ಮೈಸೂರು: ಬಗರ್‍ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕು. ಸಾಗುವಳಿ ಪತ್ರ ನೀಡಲು ವಿಧಿಸಿರುವ ಷರತ್ತುಗಳನ್ನು ತೆಗೆದು, ಸಾಗುವಳಿ ಅರ್ಜಿ ಸಲ್ಲಿಸಲು ಎಲ್ಲರಿಗೂ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ಆಶ್ರಯದಲ್ಲಿ ಮೈಸೂರಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕಳೆದ 60 ವರ್ಷಗಳಿಂದ ಗೋಮಾಳ, ಗುಂಡು ತೋಪು, ಅರಣ್ಯ ಭೂಮಿಗಳಲ್ಲಿ ಉಳುಮೆ ಮಾಡುತ್ತಾ, ಜೀವನ ನಿರ್ವಹಿ ಸುತ್ತಾ ಬಂದಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡದೆ ವಂಚಿಸಲಾಗಿದೆ. ಇದರಿಂದ ಸಾಗುವಳಿ ಪತ್ರ ಇಲ್ಲದ ಕಾರಣ ಸರ್ಕಾರಿ ಸವಲತ್ತುಗಳು, ಸಾಲ ಸೌಲಭ್ಯ, ಬರ ಪರಿಹಾರ ಇತ್ಯಾದಿ ಸೌಲಭ್ಯಗಳಿಂದ ಸಾಗುವಳಿ ರೈತರು ವಂಚಿತ ರಾಗಿದ್ದಾರೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು.
ಸಾಗುವಳಿ ಪತ್ರ ನೀಡುವ ಸರ್ಕಾರ ವಿಧಿಸಿರುವ ಷರತ್ತುಗಳಿಂ ದಾಗಿ, ತುಂಡು ಭೂಮಿಯನ್ನೇ ನಂಬಿ ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ನೂರಾರು ರೈತರಿಗೆ ಇದರಿಂದ ಅನ್ಯಾಯ ವಾಗುತ್ತಿದೆ. ಆದ್ದರಿಂದ ಸರ್ಕಾರ ಕೂಡಲೇ ಸಾಗುವಳಿ ಪತ್ರ ನೀಡಲು ವಿಧಿಸಿರುವ ಷರತ್ತುಗಳನ್ನು ರದ್ದುಪಡಿಸಬೇಕು. ಎಲ್ಲಾ ರೈತರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿ, ಅರ್ಜಿ ಸಲ್ಲಿಸಿದವರೆಲ್ಲರಿಗೂ ಸಾಗುವಳಿ ಪತ್ರ ನೀಡಬೇಕು. ಸಾಗುವಳಿ ಪತ್ರ ಸಲ್ಲಿಸುವಾಗ ಒದಗಿಸಬೇಕಾದ ದಾಖಲೆಗಳನ್ನು ಅರ್ಜಿ ಸಲ್ಲಿಸಿದ ರೈತರಿಗೆ ತಕ್ಷಣವೇ ಒದಗಿಸಬೇಕು. ಅರ್ಜಿ ಸಲ್ಲಿಸಿದ ಎಲ್ಲರಿಗೂ ತಕ್ಷಣ ಪಡಿತರ ಚೀಟಿ ವಿತರಿಸ ಬೇಕು. ಕೂಡಲೇ ರೈತರ ಸಭೆ ಕರೆದು ಈ ವಿಚಾರ ಕುರಿತು ಚರ್ಚಿಸಬೇಕು ಎಂದು ಆಗ್ರಹಿ ಸಿದರು. ಪ್ರತಿಭಟನೆಯಲ್ಲಿ ರೈತಮುಖಂಡರಾದ ಚಿಕ್ಕಣ್ಣೇಗೌಡ ಗೌರಿಪುರ, ಕೆ.ಬಸವರಾಜು, ಜವರೇಗೌಡ ಮಾರ್ಬಳ್ಳಿಹುಂಡಿ, ದೂರ ಕೆಂಪಣ್ಣ, ಜಗದೀಶ್ ಸೂರ್ಯ, ಶಂಕರ್ ಅಲ ಗಯ್ಯನ ಹುಂಡಿ, ರಾಮಯ್ಯ ದೂರ, ಮಾಲತೇಶ್ ಉದ್ಬೂರು ಇನ್ನಿತರರು ಭಾಗವಹಿಸಿದ್ದರು.