ಮೂರು ದಿನಗಳ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ಕ್ಕೆ ಇಂದು ಚಾಲನೆ
ಮೈಸೂರು

ಮೂರು ದಿನಗಳ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ಕ್ಕೆ ಇಂದು ಚಾಲನೆ

February 8, 2019

ಮೈಸೂರು: ಮೂರು ದಿನಗಳ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ (Star of Mysore Education Fair) ನಾಳೆ(ಫೆ.8) ಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆರಂಭವಾಗಲಿದೆ.

ನಾಳೆ ಬೆಳಿಗ್ಗೆ 11 ಗಂಟೆಗೆ ಮೇಳ ಉದ್ಘಾಟನೆ ಗೊಳ್ಳಲಿದೆ. ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯ, ಮೈಸೂರು ವಿಶ್ವವಿದ್ಯಾನಿಲಯ, ಸಿಬಿಎಸ್‍ಇ, ಐಸಿಎಸ್‍ಇ ಮತ್ತು ರಾಜ್ಯ ಖಾಸಗಿ ಶಾಲೆ ಗಳ ಆಡಳಿತ ಮಂಡಳಿಗಳ ಸಂಘದ (ಸಿಐಎಸ್‍ಪಿ ಎಂಎಎಂ) ಸಹಯೋಗದಲ್ಲಿ ಈ ಶೈಕ್ಷಣಿಕ ಮೇಳ ಆಯೋಜಿಸಲಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇ ಗೌಡ, ಶಾಸಕ ಎಸ್.ಎ.ರಾಮದಾಸ್, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ ಕುಮಾರ್, ಸಿಐಎಸ್‍ಪಿಎಂಎಎಂ ಮತ್ತು ಎಫ್‍ಕೆಸಿಸಿಐ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಹಾಗೂ `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಅವರು ಮೇಳದ ಉದ್ಘಾ ಟನಾ ಸಂದರ್ಭದಲ್ಲಿ ಉಪಸ್ಥಿತರಿರುವರು.
ಒಂದೇ ಸೂರಿನಡಿ ಟಾಪ್ ರ್ಯಾಂಕ್ ಗಳಿಸಿರುವ ಶಿಕ್ಷಣ ಸಂಸ್ಥೆಗಳೊಂದಿಗೆ ನೇರ ಸಂವಾದದ ಮೂಲಕ ಅಪ್ಲಿಕೇಷನ್ ಪ್ರಕ್ರಿಯೆ, ಕೋರ್ಸುಗಳು, ಕೋಚಿಂಗ್, ಹಣಕಾಸಿನ ನೆರವು, ಕ್ಯಾಂಪಸ್ ಸೌಲಭ್ಯಗಳು ಹಾಗೂ ಲಭ್ಯವಿರುವ ಇನ್ನಿತರೆ ವಿಪುಲ ಅವಕಾಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಮೇಳದಲ್ಲಿ ಪಡೆದುಕೊಳ್ಳ ಬಹುದು. ಮೈಸೂರು ನಗರ ಮತ್ತು ಸುತ್ತಮುತ್ತ ಇರುವ ಮಾದರಿ ಕಲಿಕಾ ಸಂಸ್ಥೆಗಳು, ಅಲ್ಲಿರುವ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಭರಪೂರ ಮಾಹಿತಿ ಒದಗಿಸುವ ಪ್ರಯತ್ನವೇ ಈ ಶೈಕ್ಷಣಿಕ ಮೇಳ.

ಪ್ರತಿ ನಿತ್ಯ ಬೆಳಿಗ್ಗೆ 10ರಿಂದ ರಾತ್ರಿ 9 ಗಂಟೆವರೆಗೆ ಮೂರು ದಿನಗಳ ಕಾಲ ನಡೆಯುವ ಮೇಳಕ್ಕೆ ಸಾರ್ವ ಜನಿಕರಿಗೆ ಉಚಿತ ಪ್ರವೇಶವಿದೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆ ಗಳ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದೊಂದು ಸದಾವಕಾಶ. ಶಿಕ್ಷಣದ ಅಗತ್ಯಗಳಿಗೆ ಇಲ್ಲಿ ಪರಿಹಾರ ಸಿಗಲಿದ್ದು, ತಮ್ಮ ಇಷ್ಟದ ಕೋರ್ಸ್ ಹಾಗೂ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ವು ಅತ್ಯುತ್ತಮ ವೇದಿಕೆಯಾಗಲಿದೆ.

ಮಹಾರಾಜ ಕಾಲೇಜು ಮೈದಾನದ 30,000 ಚದರಡಿ ವಿಶಾಲ ಪ್ರದೇಶದಲ್ಲಿ ಆಯೋಜಿಸಿರುವ ಮೆಗಾ ಮೇಳದಲ್ಲಿ ನೂರಾರು ಶಾಲಾ-ಕಾಲೇಜು ಗಳು ಮಳಿಗೆ ಹೊಂದಿದ್ದು, ಹವಾನಿಯಂತ್ರಿತ ಸೂರಿ ನಡಿ ಶಿಕ್ಷಣ ಸಂಸ್ಥೆಗಳ ವಸ್ತು ಪ್ರದರ್ಶನ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ನೃತ್ಯ, ಸಂಗೀತ, ಕ್ವಿಜ್, ಮೋನೋ ಆಕ್ಟಿಂಗ್, ಪೇಂಟಿಂಗ್ ಸೇರಿದಂತೆ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪ್ರತೀ ದಿನ ಲಕ್ಕಿ ಡ್ರಾ ಏರ್ಪಡಿಸಿ ಕಾರ್ಬನ್ ಸ್ಮಾರ್ಟ್‍ಫೋನ್, ಡೊಮೆಸ್ಟಿಕ್ ಏರ್ ಟಿಕೆಟ್‍ಗಳು, ಬೈಸಿಕಲ್, ಕ್ಯಾಮರಾ, ಸ್ಕೂಲ್ ಬ್ಯಾಗ್ ಗಳು ಹಾಗೂ ಹತ್ತು-ಹಲವು ಆಕರ್ಷಕ ಉಡು ಗೊರೆಗಳನ್ನು ಗೆಲ್ಲುವ ಅವಕಾಶವನ್ನು ಒದಗಿಸ ಲಾಗಿದೆ. ಸ್ಥಳದಲ್ಲಿ ವೈ-ಫೈ, ಫುಡ್‍ಕೋರ್ಟ್ ಸೇರಿದಂತೆ ಇನ್ನಿತರೆ ವ್ಯವಸ್ಥೆಯೂ ಇದೆ. ಕುಡಿಯುವ ನೀರು, ಶೌಚಾಲಯ, ಭದ್ರತಾ ವ್ಯವಸ್ಥೆ ಸೇರಿದಂತೆ ಸಕಲ ರೀತಿಯ ಸುರಕ್ಷತಾ ಕ್ರಮಗಳನ್ನು ಕಲ್ಪಿಸಲಾಗಿದೆ.

ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಭರಪೂರ ಮಾಹಿತಿ

ಮೈಸೂರು: ಸಾಂಸ್ಕøತಿಕ ನಗರಿಯಲ್ಲಿ ಇದೇ ಪ್ರಥಮ ಬಾರಿ ಪೋಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ಪ್ರತಿಷ್ಠಿತ ಹಾಗೂ ಹೆಸರಾಂತ ಶಿಕ್ಷಣ ಸಂಸ್ಥೆಗಳ ಕಾರ್ಯ ಚಟುವಟಿಕೆಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ವನ್ನು ಆಯೋಜಿಸಲಾಗಿದೆ.

ಒಂದೇ ಸೂರಿನಡಿ ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳ ಸ್ವರೂಪ, ಬೋಧನಾ ಕ್ರಮ, ಅಲ್ಲಿರುವ ಅತ್ಯಾಧುನಿಕ ಸೌಲಭ್ಯಗಳನ್ನು ತಿಳಿಸಲು ಈ ಮೇಳ ಉತ್ತಮ ವೇದಿಕೆಯಾಗಿದೆ.

ಪಾಂಡವಪುರ ತಾಲೂಕಿನ ಚಿನಕುರಳಿಯ ಎಸ್‍ಟಿಜಿ ಪಬ್ಲಿಕ್ ಶಾಲೆ, ಮೈಸೂರು ನಗರದ ಎಕ್ಸೆಲ್ ಪಬ್ಲಿಕ್ ಸ್ಕೂಲ್, ಆಸರೆ ಫೌಂಡೇಷನ್, ವಿದ್ಯಾ ವಿಕಾಸ ಶಿಕ್ಷಣ ಟ್ರಸ್ಟ್, ಎನ್‍ಪಿಎಸ್ ಇಂಟರ್ ನ್ಯಾಷನಲ್ ಶಾಲೆ, ಕೌಟಿಲ್ಯ ವಿದ್ಯಾಲಯ, ಹಿಂದೂ ಸ್ತಾನ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್, ಕ್ರೈಸ್ಟ್ ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್, ಸೈನ್ಸ್ ಅಂಡ್ ಆಟ್ರ್ಸ್, ಜಿಎಸ್‍ಎಸ್‍ಎಸ್ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಫಾರ್ ವುಮೆನ್, ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ, ಜೆಎಸ್‍ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರೀಸರ್ಚ್, ದಿ ಲರ್ನಿಂಗ್ ಕರ್ವ್ ಇಂಟರ್‍ನ್ಯಾಷನಲ್ ಸ್ಕೂಲ್, ಎಟಿಎಂಇ ಕಾಲೇಜ್ ಆಫ್ ಇಂಜಿನಿಯರಿಂಗ್, ಸೇಪಿಯೆಂಟ್ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‍ಮೆಂಟ್ ಹಾಗೂ ಕೊಡಗಿನ ಕೂರ್ಗ್ ಪಬ್ಲಿಕ್ ಸ್ಕೂಲ್(ಸಿಒಪಿಎಸ್) ಸೇರಿದಂತೆ ನೂರಾರು ಶಾಲಾ-ಕಾಲೇಜುಗಳು ಈ ಶೈಕ್ಷಣಿಕ ಮೇಳದಲ್ಲಿ ಪಾಲ್ಗೊಳ್ಳಲಿವೆ. ಈ ಶಿಕ್ಷಣ ಸಂಸ್ಥೆಗಳಿಗೆ ತಮ್ಮಲ್ಲಿನ ಶೈಕ್ಷಣಿಕ ಚಟುವಟಿಕೆಗಳ ಮಾದರಿ ಪ್ರದರ್ಶನಕ್ಕೆ ಸುಸಜ್ಜಿತ ಮಳಿಗೆಗಳನ್ನು ಒದಗಿಸಲಾಗಿದ್ದು, ಮೂಲ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ.

Translate »