ಮೈಸೂರು

ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಸದಸ್ಯತ್ವ ರದ್ದಿಗೆ ಕಾಂಗ್ರೆಸ್ ನಿರ್ಧಾರ
ಮೈಸೂರು

ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಸದಸ್ಯತ್ವ ರದ್ದಿಗೆ ಕಾಂಗ್ರೆಸ್ ನಿರ್ಧಾರ

February 8, 2019

ಬೆಂಗಳೂರು: ಬಂಡಾಯದ ಮೂಲಕ ಸರ್ಕಾರ ಉರುಳಿಸುವ ಪ್ರಯತ್ನದಲ್ಲಿ ಮುಂಚೂಣಿಯಲ್ಲಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರ ವಿಧಾನಸಭಾ ಸದಸ್ಯತ್ವವನ್ನು ರದ್ದುಗೊಳಿ ಸುವ ಮಹತ್ವದ ತೀರ್ಮಾನಕ್ಕೆ ಕಾಂಗ್ರೆಸ್ ಮುಂದಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಾಯಕತ್ವದಲ್ಲಿ ನಾಳೆ ಬೆಳಿಗ್ಗೆ ನಡೆಯಲಿರುವ ಶಾಸಕಾಂಗ ಸಭೆಗೆ ಖುದ್ದು ಹಾಜರಾಗಿ ಶೋಕಾಸ್ ನೋಟೀಸ್‍ಗೆ ಸಮಜಾಯಿಷಿ ನೀಡದಿದ್ದರೆ, ಮೊದಲ ಹಂತದಲ್ಲಿ ಈ ಇಬ್ಬರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ…

ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿ: ಬಿಜೆಪಿಗೆ ಅಮಿತ್ ಶಾ ಗ್ರೀನ್ ಸಿಗ್ನಲ್?
ಮೈಸೂರು

ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿ: ಬಿಜೆಪಿಗೆ ಅಮಿತ್ ಶಾ ಗ್ರೀನ್ ಸಿಗ್ನಲ್?

February 8, 2019

ಬೆಂಗಳೂರು: ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ರಾಜ ಕೀಯ ಬೆಳವಣಿಗೆಗಳು ತೀವ್ರಗೊಳ್ಳುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ವನ್ನು ಉರುಳಿಸಲು ರಾಜ್ಯ ನಾಯಕರಿಗೆ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯ ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರಕ್ಕೆ ಸದಸ್ಯರ ಬೆಂಬಲ ಇಲ್ಲ ಎಂದು ಹೇಳಿದ್ದರೂ ಬಿಜೆಪಿ ಹೈ ಕಮಾಂಡ್ ಇಲ್ಲಿಯವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿರಲಿಲ್ಲ. ಆದರೆ ಬುಧವಾರ ಮತ್ತು ಗುರುವಾರ ಅಧಿವೇಶನಕ್ಕೆ ವ್ಹಿಪ್ ಜಾರಿಯಾಗಿದ್ದರೂ ಮಿತ್ರ ಪಕ್ಷದ ಶಾಸಕರು ಗೈರಾದ ಹಿನ್ನೆಲೆ ಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್…

