ಮದ್ಯದ ಅಂಗಡಿ ತೆರವುಗೊಳಿದಿದ್ದರೆ ಚುನಾವಣೆ ಬಹಿಷ್ಕಾರ
ಮೈಸೂರು

ಮದ್ಯದ ಅಂಗಡಿ ತೆರವುಗೊಳಿದಿದ್ದರೆ ಚುನಾವಣೆ ಬಹಿಷ್ಕಾರ

March 29, 2019

ಸರಗೂರು: ಹಿರೇಹಳ್ಳಿ ಗ್ರಾಮದ ಸರ್ಕಲ್‍ನಲ್ಲಿ ಇರುವ ಎಂಎಸ್‍ಐಎಲ್ ಮದ್ಯದ ಅಂಗಡಿ ಬಂದ್ ಮಾಡಿ ಇಲ್ಲವಾದಲ್ಲಿ ಲೋಕಸಭಾ ಚುನಾವಣೆ ಬಹಿಸ್ಕರಿಸುವುದಾಗಿ ಮಾಡಲು ಬಿ.ಮಟಕೆರೆ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದರು. ಬಿ.ಮಟಕೆರೆ ಗ್ರಾಪಂ ವ್ಯಾಪ್ತಿಗೆ ಬರುವ ಹಿರೇಹಳ್ಳಿ ಗ್ರಾಮದ ಸರ್ಕಲ್‍ನಲ್ಲಿರುವÀ ಎಂಎಸ್‍ಐಎಲ್ ಮದ್ಯದ ಅಂಗಡಿಯನ್ನು ಒಂದು ತಿಂಗಳ ಹಿಂದೆ ತೆರೆಯಲಾಗಿತ್ತು. ಇದರಿಂದಾಗಿ ಮದ್ಯಪಾನಿಯರ ಹಾವಳಿ ಜಾಸ್ತಿಯಾಗಿ ಸಾರ್ವಜನಿಕರಿಗೆ ಇನ್ನಿಲ್ಲದ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಬಿ.ಮಟಕೆರೆ ಗ್ರಾಪಂ 33 ಗ್ರಾಮಗಳನ್ನು ಒಳಪಟ್ಟಿದೆ. ಇಲ್ಲಿ ಆರೋಗ್ಯ ಇಲಾಖೆಗೆ, ಶಾಲಾ ಕಾಲೇಜು, ಬ್ಯಾಂಕ್, ಇನ್ನಿತರ ಕೆಲಸಗಳಿಗೆ ಸರ್ವಜನಿಕರು ಬಿ.ಮಟಕರೆಯನ್ನೆ ಅವಲಂಬಿಸಿದ್ದು, ಇಲ್ಲಿಗೆ ಹೋಗಬೇಕಾದರೆÉ ಈ ಮದ್ಯದ ಅಂಗಡಿ ಮೂಲಕವೇ ಬರಬೇಕಾಗಿದ್ದು, ಇಲ್ಲಿ ಕುಡಿದ ಅಮಲಿನಲ್ಲಿ ಕುಡುಕರು ಎಲ್ಲ್ಲೆಂದರಲ್ಲಿ ಮಲಗಿರುತ್ತಾರೆ. ಇದರಿಂದ ಶಾಲೆಗೆ ಬರುವ ಹೆಣ್ಣು ಮಕ್ಕಳಿಗೆ ಮುಜುಗರ ಆಗಲಿದೆ ಈ ವ್ಯಾಪ್ತಿಯು ಬಂಡೀಪುರ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಜೇನು ಕುರುಬರು ಹಾಗೂ ಬೆಟ್ಟ ಕುರುಬರು, ಹಾಡಿಯ ಹಲವರು ವಾಸವಿದ್ದು, ಅವರು ಸಹ ಮದ್ಯವ್ಯಸನಕ್ಕೆ ಒಳಗಾಗುವ ಸಂಭವ ಇದೆ. ಸಂಬಂಧಪಟ್ಟ ಅಧಿಕಾರಿಗಳು ಶೀರ್ಘವಾಗಿ ಸರ್ಕಾರದಿಂದ ಹಾಕಲಾಗಿರುವ ಎಂಎಸ್‍ಐಎಲ್ ಮದ್ಯದ ಅಂಗಡಿಯನ್ನು ಬಂದ್ ಮಾಡಿ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬಿ.ಮಟಕೆರೆ ಗ್ರಾಮದ ಹಿರಿಯ ಮುಖಂಡರಾದ ಅಣ್ಣಯ್ಯಸ್ವಾಮಿ, ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ ರಮೇಶ್, ಗ್ರಾಪಂ ಮಾಜಿ ಸದಸ್ಯ ಹಿರೇಹಳ್ಳಿ ದೇವದಾಸ್, ಮೂಳೆಯೂರು ಗ್ರಾಮದ ಗುಡಿಗೌಡರಾದ ಪ್ರಭಾಕರ್, ಎಂ.ಬಿ ಆನಂದ್, ರಾಮಲಿಂಗ, ಸುಮತಿಕುಮಾರ್, ನಂದಕುಮಾರ್, ಸತೀಶ್, ನಟರಾಜ್, ಎಸ್‍ಡಿಎಂಸಿ ಅಧ್ಯಕ್ಷ ಚಂದ್ರಪ್ರಭಾ, ಬಾಡಗ ಮಾದಪ್ಪ, ಮಣಿಕುಮಾರ್ ಟ್ರೈಬಲ್ ಮುಖಂಡ ಚಿಕ್ಕಬೊಮ್ಮ, ಹಾಗೂ ಬಿ.ಮಟಕೆರೆ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚುನಾವಣೆ ಬಹಿಷ್ಕಾರ: ಅಧಿಕಾರಿಗಳ ಮಣಿಸಲು ‘ಗ್ರಾಮ’ತಂತ್ರ
ಮೈಸೂರು: ‘ಮೂಗು ಹಿಡಿದರೇ ಬಾಯಿ ಬಿಡುವುದು’ ಎಂಬ ಗಾದೆ ಮಾತು ಗ್ರಾಮೀಣ ಭಾಗದಲ್ಲಿ ಹೆಚ್ಚು ಬಳಕೆಯಲ್ಲಿದೆ. ಈಗ ಈ ಗಾದೆಯನ್ನೇ ಗ್ರಾಮೀಣ ಜನರು ಸರ್ಕಾರಿ ಅಧಿಕಾರಿಗಳು ಮತ್ತು ಇಲಾಖೆಗಳ ವಿರುದ್ಧ ಪ್ರಯೋಗಿಸಲಾರಂಭಿಸಿದ್ದಾರೆ.

