ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಸದಸ್ಯತ್ವ ರದ್ದಿಗೆ ಕಾಂಗ್ರೆಸ್ ನಿರ್ಧಾರ
ಮೈಸೂರು

ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಸದಸ್ಯತ್ವ ರದ್ದಿಗೆ ಕಾಂಗ್ರೆಸ್ ನಿರ್ಧಾರ

February 8, 2019

ಬೆಂಗಳೂರು: ಬಂಡಾಯದ ಮೂಲಕ ಸರ್ಕಾರ ಉರುಳಿಸುವ ಪ್ರಯತ್ನದಲ್ಲಿ ಮುಂಚೂಣಿಯಲ್ಲಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಳ್ಳಿ ಅವರ ವಿಧಾನಸಭಾ ಸದಸ್ಯತ್ವವನ್ನು ರದ್ದುಗೊಳಿ ಸುವ ಮಹತ್ವದ ತೀರ್ಮಾನಕ್ಕೆ ಕಾಂಗ್ರೆಸ್ ಮುಂದಾಗಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಾಯಕತ್ವದಲ್ಲಿ ನಾಳೆ ಬೆಳಿಗ್ಗೆ ನಡೆಯಲಿರುವ ಶಾಸಕಾಂಗ ಸಭೆಗೆ ಖುದ್ದು ಹಾಜರಾಗಿ ಶೋಕಾಸ್ ನೋಟೀಸ್‍ಗೆ ಸಮಜಾಯಿಷಿ ನೀಡದಿದ್ದರೆ, ಮೊದಲ ಹಂತದಲ್ಲಿ ಈ ಇಬ್ಬರನ್ನು ಸದಸ್ಯತ್ವದಿಂದ ಅನರ್ಹಗೊಳಿಸಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳುವಂತೆ ಪಕ್ಷದ ಎಲ್ಲಾ 80 ಸದಸ್ಯರಿಗೂ ವ್ಹಿಪ್ ನೀಡಲಾಗಿದೆ. ಕಳೆದ ಶಾಸಕಾಂಗ ಸಭೆಗೆ ಗೈರಾಗಿದ್ದಲ್ಲದೆ, ಸದನದ ಕಲಾಪದಲ್ಲೂ ಭಾಗಿಯಾಗದೆ, ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ಹಾಗೂ ನಾಗೇಂದ್ರ ಮುಂಬೈನಲ್ಲೇ ಉಳಿದಿ ದ್ದಾರೆ. ಎರಡನೇ ಶೋಕಾಸ್ ನೋಟೀಸ್‍ಗೂ ಈ ನಾಲ್ಕು ಮಂದಿ ಸ್ಪಂದಿಸುತ್ತಿಲ್ಲ. ನಾಳೆಯ ಶಾಸಕಾಂಗ ಸಭೆಗೆ ಮತ್ತೆ ಗೈರುಹಾಜರಾದಲ್ಲಿ ಇಬ್ಬರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ಪತ್ರ ಬರೆಯಲಿ ದ್ದಾರೆ. ಮೊದಲ ಸಭೆಗೆ ಗೈರಾದುದಕ್ಕೆ ವಿವರಣೆ ನೀಡಿದ್ದರಿಂದ ನಾಗೇಂದ್ರ ಮತ್ತು ಜಾಧವ್ ವಿರುದ್ಧ ಸದ್ಯಕ್ಕೆ ಯಾವುದೇ ಶಿಸ್ತು ಕ್ರಮವಿಲ್ಲ.

ವ್ಹಿಪ್ ಜಾರಿಗೊಳಿಸಿದ್ದರೂ ಒಟ್ಟಾರೆ ಐದು ಮಂದಿ ಕಾಂಗ್ರೆಸ್ ಸದಸ್ಯರು ಇಂದು ಸದನ ಕಲಾಪದಲ್ಲಿ ಕಾಣಿಸಿಕೊಂಡಿಲ್ಲ. ಈ ನಾಲ್ವರ ಜೊತೆ ಬಿ.ಸಿ.ಪಾಟೀಲ್ ಕೂಡ ಇರಬಹು ದೆಂಬ ಶಂಕೆ ವ್ಯಕ್ತವಾಗಿದೆ. ಇನ್ನು ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಕಂಪ್ಲಿ ಗಣೇಶ್ ತಲೆಮರೆಸಿಕೊಂಡಿದ್ದಾರೆ. ಶಿಸ್ತು ಕ್ರಮಕ್ಕೂ ಮುನ್ನ ಈ ಸದಸ್ಯರನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನವನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಮಾಡಲಿದ್ದಾರೆ. ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ತೆರಳುವು ದರಿಂದ ಯಾವುದೇ ಲಾಭವಿಲ್ಲ, ಈ ಯತ್ನ ದಿಂದ ಸಂಕಷ್ಟಕ್ಕೆ ಸಿಲುಕಲಿದ್ದೀರಿ ಎಂದು ಅವರ ಗಮನಕ್ಕೆ ತರಲಿದ್ದಾರೆ. ಇದಕ್ಕೂ ಜಗ್ಗದಿದ್ದರೆ ಸದಸ್ಯತ್ವ ಅನರ್ಹ ತೆಯ ಅಂತಿಮ ಅಸ್ತ್ರ ಪ್ರಯೋಗಕ್ಕೆ ಪಕ್ಷ ಮುಂದಾಗಲಿದೆ.

Translate »