ನಾಲ್ಕಲ್ಲ 40 ಶಾಸಕರು ರಾಜೀನಾಮೆ ನೀಡಿದರೂ ಸ್ವೀಕರಿಸುವೆ…
ಮೈಸೂರು

ನಾಲ್ಕಲ್ಲ 40 ಶಾಸಕರು ರಾಜೀನಾಮೆ ನೀಡಿದರೂ ಸ್ವೀಕರಿಸುವೆ…

February 8, 2019

ಬೆಂಗಳೂರು: ಕೇವಲ ನಾಲ್ಕು ಮಂದಿ ಮಾತ್ರ ವಲ್ಲ ಒಂದು ವೇಳೆ ಮೈತ್ರಿ ಸರ್ಕಾರದ 40 ಶಾಸಕರು ರಾಜೀನಾಮೆ ಕೊಟ್ಟರೂ ತೆಗೆದುಕೊಳ್ಳುತ್ತೇನೆ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ. ಕೋಲಾರದ ಶ್ರೀನಿವಾಸಪುರ ತಾಲೂ ಕಿನ ಜನ್ನಪ್ಪನಹಳ್ಳಿ ಗ್ರಾಮದಲ್ಲಿ ಗಣೇಶನ ಮೂರ್ತಿ ಹಾಗೂ ಪುಷ್ಕರಣಿ ಉದ್ಘಾಟಿಸಿ ಮಾತನಾಡಿದ ರಮೇಶ್ ಕುಮಾರ್, ಶಾಸಕರು ರಾಜೀನಾಮೆ ನೀಡುವ ವಿಚಾರ ನನಗೇನು ಗೊತ್ತಿಲ್ಲ. ಅಧಿವೇಶನದಲ್ಲಿ ಗೈರಾದ ಶಾಸಕರ ಮೇಲೆ ಕ್ರಮಕೈಗೊಳ್ಳಲು ನಾನು ಯಾರು? ನಾಲ್ಕು ಅಲ್ಲ ನಲವತ್ತು ಮಂದಿ ಶಾಸಕರು ರಾಜೀನಾಮೆ ನೀಡಿದರೂ ನಾನು…

ಡಿಕೆಶಿ ಮನವಿ ಪರಿಗಣಿಸಿ: ಇ.ಡಿ.ಗೆ ಹೈಕೋರ್ಟ್ ನಿರ್ದೇಶನ
ಮೈಸೂರು

ಡಿಕೆಶಿ ಮನವಿ ಪರಿಗಣಿಸಿ: ಇ.ಡಿ.ಗೆ ಹೈಕೋರ್ಟ್ ನಿರ್ದೇಶನ

February 8, 2019

ಬೆಂಗಳೂರು: ನವದೆಹಲಿಯಲ್ಲಿನ ತಮ್ಮ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ) ನೀಡಿರುವ ಸಮನ್ಸ್ ನಿಂದ ವಿನಾಯಿತಿ ಕೋರಿ ಸಚಿವ ಡಿ.ಕೆ.ಶಿವ ಕುಮಾರ್ ಮನವಿ ಸಲ್ಲಿಸಿದಲ್ಲಿ ಅದನ್ನು ಪರಿ ಗಣಿಸುವಂತೆ ಹೈಕೋರ್ಟ್ ಗುರುವಾರ ಇ.ಡಿ.ಗೆ ನಿರ್ದೇಶನ ನೀಡಿದೆ. ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿ ದಂತೆ ನಾಳೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾ ಲಯ ನೀಡಿರುವ ಸಮನ್ಸ್ ರದ್ದು ಕೋರಿ ಡಿ.ಕೆ.ಶಿವಕುಮಾರ್ ಅವರು ರಿಟ್ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ಇತರೆ ಆರೋಪಿ…

ಇಡಿ ಅಧಿಕಾರಿಗಳಿಂದ ವಾದ್ರಾ ಹೆಚ್ಚಿನ ವಿಚಾರಣೆ
ಮೈಸೂರು

ಇಡಿ ಅಧಿಕಾರಿಗಳಿಂದ ವಾದ್ರಾ ಹೆಚ್ಚಿನ ವಿಚಾರಣೆ

February 8, 2019

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿಎ ಅಧಿನಾಯಕಿ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರನ್ನು ಇಂದು ಸಹ ಜಾರಿ ನಿರ್ದೇಶ ನಾಲಯ ಅಧಿಕಾರಿಗಳು ವಿಚಾರಣೆ ಗೊಳಿಸಿದ್ದಾರೆ. ಇಬ್ಬರು ಉಪ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರನ್ನೊಳಗೊಂಡ ತಂಡ ದಿಂದ ರಾಬರ್ಟ್ ವಾದ್ರಾ ಅವರ ವಿಚಾ ರಣೆ ನಡೆಸಲಾಗಿದೆ ಎಂಬುದು ಇಡಿ ಮೂಲಗಳಿಂದ ತಿಳಿದುಬಂದಿದೆ. ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಅಳಿಯ ಹಾಗೂ ಪ್ರಿಯಾಂಕಾ ಗಾಂಧಿ ಅವರ ಪತಿ ಆಗಿರುವ ರಾಬರ್ಟ್ ವಾದ್ರಾ ಬುಧವಾರ ಐದೂವರೆ…

ಪ್ರಸಾದದಲ್ಲಿ ವಿಷ ಹಾಕಲು ಉಗ್ರರ ಸ್ಕೆಚ್!
ಮೈಸೂರು

ಪ್ರಸಾದದಲ್ಲಿ ವಿಷ ಹಾಕಲು ಉಗ್ರರ ಸ್ಕೆಚ್!

