ಮೈಸೂರಲ್ಲಿ ಅಪ್ಪು-ಅಭಿಮಾನಿ ‘ಸಂಗಮ’
ಮೈಸೂರು

ಮೈಸೂರಲ್ಲಿ ಅಪ್ಪು-ಅಭಿಮಾನಿ ‘ಸಂಗಮ’

February 10, 2019

ಮೈಸೂರು: ಅಭಿಮಾನಿಗಳ ಆಶೀರ್ವಾದದಿಂದ ‘ನಟಸಾರ್ವಭೌಮ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳ ಆಶೀರ್ವಾದ ಇದ್ದಾಗ ಸಿನಿಮಾ ಯಶಸ್ವಿಯಾಗುತ್ತದೆ ಎಂದು ನಟ ಪುನೀತ್ ರಾಜ್‍ಕುಮಾರ್ ಹೇಳಿದರು. ನಗರದ ಸಂಗಮ್ ಚಿತ್ರಮಂದಿರಕ್ಕೆ ಶನಿವಾರ ಆಗಮಿಸಿದ್ದ ಅವರು, ನಟಸಾರ್ವ ಭೌಮ ಸದಭಿರುಚಿ ಚಿತ್ರ. ಆದ್ದರಿಂದ ಜನ ಮೆಚ್ಚಿದ್ದಾರೆ. ಅಭಿಮಾನಿ ಗಳೇ ನಮ್ಮನೇ ದೇವ್ರು ಎಂದರು. ಕೆಲಹೊತ್ತು ಸಿನಿಮಾ ವೀಕ್ಷಿಸಿ, ಬಳಿಕ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿ ನಿರ್ಗಮಿಸಿದರು.

ನೂಕು ನುಗ್ಗಲು: ಸಂಗಮ್ ಥಿಯೇಟರ್‍ಗೆ ಅಪ್ಪು ಆಗಮನದ ಸುದ್ದಿ ತಿಳಿಯು ತ್ತಿದ್ದಂತೆ ಅಭಿಮಾನಿಗಳು ದೌಡಾಯಿಸಿ ನೆಚ್ಚಿನ ನಟನನ್ನು ನೋಡಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಈ ವೇಳೆ ನೂಕು ನುಗ್ಗಲು ಉಂಟಾಗಿ, ಕೆಲವರು ಚಿತ್ರಮಂದಿರದ ಗಾಜು ಪುಡಿ ಮಾಡಿದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೆÇಲೀಸರು ಹರಸಾಹಸ ಪಟ್ಟರೂ ಫಲನೀಡದೇ ಇದ್ದಾಗ ಲಘು ಲಾಠಿ ಪ್ರಹಾರ ನಡೆಸಲು ಮುಂದಾದರು. ಆಗ ಪುನೀತ್ ರಾಜ್‍ಕುಮಾರ್ ಮಧ್ಯಪ್ರವೇಶಿಸಿ, ಶಾಂತ ರೀತಿಯಲ್ಲಿ ವರ್ತಿಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿದರು.

Translate »