ನಾಲ್ಕಲ್ಲ 40 ಶಾಸಕರು ರಾಜೀನಾಮೆ ನೀಡಿದರೂ ಸ್ವೀಕರಿಸುವೆ…
ಮೈಸೂರು

ನಾಲ್ಕಲ್ಲ 40 ಶಾಸಕರು ರಾಜೀನಾಮೆ ನೀಡಿದರೂ ಸ್ವೀಕರಿಸುವೆ…

February 8, 2019

ಬೆಂಗಳೂರು: ಕೇವಲ ನಾಲ್ಕು ಮಂದಿ ಮಾತ್ರ ವಲ್ಲ ಒಂದು ವೇಳೆ ಮೈತ್ರಿ ಸರ್ಕಾರದ 40 ಶಾಸಕರು ರಾಜೀನಾಮೆ ಕೊಟ್ಟರೂ ತೆಗೆದುಕೊಳ್ಳುತ್ತೇನೆ ಎಂದು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ. ಕೋಲಾರದ ಶ್ರೀನಿವಾಸಪುರ ತಾಲೂ ಕಿನ ಜನ್ನಪ್ಪನಹಳ್ಳಿ ಗ್ರಾಮದಲ್ಲಿ ಗಣೇಶನ ಮೂರ್ತಿ ಹಾಗೂ ಪುಷ್ಕರಣಿ ಉದ್ಘಾಟಿಸಿ ಮಾತನಾಡಿದ ರಮೇಶ್ ಕುಮಾರ್, ಶಾಸಕರು ರಾಜೀನಾಮೆ ನೀಡುವ ವಿಚಾರ ನನಗೇನು ಗೊತ್ತಿಲ್ಲ.

ಅಧಿವೇಶನದಲ್ಲಿ ಗೈರಾದ ಶಾಸಕರ ಮೇಲೆ ಕ್ರಮಕೈಗೊಳ್ಳಲು ನಾನು ಯಾರು? ನಾಲ್ಕು ಅಲ್ಲ ನಲವತ್ತು ಮಂದಿ ಶಾಸಕರು ರಾಜೀನಾಮೆ ನೀಡಿದರೂ ನಾನು ತೆಗೆದುಕೊಳ್ಳಲು ಸಿದ್ಧವೆಂದು ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ಸಿನ ಶಾಸಕ ಕಂಪ್ಲಿ ಗಣೇಶ್ ಬಗ್ಗೆ ಪ್ರತಿಕ್ರಿಯಿಸಿ, ಗಣೇಶ್ ಅವರನ್ನು ಬಂಧಿಸುವಂತೆ ಸೂಚನೆ ನೀಡಲು ನಾನು ಪೆÇಲೀಸ್ ಇಲಾಖೆಯ ಅಧಿಕಾರಿಯೇ? ನನಗೆ ಹೇಗೆ ಗೊತ್ತಿರುತ್ತದೆ ಅವರ ಬಗ್ಗೆ ಎಂದು ಹೇಳಿದ್ದಾರೆ.

Translate »