ಕಾಯಕ ಸಮುದಾಯಕ್ಕಾಗಿ ಕೌಶಲ ತರಬೇತಿ ಕೇಂದ್ರ ತೆರೆಯಿರಿ
ಮೈಸೂರು

ಕಾಯಕ ಸಮುದಾಯಕ್ಕಾಗಿ ಕೌಶಲ ತರಬೇತಿ ಕೇಂದ್ರ ತೆರೆಯಿರಿ

February 10, 2019

ಮೈಸೂರು: ರಾಜ್ಯದ ಕಾಯಕ ಸಮುದಾಯಗಳ ಕುಲ ಕಸುಬು ನೆಲಕಚ್ಚಿದ್ದು, ಸರ್ಕಾರ ಕೂಡಲೇ ಪ್ರತೀ ತಾಲೂಕಿನಲ್ಲಿ ಕೌಶಲ ತರಬೇತಿ ಕೇಂದ್ರ ಗಳನ್ನು ತೆರೆಯಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟ ಸಿದ್ದಶೆಟ್ಟಿ ಒತ್ತಾಯಿಸಿದರು.
ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರುಗಳ ಸಂಸ್ಥೆ ಸಭಾಂಗಣ ದಲ್ಲಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟ ಶನಿವಾರÀ ಏರ್ಪಡಿಸಿದ್ದ ಡಿ. ದೇವರಾಜ ಅರಸು ಸಂಸ್ಮರಣೆ ಮತ್ತು ವಿಚಾರ ಸಂಕಿ ರಣದಲ್ಲಿ ಮಾತನಾಡಿದ ಅವರು, ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ನಿರ್ಗತಿಕರಿಗೆ ಸರ್ಕಾರ ತಕ್ಷಣ ಸೂರು ಕಲ್ಪಿಸಿಕೊಡ ಬೇಕು. ಇಲ್ಲದೆ ಹೋದಲ್ಲಿ ಸರ್ಕಾರಿ ಕಚೇರಿಗಳಿಗೆ ಬೀಗ ಜಡಿದು ಹೋರಾಟ ನಡೆಸಬೇಕಾಗು ತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸರ್ಕಾರಿ ಜಮೀನುಗಳು ಬಿಲ್ಡರ್ಸ್‍ಗಳ ಪಾಲಾಗುತ್ತಿವೆ. ಉದ್ಯಮಿಗಳು ದೊಡ್ಡ ಅಪಾರ್ಟ್‍ಮೆಂಟ್ ಕಟ್ಟುತ್ತಿದ್ದಾರೆ. ಕೇಂದ್ರ ಸರ್ಕಾರ ಮೇಲ್ವರ್ಗದವರಿಗೆ ಶೇ.10 ರಷ್ಟು ಮೀಸಲಾತಿ ನೀಡಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು. ರಾಜ್ಯ ಸರ್ಕಾರ ಜಾತಿ ಗಣತಿಯನ್ನು ಬಿಡುಗಡೆ ಮಾಡಿ ಜಾತಿ ವಾರು ಅಭಿವೃದ್ಧಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಹೇಳಿದರು.

ಪೆÇ್ರ.ಪಿ.ವಿ.ನಂಜರಾಜೇ ಅರಸು ಮಾತ ನಾಡಿ, ದೇವರಾಜ ಅರಸು ಮುಖ್ಯಮಂತ್ರಿ ಯಾಗಿದ್ದಾಗ ರಾಜಕಾರಣಿಗಳು ಪರಸ್ಪರ ಸ್ನೇಹ, ವಿಶ್ವಾಸದಿಂದ ಇರುತ್ತಿದ್ದರು. ಇಂದಿನ ರಾಜಕಾರಣಿಗಳು ಬೀದಿಯಲ್ಲಿ ಕಚ್ಚಾಡುತ್ತಿದ್ದಾರೆ. ನೀಚ ಮಟ್ಟಕ್ಕೆ ಇಳಿ ಯುತ್ತಿದ್ದಾರೆ. ವಂಚಕ ಪ್ರವೃತ್ತಿ ಹೆಚ್ಚಾ ಗಿದೆ. ಇಂದಿನ ರಾಜಕಾರಣಿಗಳಲ್ಲಿ ಕಿಂಚಿ ತ್ತಾದರೂ ಸಭ್ಯತೆ ಇದೆಯೇ? ಎಂದು ಬೇಸರದಿಂದಲೇ ಪ್ರಶ್ನಿಸಿದರು.

