ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂತೆ ಸೊಗಸು
ಮೈಸೂರು

ಮಹಾರಾಣಿ ಕಾಲೇಜಿನಲ್ಲಿ ವಿದ್ಯಾರ್ಥಿ ಸಂತೆ ಸೊಗಸು

February 9, 2019

ಮೈಸೂರು: ಅಲ್ಲಿ ವಿದ್ಯಾರ್ಥಿನಿಯರೆಲ್ಲರೂ ಬಾಣಸಿಗರಾಗಿದ್ದರು. ಪುಸ್ತಕ ಹಿಡಿಯಬೇಕಾದ ಕೈಗಳು ಸೌಟು ಹಿಡಿದು ರುಚಿಕರವಾದ ಅಡುಗೆ ತಯಾರಿಸಿ, ಹಸಿದವರ ನಾಲಿಗೆ ತಣಿಸಿದವು! ಮೈಸೂರು ಮಹಾರಾಣಿ ಕಲಾ ಕಾಲೇಜಿನ ಆವರಣದಲ್ಲಿ ಶುಕ್ರವಾರ ಶೈಕ್ಷ ಣಿಕ ಚಟುವಟಿಕೆಗೆ ವಿರಾಮ ಹಾಕಿ ಸಂತೆ ಆಯೋಜಿಸಲಾಗಿತ್ತು. ವಿದ್ಯಾರ್ಥಿನಿಯರೇ ತಯಾರಿಸಿದ ಸಸ್ಯಾಹಾರ, ಮಾಂಸಾಹಾರ, ಸಿಹಿ ತಿನಿಸು, ಪಾನೀಯ ಮತ್ತಿತರ ತಿನಿಸು ಗಳನ್ನು ಮಾರಾಟ ಮಾಡಿದರು. ಕಾಲೇಜು ಆವರಣದಲ್ಲಿ 20 ಮಳಿಗೆಗಳನ್ನು ತೆರೆಯಲಾಗಿತ್ತು.

ವಿದ್ಯಾರ್ಥಿನಿಯರೇ ಮಾಡಿದ್ದ ಬಿರಿಯಾನಿ ಸೇವಿಸಲು ವಿದ್ಯಾರ್ಥಿನಿಯರು, ಉಪನ್ಯಾಸಕರು ಮುಗಿಬಿದ್ದರು. ಪಾನಿ ಪುರಿ, ಗೋಬಿಮಂಚೂರಿ, ಚುರುಮುರಿ, ಬೇಲ್ ಪುರಿ, ವಡೆ, ಬೋಂಡ ಇನ್ನಿತರ ತಿನಿಸು ಗಳಿಗೂ ಬೇಡಿಕೆ ಇತ್ತು. ಕೆಲ ವಿದ್ಯಾರ್ಥಿನಿ ಯರು ಚಾಕೊಲೇಟ್, ಎಳನೀರು, ಬೇಕರಿ ತಿನಿಸನ್ನು ಮಾರಾಟ ಮಾಡಿ ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದರು. ಸಂತೆಯಲ್ಲಿ ಮೆಹಂದಿ ಬಿಡಿಸುವುದು, ಮನೋರಂಜನೆ ಗಾಗಿ ಕೆಲವು ಕ್ರೀಡಾ ಚಟುವಟಿಕೆಯನ್ನು ನಡೆಸಲಾಯಿತು. ವಿದ್ಯಾರ್ಥಿನಿಯರ ಸಂತೆ ಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ.ಹೆಚ್.ಪ್ರಕಾಶ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪಠ್ಯೇ ತರ ಚಟುವಟಿಕೆಯ ಅಂಗವಾಗಿ ಪ್ರತಿ ವರ್ಷ ಕಾಲೇಜು ಆವರಣದಲ್ಲಿ ವಿದ್ಯಾರ್ಥಿ ನಿಯರೇ ಸಂತೆ ನಡೆಸುತ್ತಿದ್ದಾರೆ. ಬಗೆ ಬಗೆಯ ಅಡುಗೆ ತಯಾರಿಸಿ, ಹೋಟೆಲ್ ಮಾದರಿಯಲ್ಲಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸ್ವಉದ್ಯೋಗಕ್ಕೂ ಇಂತಹ ಚಟುವಟಿಕೆ ಗಳು ಪ್ರೇರಣೆ ನೀಡುತ್ತವೆ ಎಂದು ಅವರು ತಿಳಿಸಿದರು.

ಬಲವಂತವಾಗಿ ತಿನ್ನಿಸಿದರು: ಹಲವು ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದ್ದ ತಿನಿಸನ್ನು ಬೇಗನೆ ಮಾರಾಟ ಮಾಡುವು ದಕ್ಕೆ ವಿದ್ಯಾರ್ಥಿನಿಯರು ಪರದಾಡಿದರು. ಕೆಲವು ಉಪನ್ಯಾಸಕರು ಒಂದೆರಡು ಮಳಿಗೆ ಗಳಿಲ್ಲಿ ಸಿಗುತ್ತಿದ್ದ ತಿನಿಸನ್ನು ಸವಿದು ಮುಂದೆ ಹೋಗುತ್ತಿದ್ದರು. ಇದನ್ನು ಗಮನಿಸಿದ ವಿದ್ಯಾರ್ಥಿನಿಯರು ತಮ್ಮ ಮಳಿಗೆ ಯಲ್ಲಿಯೂ ತಿನಿಸಿನ ರುಚಿ ಸವಿಯುವಂತೆ ಉಪನ್ಯಾಸಕರಿಗೆ ದುಂಬಾಲು ಬಿದ್ದರು. ವಿದ್ಯಾರ್ಥಿನಿಯರ ಪೋಷಕರೂ ರುಚಿ ಕರ ತಿನಿಸು ಸವಿದು ಖುಷಿಪಟ್ಟರು.

Translate »