ಮೈಸೂರು: ಅಭಿಮಾನಿಗಳ ಆಶೀರ್ವಾದದಿಂದ ‘ನಟಸಾರ್ವಭೌಮ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳ ಆಶೀರ್ವಾದ ಇದ್ದಾಗ ಸಿನಿಮಾ ಯಶಸ್ವಿಯಾಗುತ್ತದೆ ಎಂದು ನಟ ಪುನೀತ್ ರಾಜ್‍ಕುಮಾರ್ ಹೇಳಿದರು. ನಗರದ ಸಂಗಮ್ ಚಿತ್ರಮಂದಿರಕ್ಕೆ ಶನಿವಾರ ಆಗಮಿಸಿದ್ದ ಅವರು, ನಟಸಾರ್ವ ಭೌಮ ಸದಭಿರುಚಿ ಚಿತ್ರ. ಆದ್ದರಿಂದ ಜನ ಮೆಚ್ಚಿದ್ದಾರೆ. ಅಭಿಮಾನಿ ಗಳೇ ನಮ್ಮನೇ ದೇವ್ರು ಎಂದರು. ಕೆಲಹೊತ್ತು ಸಿನಿಮಾ ವೀಕ್ಷಿಸಿ, ಬಳಿಕ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿ ನಿರ್ಗಮಿಸಿದರು. ನೂಕು ನುಗ್ಗಲು: ಸಂಗಮ್ ಥಿಯೇಟರ್‍ಗೆ ಅಪ್ಪು ಆಗಮನದ ಸುದ್ದಿ ತಿಳಿಯು ತ್ತಿದ್ದಂತೆ ಅಭಿಮಾನಿಗಳು ದೌಡಾಯಿಸಿ…
ಕಾಯಕ ಸಮುದಾಯಕ್ಕಾಗಿ ಕೌಶಲ ತರಬೇತಿ ಕೇಂದ್ರ ತೆರೆಯಿರಿ
February 10, 2019ಮೈಸೂರು: ರಾಜ್ಯದ ಕಾಯಕ ಸಮುದಾಯಗಳ ಕುಲ ಕಸುಬು ನೆಲಕಚ್ಚಿದ್ದು, ಸರ್ಕಾರ ಕೂಡಲೇ ಪ್ರತೀ ತಾಲೂಕಿನಲ್ಲಿ ಕೌಶಲ ತರಬೇತಿ ಕೇಂದ್ರ ಗಳನ್ನು ತೆರೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟ ಸಿದ್ದಶೆಟ್ಟಿ ಒತ್ತಾಯಿಸಿದರು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರುಗಳ ಸಂಸ್ಥೆ ಸಭಾಂಗಣ ದಲ್ಲಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟ ಶನಿವಾರÀ ಏರ್ಪಡಿಸಿದ್ದ ಡಿ. ದೇವರಾಜ ಅರಸು ಸಂಸ್ಮರಣೆ ಮತ್ತು ವಿಚಾರ ಸಂಕಿ ರಣದಲ್ಲಿ ಮಾತನಾಡಿದ ಅವರು, ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ನಿರ್ಗತಿಕರಿಗೆ ಸರ್ಕಾರ ತಕ್ಷಣ ಸೂರು ಕಲ್ಪಿಸಿಕೊಡ…
ಕಾನೂನು ಸಮಾಜ ಸೇವಾಮುಖಿಯಾಗಿರಬೇಕು
February 10, 2019ಮೈಸೂರು: ಕಾನೂನು ಯಾವಾ ಗಲೂ ಸಮಾಜ ಸೇವಾಮುಖಿಯಾಗಿರಬೇಕು. ಸಮಾಜ ದಿಂದ ಪಡೆದದ್ದನ್ನು ನಾವು ಸಮಾಜಕ್ಕೆ ಹಿಂದಿರುಗಿಸ ಬೇಕಾದ ಅಗತ್ಯತೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಅಶೋಕ್ ಜಿ.