February 8, 2019

ಮುಂಬೈ: ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಸುಳವಾಡಿಯ ಕಿಚ್‍ಗುತ್ತಿ ಮಾರಮ್ಮ ವಿಷ ಪ್ರಸಾದ ದುರಂತದಿಂದ ಪ್ರೇರಣೆ ಪಡೆದ ಐಸಿಸ್ ಉಗ್ರರು, ಅದೇ ರೀತಿ ಸ್ಕೆಚ್ ಹಾಕಿ 40 ಸಾವಿರ ಮಂದಿಯನ್ನು ಹತ್ಯೆಗೈಯ್ಯಲು ಯತ್ನಿಸಿದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಉಗ್ರರು ನಡೆಸಿದ್ದ ಈ ಯತ್ನ ವಿಫಲವಾಗಿದೆ. ಅಂದಹಾಗೆ ವಿಷ ಹಾಕಲು ಪ್ಲಾನ್ ಮಾಡಿದ್ದ ಶಂಕಿತ 10 ಐಸಿಸ್ ಉಗ್ರರನ್ನು ಮುಂಬೈನ ಭಯೋತ್ಪಾದನೆ ನಿಗ್ರಹ ದಳದ (ಎಟಿಎಸ್) ಪೊಲೀಸರು ಸೆರೆ ಹಿಡಿದಿದ್ದಾರೆ. ಇವರನ್ನು ವಿಚಾರಣೆಗೊಳಪಡಿಸಿದಾಗ ವಿಷ ಪ್ರಸಾದ…

ವಿಧಾನಸಭೆಯಲ್ಲಿ ವಾಗ್ಯುದ್ಧ: ಕಲಾಪ ಮುಂದೂಡಿಕೆ
ಮೈಸೂರು

ವಿಧಾನಸಭೆಯಲ್ಲಿ ವಾಗ್ಯುದ್ಧ: ಕಲಾಪ ಮುಂದೂಡಿಕೆ

February 8, 2019

ಬೆಂಗಳೂರು: ಸಮ್ಮಿಶ್ರ ಸರ್ಕಾರಕ್ಕೆ ಬಹುಮತವಿಲ್ಲ ಎನ್ನುವು ದಾದರೆ ಅವಿಶ್ವಾಸ ನಿರ್ಣಯ ಮಂಡಿಸಿ ಎಂದು ಪ್ರತಿಪಕ್ಷ ಬಿಜೆಪಿಗೆ ಕಾಂಗ್ರೆಸ್-ಜೆಡಿಎಸ್ ಸವಾಲು ಹಾಕಿದರೆ, ವಿಶ್ವಾಸ ಮತ ಮಂಡಿಸಲು ಸಿದ್ಧವಿರುವುದಾಗಿ ವಿಪಕ್ಷ ಸದಸ್ಯರು ಪ್ರತಿಸವಾಲು ಹಾಕಿದ್ದ ರಿಂದ ವಿಧಾನಸಭೆಯಲ್ಲಿಂದು ಭಾರೀ ವಾಗ್ಯುದ್ಧಕ್ಕೆ ಕಾರಣವಾಗಿ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. ಬೆಳಿಗ್ಗೆ ಸದನ ಸಮಾವೇಶಗೊಳ್ಳುತ್ತಿ ದ್ದಂತೆ ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಭಾ ಗಕ್ಕೆ ಧಾವಿಸಿ ಧರಣಿ ಆರಂಭಿಸಿ, ಬಹುಮತ ವಿಲ್ಲದ ಸರ್ಕಾರಕ್ಕೆ ಧಿಕ್ಕಾರ ಎಂಬ ಘೋಷಣೆ…

ಇಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ಸೇರಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆ ವಿತರಣೆ
ಮೈಸೂರು

ಇಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜು ಸೇರಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆ ವಿತರಣೆ

February 8, 2019

ಮೈಸೂರು: ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ 7 ಲಕ್ಷ ಮಕ್ಕ ಳಿಗೆ ಜಂತು ಹುಳು ನಿವಾರಣೆ ಮಾತ್ರೆ ಗಳನ್ನು ವಿತರಣೆ ಮಾಡುವ ಗುರಿ ಹೊಂದ ಲಾಗಿದ್ದು, ಈ ಮಾತ್ರೆಗಳ ಸೇವೆನೆಯಿಂದ ಯಾವುದೇ ಅಡ್ಡ ಪರಿಣಾಮದ ಆತಂಕ ವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು ತಿಳಿಸಿದರು. ಮೈಸೂರಿನ ಕುಂಬಾರಕೊಪ್ಪಲಿನ ಉನ್ನ ತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿ…