ವರ್ಷಗಳ ಕಾಲ ಅಲವತ್ತುಕೊಂಡರೂ ಗ್ರಾಮಗಳ ವಿವಿಧ ಸಮಸ್ಯೆಗಳತ್ತ ಗಮನಹರಿಸದ ಅಧಿಕಾರಿಗಳಿಗೆ ‘ಪಾಠ’ ಕಲಿಸಲು ಸಮಯ ಕಾಯುತ್ತಿದ್ದ ಹಳ್ಳಿಗಾಡಿನ ಜನರಿಗೆ ಈಗಿನ ಲೋಕಸಭೆ ಚುನಾವಣೆ ಪ್ರಬಲ ಅಸ್ತ್ರದಂತೆ ದೊರಕಿದೆ. ಗ್ರಾಮಕ್ಕೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸದಿದ್ದರೆ, ಸಮಸ್ಯೆಗಳನ್ನು ಪರಿಹರಿಸದಿದ್ದರೆ, ಬೇಡಿಕೆ ಈಡೇರಿಸದಿದ್ದರೆ ಚುನಾವಣೆ ಬಹಿಷ್ಕರಿಸುತ್ತೇವೆ ಎಂಬ ಬೆದರಿಕೆ ಹಾಕಲಾರಂಭಿಸಿದ್ದಾರೆ. ಇದರ ಪರಿಣಾಮ, ಚುನಾವಣೆ ಹೊಣೆ ಹೊತ್ತಿರುವ ಅಧಿಕಾರಿಗಳ ಮೇಲೆ ಜೋರಾಗಿಯೇ ಆಗುತ್ತಿದೆ. ಮತದಾನ ಪ್ರಮಾಣ ಹೆಚ್ಚಳದ ಗುರಿ ತಲುಪಬೇಕಿರುವ ಅಧಿಕಾರಿಗಳು, ಗ್ರಾಮಸ್ಥರು ಒಡ್ಡುತ್ತಿರುವ ಚುನಾವಣೆ ಬಹಿಷ್ಕಾರದ ಬೆದರಿಕೆಗೆ ಬೆಚ್ಚಿ ಬಿದ್ದಿದ್ದಾರೆ.
ಈ ದಿಸೆಯಲ್ಲೇ ಹುಣಸೂರು ತಾಲೂಕಿನ ಗೌರಿಪುರ ಹಾಗೂ ಸರಗೂರು ತಾಲೂಕಿನ ಬಿ.ಮಟಕೆರೆ ಗ್ರಾಮಸ್ಥರೂ ‘ಚುನಾವಣೆ ಬಹಿಷ್ಕಾರ’ದ ಕಹಳೆ ಊದಿದ್ದಾರೆ. ಅಷ್ಟಕ್ಕೆ ಬೆದರಿದ ಜಿಲ್ಲಾಡಳಿತದ ಅಧಿಕಾರಿಗಳು ಗೌರಿಪುರಕ್ಕೆ ಗುರುವಾರ ದೌಡಾಯಿಸಿದ್ದರು.

