ಬೆಂಗಳೂರು: ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಲಂಡನ್ ಬಿಗ್ ಬಸ್ ಮಾದರಿಯ ಆರು ಡಬಲ್ ಡೆಕರ್ ತೆರೆದ ಬಸ್‍ಗಳನ್ನು ಕೆಎಸ್‍ಟಿಡಿಸಿಯಿಂದ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದಾರೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಮಂಡ್ಯದ ಕರ್ನಾಟಕ ಸಂಘದ ಅಭಿವೃದ್ಧಿಗೆ ಒಂದು ಕೋಟಿ, ಅಲ್ಲಿನ ಕ್ರೀಡಾಂಗ ಣಕ್ಕೆ ಮೂಲಸೌಕರ್ಯ ಕಲ್ಪಿಸಲು ಮತ್ತೊಂದು ಕೋಟಿ ರೂ. ನೀಡಿ ದ್ದಾರೆ. ಮಂಡ್ಯ ಕಬ್ಬು ಬೆಳೆಗಾರರ…
`ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ಕ್ಕೆ ಜನಸಾಗರ
February 9, 2019ಕುತೂಹಲಭರಿತ ವಿದ್ಯಾರ್ಥಿಗಳು, ಪೋಷಕರಿಗೆ ಹವಾ ನಿಯಂತ್ರಿತ ಒಂದೇ ಸೂರಿನಡಿ ನೂರಾರು ಶಿಕ್ಷಣ ಸಂಸ್ಥೆಗಳಿಂದ ಶೈಕ್ಷಣಿಕ ಸೌಲಭ್ಯಗಳ ಭರಪೂರ ಮಾಹಿತಿ ಮೈಸೂರು: ಬಹು ನಿರೀಕ್ಷಿತ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ವು ಸಾಂಸ್ಕøತಿಕ ನಗರಿ ಹಾಗೂ ಶೈಕ್ಷಣಿಕ ಕೇಂದ್ರ ಎಂದೇ ವಿಶ್ವಾದ್ಯಂತ ಹೆಸರಾಗಿರುವ ಮೈಸೂರಿನಲ್ಲಿ ಇಂದು ಶುಭಾರಂಭಗೊಂಡಿತು. ಮೈಸೂರಿನ ಮಹಾರಾಜ ಕಾಲೇಜು ಮೈದಾನ ದಲ್ಲಿ ಏರ್ಪಡಿಸಿರುವ ಮೂರು ದಿನಗಳ ಈ ಶೈಕ್ಷಣಿಕ ಮೇಳವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ…
ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ!
February 9, 2019ಮೈಸೂರು: ಮೈಸೂ ರಿನ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದನ್ನು ನೀಗಿಸಿದಲ್ಲಿ ಕೇಂದ್ರ ಮತ್ತಷ್ಟು ಪರಿಣಾಮ ಕಾರಿಯಾಗಿ ವಿಕಲಚೇತನರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿ ಕರ ಸಬಲೀಕರಣ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಜಿ.ಎಸ್. ಅಭಿಕುಮಾರ್ ಅಭಿಪ್ರಾಯಪಟ್ಟರು. ಮೈಸೂರಿನ ತಿಲಕನಗರದಲ್ಲಿರುವ ಮೈಸೂರು ಜಿಲ್ಲಾ ಅಂಗವಿಕಲರ ಪುನರ್ವ ಸತಿ ಕೇಂದ್ರದಲ್ಲಿ (ಡಿಡಿಆರ್‍ಸಿ) ಶುಕ್ರವಾರ ಹಮ್ಮಿಕೊಂಡಿದ್ದ ಕೇಂದ್ರದ 7ನೇ ವಾರ್ಷಿ ಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಲವು ಇತಿಮಿತಿಗಳ ನಡುವೆ ಪುನರ್ವ…
ತಾಪಂ ಕಚೇರಿಯಲ್ಲೇ ಅಶುಚಿತ್ವ!