ನಿಜಗಣ್ಣನವರ್ ಇಂದಿಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ. ಮೈಸೂರಿನ ಕುವೆಂಪುನಗರದ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲಿ ಚೆನ್ನೈನ ಸುರಾನ ಮತ್ತು ಸುರಾನ ಅಂತಾ ರಾಷ್ಟ್ರೀಯ ಕಾನೂನು ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ 17ನೇ ರಾಷ್ಟ್ರೀಯ ಅಣಕು ನ್ಯಾಯಾ ಲಯ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಇಂದು ಕಾನೂನು ಅಧ್ಯಯನಗಳು ಹೈಟೆಕ್ ಆಗುತ್ತಿವೆ. ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುವುದರೊಂದಿಗೆ…
ಆಪರೇಷನ್ ಕಮಲ ಖಂಡಿಸಿ ಮೈಸೂರಲ್ಲಿ ಕಾಂಗ್ರೆಸ್ ಪ್ರತಿಭಟನೆ
February 10, 2019ಮೈಸೂರು: ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಮುರಿಯಲು ಬಿಜೆಪಿ ನಾಯಕರು ಆಪರೇಷನ್ ಕಮಲಕ್ಕೆ ಕೈ ಹಾಕುವ ಮೂಲಕ ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋ ಪಿಸಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಗಾಂಧಿಚೌಕದ ಬಳಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಬಿಜೆಪಿ ಪಕ್ಷಕ್ಕೆ ಬಹುಮತ ಇಲ್ಲವಾದರೂ ಸರ್ಕಾರ ರಚನೆಯ ಕನಸು ಕಾಣುತ್ತಿದೆ. ವಾಮ ಮಾರ್ಗದಲ್ಲಿ ಮೈತ್ರಿ…
ಮಳೆ ಆಶ್ರಯದ ದೇಸಿ ಭತ್ತವೂ ಸಿರಿಧಾನ್ಯವಾಗಿ ಮಾರುಕಟ್ಟೆ ಪಡೆಯಲಿ
February 10, 2019ಮೈಸೂರು: ಮಳೆ ಆಶ್ರಯದಲ್ಲಿ ಬೆಳೆಯುವ ದೇಸಿ ಭತ್ತದ ತಳಿಗಳನ್ನು ಸಿರಿಧಾನ್ಯವಾಗಿ ಘೋಷಿಸಿ ಮಾರು ಕಟ್ಟೆ ಕಲ್ಪಿಸುವ(ಬ್ರಾಂಡ್ ಕ್ರಿಯೇಟ್) ಅವಶ್ಯ ಕತೆಯಿದೆ ಎಂದು ಕೃಷಿ ಉತ್ಪನ್ನಗಳ ಬೆಲೆ ನಿಗದಿ ಆಯೋಗದ ಅಧ್ಯಕ್ಷ ಡಾ.ಟಿ.ಎನ್. ಪ್ರಕಾಶ್ ಕಮ್ಮರಡಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕಾಡಾ ಕಚೇರಿ ಅವರಣ ದಲ್ಲಿರುವ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಉತ್ಪನ್ನಗಳ ಬೆಲೆ ನಿಗದಿ ಆಯೋಗ, ಕೃಷಿ ಇಲಾಖೆ, ಜಿ¯್ಲÁ ಕೃಷಿ ತರಬೇತಿ ಕೇಂದ್ರ, ಸಹಜ ಸಮೃದ್ಧ ಸಂಸ್ಥೆಯ ಸಂಯುಕ್ತಾ ಶ್ರಯದಲ್ಲಿ ಆಯೋಜಿಸಿರುವ ಎರಡು ದಿನ ಗಳ…
ಚುನಾವಣಾ ಆಯೋಗಕ್ಕೆ ಭಾರತೀಯ ಹೊಸ ಕಾಂಗ್ರೆಸ್ ಪಕ್ಷ ಸಲಹೆ: `ಆಪರೇಷನ್ ಪಕ್ಷ’ದಲ್ಲಿ ಭಾಗಿಯಾದವರಿಗೆ 25 ವರ್ಷ ಚುನಾವಣೆಯಿಂದ ಹೊರಗಿಡಿ
