ಮೈಸೂರು: ಮೈಸೂರು ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದ್ದ 1.5 ಲಕ್ಷ ರೂ. ಮೌಲ್ಯದ ಮದ್ಯವನ್ನು ಶುಕ್ರ ವಾರ ಅಬಕಾರಿ ಸಿಬ್ಬಂದಿ ನಾಶಪಡಿಸಿದರು. ನಜರ್‍ಬಾದ್‍ನಲ್ಲಿರುವ ಅಬಕಾರಿ ನಿರೀಕ್ಷಕರ ಕಚೇರಿ ಆವರಣದಲ್ಲಿ ಇಂದು ಬೆಳಿಗ್ಗೆ ಈ ಹಿಂದೆ ಮೈಸೂರು ಜಿಲ್ಲೆಯ 16 ಪ್ರಕರಣಗಳಲ್ಲಿ ವಶಕ್ಕೆ ಪಡೆಯಲಾಗಿದ್ದ 1.5 ಲಕ್ಷ ರೂ. ಮೌಲ್ಯದ, ವಿವಿಧ ಬ್ರ್ಯಾಂಡ್‍ನ 133 ಲೀ. ಮದ್ಯ, 62.250 ಲೀಟರ್ ಬಿಯರ್ ನಾಶಪಡಿಸಲಾಯಿತು. ಕಳೆದ ಚುನಾವಣೆ ವೇಳೆ ಮತದಾರರಿಗೆ ಹಂಚಲು ಕೊಂಡೊಯ್ಯುತ್ತಿದ್ದ ವೇಳೆ ಹಾಗೂ ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿ ಮದ್ಯ ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಂಡ ಮದ್ಯವನ್ನು ನಿಯಮಾನುಸಾರ ಇಂದು ನಾಶ ಮಾಡಲಾಯಿತು ಎಂದು ಅಬಕಾರಿ ಸಿಬ್ಬಂದಿ ತಿಳಿಸಿ ದ್ದಾರೆ. ಈ ಸಂದರ್ಭದಲ್ಲಿ ಅಬಕಾರಿ ಇಲಾಖೆಗೆ ಉಪ ಅಧೀಕ್ಷಕ ತಮ್ಮಣ್ಣ, ಅಬಕಾರಿ ಆರಕ್ಷಕ ನಿರೀಕ್ಷಕ ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.