ಮದ್ಯದ ಅಂಗಡಿ ತೆರವಿಗೆ ಬಿ.ಮಟಕೆರೆ ಜನರ ಆಗ್ರಹ
ಸರಗೂರು: ಹಿರೇಹಳ್ಳಿ ಗ್ರಾಮದ ಸರ್ಕಲ್‍ನಲ್ಲಿ ಇರುವ ಎಂಎಸ್‍ಐಎಲ್ ಮದ್ಯದ ಅಂಗಡಿ ಬಂದ್ ಮಾಡಿ ಇಲ್ಲವಾದಲ್ಲಿ ಲೋಕಸಭಾ ಚುನಾವಣೆ ಬಹಿಸ್ಕರಿಸುವುದಾಗಿ ಮಾಡಲು ಬಿ.ಮಟಕೆರೆ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದರು. ಬಿ.ಮಟಕೆರೆ ಗ್ರಾಪಂ ವ್ಯಾಪ್ತಿಗೆ ಬರುವ ಹಿರೇಹಳ್ಳಿ ಗ್ರಾಮದ ಸರ್ಕಲ್‍ನಲ್ಲಿರುವÀ ಎಂಎಸ್‍ಐಎಲ್ ಮದÀ್ಯದ ಅಂಗಡಿಯನ್ನು ಒಂದು ತಿಂಗಳ ಹಿಂದೆ ತೆರೆಯಲಾಗಿತ್ತು. ಇದರಿಂದಾಗಿ ಮದ್ಯಪಾನಿಯರ ಹಾವಳಿ ಜಾಸ್ತಿಯಾಗಿ ಸಾರ್ವಜನಿಕರಿಗೆ ಇನ್ನಿಲ್ಲದ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಬಿ.ಮಟಕೆರೆ ಗ್ರಾಪಂ 33 ಗ್ರಾಮಗಳನ್ನು ಒಳಪಟ್ಟಿದೆ. ಇಲ್ಲಿ ಆರೋಗ್ಯ ಇಲಾಖೆಗೆ, ಶಾಲಾ ಕಾಲೇಜು, ಬ್ಯಾಂಕ್, ಇನ್ನಿತರ ಕೆಲಸಗಳಿಗೆ ಸರ್ವಜನಿಕರು ಬಿ.ಮಟಕರೆಯನ್ನೆ ಅವಲಂಬಿಸಿದ್ದು, ಇಲ್ಲಿಗೆ ಹೋಗಬೇಕಾದರೆÉ ಈ ಮದ್ಯದ ಅಂಗಡಿ ಮೂಲಕವೇ ಬರಬೇಕಾಗಿದ್ದು, ಇಲ್ಲಿ ಕುಡಿದ ಅಮಲಿನಲ್ಲಿ ಕುಡುಕರು ಎಲ್ಲ್ಲೆಂದರಲ್ಲಿ ಮಲಗಿರುತ್ತಾರೆ. ಇದರಿಂದ ಶಾಲೆಗೆ ಬರುವ ಹೆಣ್ಣು ಮಕ್ಕಳಿಗೆ ಮುಜುಗರ ಆಗಲಿದೆ ಈ ವ್ಯಾಪ್ತಿಯು ಬಂಡೀಪುರ ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಜೇನು ಕುರುಬರು ಹಾಗೂ ಬೆಟ್ಟ ಕುರುಬರು, ಹಾಡಿಯ ಹಲವರು ವಾಸವಿದ್ದು, ಅವರು ಸಹ ಮದ್ಯವ್ಯಸನಕ್ಕೆ ಒಳಗಾಗುವ ಸಂಭವ ಇದೆ. ಸಂಬಂಧಪಟ್ಟ ಅಧಿಕಾರಿಗಳು ಶೀರ್ಘವಾಗಿ ಸರ್ಕಾರದಿಂದ ಹಾಕಲಾಗಿರುವ ಎಂಎಸ್‍ಐಎಲ್ ಮದ್ಯದ ಅಂಗಡಿಯನ್ನು ಬಂದ್ ಮಾಡಿ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬಿ.ಮಟಕೆರೆ ಗ್ರಾಮದ ಹಿರಿಯ ಮುಖಂಡರಾದ ಅಣ್ಣಯ್ಯಸ್ವಾಮಿ, ತಾಪಂ ಮಾಜಿ ಅಧ್ಯಕ್ಷೆ ಲಕ್ಷ್ಮೀ ರಮೇಶ್, ಗ್ರಾಪಂ ಮಾಜಿ ಸದಸ್ಯ ಹಿರೇಹಳ್ಳಿ ದೇವದಾಸ್, ಮೂಳೆಯೂರು ಗ್ರಾಮದ ಗುಡಿಗೌಡರಾದ ಪ್ರಭಾಕರ್, ಎಂ.ಬಿ ಆನಂದ್, ರಾಮಲಿಂಗ, ಸುಮತಿಕುಮಾರ್, ನಂದಕುಮಾರ್, ಸತೀಶ್, ನಟರಾಜ್, ಎಸ್‍ಡಿಎಂಸಿ ಅಧ್ಯಕ್ಷ ಚಂದ್ರಪ್ರಭಾ, ಬಾಡಗ ಮಾದಪ್ಪ, ಮಣಿಕುಮಾರ್ ಟ್ರೈಬಲ್ ಮುಖಂಡ ಚಿಕ್ಕಬೊಮ್ಮ, ಹಾಗೂ ಬಿ.ಮಟಕೆರೆ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗೌರಿಪುರಕ್ಕೆ ಅಧಿಕಾರಿಗಳ ದೌಡು
ಬನ್ನಿಕುಪ್ಪೆ: ಗೌರಿಪುರ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕಾರ ಹಾಕಿರುವುದರಿಂದ ಸಹಾಯಕ ಚುನಾವಣಾ ಅಧಿಕಾರಿಗಳಾದ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಅವರು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ, ಸಮಸ್ಯೆಗಳನ್ನು ಬಗೆಹರಿಸುವ ವಾಗ್ದಾನ ನೀಡಿದರು.