ಮೈಸೂರು, ಚಾ.ನಗರ ಜಿಲ್ಲೆಯ ಶ್ರೀ ಬೀರದೇವರುಗಳ ವೈಭವಯುತ ಮೆರವಣಿಗೆ
ಮೈಸೂರು

ಮೈಸೂರು, ಚಾ.ನಗರ ಜಿಲ್ಲೆಯ ಶ್ರೀ ಬೀರದೇವರುಗಳ ವೈಭವಯುತ ಮೆರವಣಿಗೆ

February 8, 2019

ಮೈಸೂರು: ಶ್ರೀ ಕಾಗಿನೆಲೆ ಶಾಖಾ ಮಠದ ವತಿಯಿಂದ ಮೈಸೂರಿನ ಸಿದ್ದಾರ್ಥನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ‘ಶ್ರೀ ಕನಕ ಭವನ’ ಲೋಕಾರ್ಪಣೆ ಅಂಗವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಗಡಿ ದೇವರಾದ ಶ್ರೀ ಬೀರದೇವರುಗಳ ಮೆರ ವಣಿಗೆ ವೈಭವಯುತವಾಗಿ ಗುರುವಾರ ಸಂಜೆ ನೆರವೇರಿತು. ಕಾಗಿನೆಲೆ ಶಾಖಾ ಮಠದ ಪೀಠಾಧ್ಯಕ್ಷ ರಾದ ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮೀಜಿ ಹಾಗೂ ಶ್ರೀ ಶಿವಾನಂದಾಪುರಿ ಸ್ವಾಮೀಜಿಯವರು ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ‘ಗಂಗೆ ಪೂಜೆ’ ನೆರವೇರಿಸಿ, ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲೆಯ…

ಸರ್ಕಾರ ರಂಗಭೂಮಿಗೆ ನೀಡುವ ಹಣ ದುರುಪಯೋಗವಾಗದಂತೆ ಎಚ್ಚರವಹಿಸಬೇಕು
ಮೈಸೂರು

ಸರ್ಕಾರ ರಂಗಭೂಮಿಗೆ ನೀಡುವ ಹಣ ದುರುಪಯೋಗವಾಗದಂತೆ ಎಚ್ಚರವಹಿಸಬೇಕು

February 8, 2019

ಮೈಸೂರು: ಕನ್ನಡ ಮತ್ತು ಸಂಸ್ಕøತಿ ಇಲಾಖೆ ರಂಗಭೂಮಿಗೆ ಕೋಟ್ಯಾಂತರ ಹಣ ಖರ್ಚು ಮಾಡುತ್ತಿದೆ. ಆದರೆ, ಆ ಹಣ ಉಪಯೋಗಿಸಿಕೊಂಡ ಹವ್ಯಾಸಿ ರಂಗ ಕಲಾವಿದರು ಎಷ್ಟು ಒಳ್ಳೆಯ ನಾಟಕಗಳನ್ನು ನೀಡಿದ್ದಾರೆ ಎಂಬುದನ್ನು ಇಲಾಖೆ ಪರಿಶೀಲಿಸಬೇಕು. ಜತೆಗೆ ಹಣ ದುರುಪಯೋಗವಾಗದಂತೆ ಎಚ್ಚರ ವಹಿಸಿ ತಲುಪಬೇಕಾದವರಿಗೆ ತಲುಪಿಸಬೇಕು ಎಂದು ಹಿರಿಯ ರಂಗಕರ್ಮಿ ಮೈಮ್ ರಮೇಶ್ ಹೇಳಿದರು. ಕಲಾಮಂದಿರದ ಕಿರುರಂಗಮಂದಿರದಲ್ಲಿ ಮೈಮ್ ರಮೇಶ್ ಅವರಿಗೆ ‘ನಾಟಕ ಅಕಾಡೆಮಿ ಪ್ರಶಸ್ತಿ’ ಬಂದ ಸಲುವಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗ ದೊಂದಿಗೆ ಪ್ರತಿಬಿಂಬ ರಂಗತಂಡದ…

1 1,136 1,137 1,138 1,139 1,140 1,611
Translate »