February 10, 2019ಮೈಸೂರು: ಮಂತ್ರಿ, ಶಾಸಕರನ್ನು ಹಣ ಕೊಟ್ಟು ಖರೀದಿಸುವ ಆಪರೇಷನ್ ಕಮಲ, ಆಪರೇಷನ್ ಜೆಡಿಎಸ್, ಆಪರೇ ಷನ್ ಕಾಂಗ್ರೆಸ್ ಹೀಗೆ ಅಕ್ರಮದಲ್ಲಿ ಭಾಗಿಯಾದ ಶಾಸ ಕರು, ಮಂತ್ರಿಗಳನ್ನು 25 ವರ್ಷಗಳ ಕಾಲ ಚುನಾವಣೆ ಗಳಲ್ಲಿ ನಿಲ್ಲದಂತಹ ಕಠಿಣ ನಿಯಮವನ್ನು ಚುನಾವಣಾ ಆಯೋಗ ರೂಪಿಸಿದರೆ ಮಾತ್ರ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಭಾರತೀಯ ಹೊಸ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದರು. ಪಕ್ಷಗಳಲ್ಲಿನ ಆಪರೇಷನ್‍ಗಳಿಗೆ ಚುನಾವಣಾ ಆಯೋಗದ ನೀತಿಯಲ್ಲಿರುವ ಲೋಪಗಳೇ ಕಾರಣವಾಗಿದ್ದು, ಆಯೋಗ ಕೂಡಲೇ…
ವೀರಶೈವರು ಒಗ್ಗೂಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ದೇವನೂರು ಮಹಾಂತಸ್ವಾಮಿಗಳು
February 10, 2019ನಂಜನಗೂಡು: ನಂಜನಗೂಡು ತಾಲೂಕಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವೀರಶೈವರಿದ್ದರೂ ಸಂಘಟನೆಯಲ್ಲಿ ಕೊರತೆ ಇದೆ. ಹಾಗಾಗಿ ತಾವೆಲ್ಲರೂ ಒಗ್ಗೂಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ದೇವ ನೂರಿನ ಮಠಾಧ್ಯಕ್ಷರಾದ ಶ್ರೀ ಮಹಾಂತ ಸ್ವಾಮಿಗಳು ಹೇಳಿದರು. ನೂತನವಾಗಿ ಆಯ್ಕೆಯಾಗಿರುವ ವೀರ ಶೈವ ಮಹಾಸಭಾದ ತಾಲೂಕು ಅಧ್ಯಕ್ಷರು ಹಾಗೂ ತಂಡದವರು ಮಠದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಸ್ವಾಮೀಜಿ ಮಾತನಾಡಿದರು. ಮತ್ತೊಬ್ಬರಿಗೆ ತೊಂದರೆ ಕೊಡುವುದು ಬೇಡ. ನಮ್ಮ ಸಮಸ್ಯೆಗಳನ್ನು ನಾವೇ ಪರಿ ಹರಿಸಿಕೊಳ್ಳಬೇಕು. ಒಂದೇ ಸಮಾಜ ದವರಾದ ನಾವು ಒಗ್ಗಟ್ಟಿನಿಂದ…
ನವಜಾತ ಶಿಶು ಸಾವು: ವೈದ್ಯೆ ವಿರುದ್ಧ ದೂರು
February 10, 2019ಪಿರಿಯಾಪಟ್ಟಣ: ವೈದ್ಯರ ನಿರ್ಲಕ್ಷ್ಯದಿಂದಲೇ ನವ ಜಾತ ಶಿಶು ಸಾವನ್ನಪ್ಪಿದೆ ಎಂದು ಆರೋಪಿಸಿ ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಲಾಗಿದೆ. ಪಟ್ಟಣದ ಕಾವಟಗೇರಿ ಬೀದಿಯ ನಿವಾಸಿ ಯತೀಶ್ ಎಂಬುವವರ ಪತ್ನಿ ಕಾವ್ಯ ಕಳೆದ ಗುರುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಶನಿವಾರ ಬೆಳಿಗ್ಗೆ ವೈದ್ಯರು ಮಗುವನ್ನು ಪರೀಕ್ಷಿಸಿ ಮಗುವಿಗೆ ಜಾಂಡಿಸ್ ಇದೆ ಎಂದು ಹೇಳಿ, ಮೈಸೂರಿನ ಚಲುವಾಂಬ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ನಂತರ ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಮಾರ್ಗಮಧ್ಯೆ ಬಿಳಿಕೆರೆ ಬಳಿ…
ಮರಕ್ಕೆ ನೇಣು ಬಿಗಿದುಕೊಂಡು ವಿವಾಹಿತ ಪ್ರೇಮಿಗಳ ಆತ್ಮಹತ್ಯೆ
February 10, 2019ಬಿಳಿಕೆರೆ ಹೋಬಳಿ ಚೆಲ್ಲಹಳ್ಳಿಯಲ್ಲಿ ಘಟನೆ ಮೈಸೂರು: ಜೀವನದಲ್ಲಿ ಜಿಗುಪ್ಸೆಗೊಂಡ ವಿವಾಹಿತ ಪ್ರೇಮಿ ಗಳಿಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಪ್ರತ್ಯೇಕವಾಗಿ ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಬಿಳಿಕೆರೆ ಹೋಬಳಿ ಚೆಲ್ಲಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಗ್ರಾಮದ ಲೇಟ್ ಕೋಡಯ್ಯ ಅವರ ಮಗ ಶಾಂತರಾಜು(35) ಹಾಗೂ ರಾಜು ಅವರ ಪತ್ನಿ ಶ್ರೀಮತಿ ಶಾಂತ (33) ಆತ್ಮಹತ್ಯೆಗೆ ಶರಣಾದವರು. ಒಂದೇ ಗ್ರಾಮದ ನೆರೆಹೊರೆ ನಿವಾಸಿಗಳು ಹಾಗೂ ದೂರದ ಸಂಬಂಧಿಕರೂ ಆದ ಇಬ್ಬರಿಗೂ ಮದುವೆ ಯಾಗಿ ಇಬ್ಬಿಬ್ಬರು ಮಕ್ಕಳಿದ್ದಾರೆ. ಕಳೆದ 2…
ದೋಸ್ತಿ ಬಟೆಜ್‍ನಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ಮಠಮಾನ್ಯಗಳಿಗೆ ಭರಪೂರ ಕೊಡುಗೆ
February 9, 2019ಮದ್ಯ ವ್ಯಸನಿಗಳು, ನೋಂದಣಿ ಮೇಲೆ ಅಧಿಕ ಶುಲ್ಕ ಹಾಲು ಉತ್ಪಾದಕರ ಪ್ರೋತ್ಸಾಹದನ 6 ರೂ.ಗೆ ಹೆಚ್ಚಳ ಶಾಲಾ, ಅಂಗನವಾಡಿ ಮಕ್ಕಳಿಗೆ ಉಚಿತ ಹಾಲು ಸಣ್ಣ, ಅತೀ ಸಣ್ಣ ರೈತರಿಗೆ ಒಲಿಯಲಿದ್ದಾಳೆ ‘ಗೃಹಲಕ್ಷ್ಮಿ’ ಕೇರಳ ಮಾದರಿ `ಸಾಲ ಪರಿಹಾರ ಆಯೋಗ’ ರಚನೆ ನದಿಗಳಿಂದ ಹಳ್ಳಿಗಳಿಗೆ ಕುಡಿಯುವ ನೀರಿನ ‘ಜಲಧಾರೆ’ ವರ್ಗಾವಣೆಗೆ ಕೌನ್ಸಿಲಿಂಗ್ ಪದ್ಧತಿ, ಇ ಆಫೀಸ್ ವ್ಯವಸ್ಥೆ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳ ಆರಂಭ ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಹಣಕಾಸು ಇಲಾಖೆ ಹೊಣೆ ಹೊತ್ತಿರುವ…