February 9, 2019ಮೈಸೂರು: ಮೈಸೂರಿನ ನಜರ್‍ಬಾದ್‍ನಲ್ಲಿನ ಮಿನಿ ವಿಧಾನ ಸೌಧದಲ್ಲಿರುವ ತಾಲೂಕು ಕಚೇರಿಗೆ ಶುಕ್ರವಾರ ಜಿಪಂ ಹಂಗಾಮಿ ಅಧ್ಯಕ್ಷ ಸಾ.ರಾ. ನಂದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಶೌಚಾಲಯದ ಅಶುಚಿತ್ವ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ಸಾರ್ವಜನಿಕರಿಂದ ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ತಾಲೂಕು ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ರೈತರ ಅರ್ಜಿ ಗಳನ್ನು ತಕ್ಷಣವೇ ವಿಲೇವಾರಿ ಮಾಡು ವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪತ್ರಕರ್ತರೊಂದಿಗೆ ಸಾ.ರಾ.ನಂದೀಶ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ರೈತರಿಗೆ ಸವಲತ್ತುಗಳನ್ನು ನೀಡಲು ವಿಳಂಬ…
ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂತೆ ಸೊಗಸು
February 9, 2019ಮೈಸೂರು: ಅಲ್ಲಿ ವಿದ್ಯಾರ್ಥಿನಿಯರೆಲ್ಲರೂ ಬಾಣಸಿಗರಾಗಿದ್ದರು. ಪುಸ್ತಕ ಹಿಡಿಯಬೇಕಾದ ಕೈಗಳು ಸೌಟು ಹಿಡಿದು ರುಚಿಕರವಾದ ಅಡುಗೆ ತಯಾರಿಸಿ, ಹಸಿದವರ ನಾಲಿಗೆ ತಣಿಸಿದವು! ಮೈಸೂರು ಮಹಾರಾಣಿ ಕಲಾ ಕಾಲೇಜಿನ ಆವರಣದಲ್ಲಿ ಶುಕ್ರವಾರ ಶೈಕ್ಷ ಣಿಕ ಚಟುವಟಿಕೆಗೆ ವಿರಾಮ ಹಾಕಿ ಸಂತೆ ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರೇ ತಯಾರಿಸಿದ ಸಸ್ಯಾಹಾರ, ಮಾಂಸಾಹಾರ, ಸಿಹಿ ತಿನಿಸು, ಪಾನೀಯ ಮತ್ತಿತರ ತಿನಿಸು ಗಳನ್ನು ಮಾರಾಟ ಮಾಡಿದರು. ಕಾಲೇಜು ಆವರಣದಲ್ಲಿ 20 ಮಳಿಗೆಗಳನ್ನು ತೆರೆಯಲಾಗಿತ್ತು. ವಿದ್ಯಾರ್ಥಿನಿಯರೇ ಮಾಡಿದ್ದ ಬಿರಿಯಾನಿ ಸೇವಿಸಲು ವಿದ್ಯಾರ್ಥಿನಿಯರು, ಉಪನ್ಯಾಸಕರು ಮುಗಿಬಿದ್ದರು. ಪಾನಿ ಪುರಿ, ಗೋಬಿಮಂಚೂರಿ,…
ಸಾಮೂಹಿಕ ಅತ್ಯಾಚಾರ ಆರೋಪ: ನಾಲ್ವರ ವಿರುದ್ಧ ಯುವತಿ ಪೊಲೀಸರಲ್ಲಿ ದೂರು ದಾಖಲು
February 9, 2019ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಕಾಲ್ ಸೆಂಟರ್ ಉದ್ಯೋಗಿ ಮೇಲೆ ಸ್ನೇಹಿತ ಸೇರಿ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ವರದಿಯಾಗಿದೆ. ಜೆ.ಪಿ.ನಗರ ನಿವಾಸಿಯಾಗಿರುವ 20 ವರ್ಷದ ಕಾಲ್ ಸೆಂಟರ್ ಉದ್ಯೋಗಿ ಕಳೆದ ಭಾನುವಾರದಂದು ರಾತ್ರಿ 9.30ರ ಸುಮಾರಿನಲ್ಲಿ ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಆರ್ಚ್ ಬಳಿ ಪಾನಿಪೂರಿ ಸೇವಿಸಲು ತೆರಳಿದ್ದರಂತೆ. ತನ್ನನ್ನು ಮನೆಗೆ ಡ್ರಾಪ್ ಮಾಡುವಂತೆ ಸ್ನೇಹಿತ ಚಿರಾಗ್ ಎಂಬಾತ ನಿಗೆ ಮೊಬೈಲ್ ಮೂಲಕ ಕರೆ ಮಾಡಿ ಯುವತಿ ಕೇಳಿದ್ದರು ಎನ್ನಲಾಗಿದೆ. ಕಾರಿನಲ್ಲಿ ಸ್ಥಳಕ್ಕೆ…
1.50 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ನಾಶ