ತಾವು ಹೊಸದಾಗಿ ಬಂದಿದ್ದು ಗ್ರಾಮಸ್ಥರು ಕಂದಾಯ ಅಧಿಕಾರಿಗಳಿಗೆ ನೀಡಿದ ಮನವಿಯನ್ನು ಪರಿಶೀಲಿಸಿದ್ದೇನೆ. ಗೋಮಾಳವೆಂದು ನಕ್ಷೆಯಲ್ಲಿ ನಮೂದಾಗಿರುವ ಬಗ್ಗೆ ಮಾಹಿತಿ ಪಡೆದಿದ್ದೇನೆ. ಸರ್ವೆ ಮತ್ತಿತರ ಕಂದಾಯ ಇಲಾಖೆ ಅಧಿಕಾರಿಗಳನ್ನು ಗ್ರಾಮಕ್ಕೆ ಕಳುಹಿಸಿ ನಿವೇಶನ-ಮನೆಗೆ ಸಂಬಂಧಪಟ್ಟಂತೆ ದಾಖಲಾತಿ ಕ್ರೋಢೀಕರಿಸಿ 9 ಅಂಡ್ 11 ಬಿ ನೀಡಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ನಂತರ ಹಕ್ಕುಪತ್ರ ವಿತರಿಸಲು ಕ್ರಮ ವಹಿಸಲಾಗುವುದು. ಅಕ್ರಮ-ಸಕ್ರಮ ಯೋಜನೆಯಡಿ ಜಮೀನು ಸಾಗುವಳಿಗಾಗಿ ಅರ್ಜಿ ಸಲ್ಲಿಸಲು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ಹಿರಿಯ ಅಧಿಕಾರಿಗಳಲ್ಲಿ ಕೇಳಲಾಗುವುದು ಎಂದ ಅವರು, ಯಾವುದೇ ಕಾರಣಕ್ಕೂ ಗ್ರಾಮಸ್ಥರು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸದಂತೆ ಮುಖಂಡರಲ್ಲಿ ಮನವಿ ಮಾಡಿದರು.

ತಾಲೂಕು ಪಂಚಾಯ್ತಿ ಅಧಿಕಾರಿ ಇ.ಓ.ಕೃಷ್ಣಕುಮಾರ್, ತಹಶೀಲ್ದಾರ್ ಬಸವರಾಜು, ರಾಜಸ್ವ ನಿರೀಕ್ಷಕ ಪ್ರಭಾಕರ್, ವಿ.ಎ. ನಾಗೇಶ್, ಶಿವಕುಮಾರ್, ಪಿಡಿಓ ನವೀನ್, ಗಾ.ಪಂ ಸದಸ್ಯರಾದ ಮಹದೇವ್, ಮುಖಂಡರಾದ ಶಂಕರನಾಯ್ಕ, ಚೋಟಾಸಾಬ್, ಬಸವರಾಜನಾಯಕ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಗೌರಿಪುರದಲ್ಲಿ ಗ್ರಾಮಸ್ಥರ ಸಭೆ ನಡೆಸಿದ ಉಪ ವಿಭಾಗಾಧಿಕಾರಿ ಚಂದ್ರಶೇಖರಯ್ಯ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಕುಮಾರ್ ಚುನಾವಣೆ ಬಹಿಷ್ಕರಿಸದಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

Translate »