ಸಿದ್ಧಾಂತ ಮತ್ತು ತತ್ವಕ್ಕೆ ಬದ್ಧರಾಗಿ ಅರಸು ರಾಜೀನಾಮೆ ನೀಡಿದ್ದರು. ಈಗಿನ ರಾಜ ಕಾರಣಿಗಳಲ್ಲಿ ಸಿದ್ಧಾಂತವೂ ಇಲ್ಲ, ಬದ್ಧತೆಯೂ ಇಲ್ಲ. ಸಿಎಂ ಸ್ಥಾನಕ್ಕಾಗಿ ಕಚ್ಚಾಡುತ್ತಿರುವು ದನ್ನು ಕಳೆದ 7 ತಿಂಗಳಿಂದ ನೋಡುತ್ತಲೇ ಇದ್ದೇವೆ. ಅಧಿಕಾರ ಬೇಕಾಗಿರುವುದು ಜನರ ಸೇವೆಗಾಗಿಯೇ ಹೊರತು ತಮ್ಮ ಅಭಿವೃದ್ಧಿ ಗಲ್ಲ ಎಂಬುದನ್ನು ರಾಜಕಾರಣಿಗಳು ಅರಿಯಬೇಕು ಎಂದು ಕಿಡಿಕಾರಿದರು.

ನಿವೃತ್ತ ಪ್ರಾಧ್ಯಾಪಕ ಪೆÇ್ರ. ಬಿ.ಪಿ. ಮಹೇಶ್ ಚಂದ್ರಗುರು ಮಾತನಾಡಿ, ಮನುಕುಲದ ಒಳಿತಿಗಾಗಿ ತನ್ನ ಜೀವ ಮಾನವನ್ನೇ ಮುಡಿಪಾಗಿಟ್ಟ ಡಿ.ದೇವ ರಾಜ ಅರಸು ಅವರಂತಹ ಮತ್ತೊಬ್ಬ ಮುಖ್ಯಮಂತ್ರಿಯನ್ನು ಕಾಣಲು ಸಾಧ್ಯ ವಿಲ್ಲ. ಕರ್ನಾಟಕ ಇರುವವರೆಗೂ ದೇವ ರಾಜ ಅರಸು ಅವರ ಹೆಸರು ಶಾಶ್ವತ ಎಂದು ಬಣ್ಣಿಸಿದರು.

ಇದೇ ವೇಳೆ ಜ್ಯೋತಿ ಬಾಫುಲೆ ನ್ಯಾಷ ನಲ್ ಫೆಲೋಷಿಪ್ ಪಡೆದ ವಿಧಾನ ಪರಿ ಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಡಿ.ದೇವರಾಜ ಅರಸು ಮೊಮ್ಮಗ ಸೂರಜ್ ಹೆಗಡೆ, ಪೆÇ್ರ. ದಯಾನಂದ ಮಾನೆ, ಸಮಾಜ ಕಲ್ಯಾಣ ಇಲಾಖೆ ಸಹಾ ಯಕ ನಿರ್ದೇಶಕ ಗುರುಶಾಂತಪ್ಪ, ಕಾಯಕ ಸಮಾಜಗಳ ಒಕ್ಕೂಟದ ಜಿಲ್ಲಾ ಕಾರ್ಯ ದರ್ಶಿ ಬೋರಪ್ಪಶೆಟ್ಟಿ, ಲಕ್ಷ್ಮಿಕಾಂತ್, ಎಸ್.ನಟರಾಜು, ರೇವಣ್ಣಸಿದ್ದಪ್ಪ, ಪ್ರಭಾ ಕರ್, ಕುಮಾರಶೆಟ್ಟಿ, ಡಾ.ಕೆ.ವಿಜಯ ಕುಮಾರ್, ಆರ್.ರಮೇಶ್, ಮಂಜುಳ, ಸುಕನ್ಯ ಮತ್ತಿತರರು ಉಪಸ್ಥಿತರಿದ್ದರು.

Translate »