February 9, 2019ಮೈಸೂರು: ಮೈಸೂರು ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದ್ದ 1.5 ಲಕ್ಷ ರೂ. ಮೌಲ್ಯದ ಮದ್ಯವನ್ನು ಶುಕ್ರ ವಾರ ಅಬಕಾರಿ ಸಿಬ್ಬಂದಿ ನಾಶಪಡಿಸಿದರು. ನಜರ್‍ಬಾದ್‍ನಲ್ಲಿರುವ ಅಬಕಾರಿ ನಿರೀಕ್ಷಕರ ಕಚೇರಿ ಆವರಣದಲ್ಲಿ ಇಂದು ಬೆಳಿಗ್ಗೆ ಈ ಹಿಂದೆ ಮೈಸೂರು ಜಿಲ್ಲೆಯ 16 ಪ್ರಕರಣಗಳಲ್ಲಿ ವಶಕ್ಕೆ ಪಡೆಯಲಾಗಿದ್ದ 1.5 ಲಕ್ಷ ರೂ. ಮೌಲ್ಯದ, ವಿವಿಧ ಬ್ರ್ಯಾಂಡ್‍ನ 133 ಲೀ. ಮದ್ಯ, 62.250 ಲೀಟರ್ ಬಿಯರ್ ನಾಶಪಡಿಸಲಾಯಿತು. ಕಳೆದ ಚುನಾವಣೆ ವೇಳೆ ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದ ವೇಳೆ ಹಾಗೂ ಕಿರಾಣಿ…
ಸಾಗುವಳಿ ಪತ್ರಕ್ಕಾಗಿ ಆಗ್ರಹಿಸಿ ರೈತರ ಪ್ರತಿಭಟನೆ
February 9, 2019ಮೈಸೂರು: ಬಗರ್‍ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕು. ಸಾಗುವಳಿ ಪತ್ರ ನೀಡಲು ವಿಧಿಸಿರುವ ಷರತ್ತುಗಳನ್ನು ತೆಗೆದು, ಸಾಗುವಳಿ ಅರ್ಜಿ ಸಲ್ಲಿಸಲು ಎಲ್ಲರಿಗೂ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ಆಶ್ರಯದಲ್ಲಿ ಮೈಸೂರಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕಳೆದ 60 ವರ್ಷಗಳಿಂದ ಗೋಮಾಳ, ಗುಂಡು ತೋಪು, ಅರಣ್ಯ ಭೂಮಿಗಳಲ್ಲಿ ಉಳುಮೆ ಮಾಡುತ್ತಾ, ಜೀವನ ನಿರ್ವಹಿ ಸುತ್ತಾ ಬಂದಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡದೆ ವಂಚಿಸಲಾಗಿದೆ. ಇದರಿಂದ ಸಾಗುವಳಿ ಪತ್ರ…
ಮೂರು ದಿನಗಳ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ಕ್ಕೆ ಇಂದು ಚಾಲನೆ
February 8, 2019ಮೈಸೂರು: ಮೂರು ದಿನಗಳ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ (Star of Mysore Education Fair) ನಾಳೆ(ಫೆ.8) ಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆರಂಭವಾಗಲಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಮೇಳ ಉದ್ಘಾಟನೆ ಗೊಳ್ಳಲಿದೆ. ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ, ಮೈಸೂರು ವಿಶ್ವವಿದ್ಯಾನಿಲಯ, ಸಿಬಿಎಸ್‍ಇ, ಐಸಿಎಸ್‍ಇ ಮತ್ತು ರಾಜ್ಯ ಖಾಸಗಿ ಶಾಲೆ ಗಳ ಆಡಳಿತ ಮಂಡಳಿಗಳ ಸಂಘದ (ಸಿಐಎಸ್‍ಪಿ ಎಂಎಎಂ) ಸಹಯೋಗದಲ್ಲಿ ಈ ಶೈಕ್ಷಣಿಕ ಮೇಳ ಆಯೋಜಿಸಲಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ…
ಇಂದು ರಾಜ್ಯ ಬಜೆಟ್
February 8, 2019ಬೆಂಗಳೂರು: ರೈತರಿಂದ ದವಸ ಧಾನ್ಯ, ಹಣ್ಣು-ಕಾಯಿಪಲ್ಲೆಯನ್ನು ನೇರವಾಗಿ ಸರ್ಕಾರವೇ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುವ ವಿನೂತನ ಯೋಜನೆ ಜಾರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಮುಂದಾಗಿದ್ದಾರೆ. ಕೃಷಿಕನ ಬೆಳೆಗೆ ಮಾರುಕಟ್ಟೆ ಯಲ್ಲಿ ಸೂಕ್ತ ಬೆಲೆ ದೊರೆಯದೆ ಮಧ್ಯವರ್ತಿಗಳ ಪಾಲಾ ಗುತ್ತಿರುವುದನ್ನು ತಪ್ಪಿಸಿ ರೈತರು ಸಾಲದ ಸುಳಿಗೆ ಸಿಲುಕ ದಂತೆ ಮಾಡುವ ಯತ್ನ ಇದಾಗಿದೆ. ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿ ಅವರು ನಾಳೆ ಮಧ್ಯಾಹ್ನ 12 ಗಂಟೆ 33 ನಿಮಿಷಕ್ಕೆ 2019-20ನೇ ಸಾಲಿನ ಮುಂಗಡ ಪತ್ರ ಮಂಡಿಸಲಿದ್ದಾರೆ….










