ ಪಿರಿಯಾಪಟ್ಟಣ ತಾಲೂಕು ವ್ಯಾಪ್ತಿಯ ಪಂಚವಳ್ಳಿ, ಸತ್ಯಾಗಾಲ, ಕಿರನಲ್ಲಿ, ಕಂಪಲಾಪುರ, ದೊಡ್ಡ ಬೇಲಾಳು, ಅರೇನ ಹಳ್ಳಿ, ಬೋಗನಹಳ್ಳಿ, ಆರ್.ಹೊಸಹಳ್ಳಿ, ಮಾಕೋಡು, ರಾವಂದೂರು, ಪಂಡಿತ ವಳ್ಳಿ, ಎನ್.ಶೆಟ್ಟಹಳ್ಳಿ, ರಾಮನಾಥತುಂಗ, ಹಿಟ್ನೆ ಹೆಬ್ಬಾಗಿಲು, ಭುವನಹಳ್ಳಿ ಹಾಗೂ ಕೊಣಸೂರು ಗ್ರಾಮಗಳಲ್ಲಿ ಪ್ರಚಾರ ನಡೆಸ ಲಿದ್ದಾರೆ ಎಂದು ತಿಳಿದುಬಂದಿದೆ. ಮೈತ್ರಿ ಪಕ್ಷಗಳ ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರಿಗೆ ಮೈಸೂರು-ಕೊಡಗು ಕ್ಷೇತ್ರ ಪ್ರತಿ ಷ್ಠೆಯ ಕಣವಾಗಿದೆ. ವಿಜಯ ಶಂಕರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸಂದರ್ಭ ದಲ್ಲಿ ಅವರಿಗೆ ನೀಡಿದ್ದ ಮಾತನ್ನು ಸಿದ್ದ ರಾಮಯ್ಯ ಉಳಿಸಿಕೊಂಡಿದ್ದಾರೆ. ಜೆಡಿಎಸ್ ನಾಯಕರ ಬಿಗಿಪಟ್ಟಿಗೂ ಜಗ್ಗದೆ ಮೈಸೂರು -ಕಾಂಗ್ರೆಸ್ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಉಳಿಸಿಕೊಂಡು, ತಮ್ಮ ಆತ್ಮೀಯ ವಿಜಯ ಶಂಕರ್‍ಗೆ ಟಿಕೆಟ್ ಕೊಡಿಸಿ, ಕಣಕ್ಕಿಳಿಸಿ ದ್ದಾರೆ. ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ನಡುವೆ ಏನೇ ವ್ಯತ್ಯಾಸವಾದರೂ ಸಿದ್ದರಾಮಯ್ಯನವರತ್ತ ಬೊಟ್ಟು ಮಾಡಲಾಗು ತ್ತದೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ದಲ್ಲಾದ ಸೋಲಿನ ಆಘಾತದಿಂದ ಅವರಿನ್ನೂ ಹೊರಬಂದಿಲ್ಲ. ಹಾಗಾಗಿ ಜೆಡಿಎಸ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆಂಬ ಮಾತುಗಳು ಸಾಮಾನ್ಯ ವೆಂಬಂತೆ ಕೇಳಿಬರು ತ್ತವೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಧರ್ಮ ಪರಿಪಾಲನೆಯೊಂದಿಗೆ ಚುನಾ ವಣೆ ಎದುರಿಸಲಿವೆ ಎಂದು ಉಭಯ ಪಕ್ಷಗಳ ನಾಯಕರು ಪದೇ ಪದೆ ಸ್ಪಷ್ಟಪಡಿಸುತ್ತಿದ್ದಾರೆ.

Translate »