ಎಲ್ಲರನ್ನೂ ಒಂದುಗೂಡಿಸುವುದೇ ಮಾನವ ಧರ್ಮ
ಮೈಸೂರು

ಎಲ್ಲರನ್ನೂ ಒಂದುಗೂಡಿಸುವುದೇ ಮಾನವ ಧರ್ಮ

February 10, 2019

ಮೈಸೂರು: ಯುವ ಕಲಾವಿದರು ನಾಟಕ, ಕಲೆ ಸಂಬಂಧಿ ವಿಷಯಗಳಿಗಷ್ಟೇ ಸೀಮಿತವಾಗದೇ, ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ನೀಡುವ ಮನೋಭಾವ ಬೆಳೆಸಿಕೊಳ್ಳ ಬೇಕು ಎಂದು ಸಾಹಿತಿ ಪೆÇ್ರ.ಕೆ.ಎಸ್.ಭಗವಾನ್ ಹೇಳಿದರು.
ಕಲಾಮಂದಿರದ ಮನೆಯಂಗಳದಲ್ಲಿ ಗೌತಮ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ‘ರಂಗಭೂಮಿ ಮತ್ತು ಜನಪದ ಕಲಾಪ್ರಕಾರಗಳ ತರಬೇತಿ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು.

ಕಲೆ ಮನುಷ್ಯನಿಗೆ ಬಹಳ ಮುಖ್ಯ. ಯಾರಿಗೆ ಸಂಗೀತ, ಸಾಹಿತ್ಯ, ಕಲೆಯಲ್ಲಿ ಆಸಕ್ತಿ ಇಲ್ಲವೋ ಅವರು ಬಾಲವಿಲ್ಲದ ಪಶುಗಳು ಎಂದು ಸಂಸ್ಕøತದಲ್ಲೊಂದು ಮಾತಿದೆ. ನಾವು ಯಾವುದರಲ್ಲೂ ಕಡಿಮೆಯಿಲ್ಲ ಎನ್ನುವ ಶಕ್ತಿ ನೀಡುವುದೇ ಕಲೆ. ಸಮಾಜಕ್ಕೆ ಒಳ್ಳೆಯ ಕೊಡುಗೆ ಗಳನ್ನು ನೀಡಿ, ಸಮಾಜ ಸೇವೆ ಮಾಡಿ. ತುಳಿತಕ್ಕೊಳಗಾದವರಿಗೆ ದನಿಯಾಗಿ, ಮಾನವೀಯತೆ ಬೆಳೆಸಿಕೊಳ್ಳಿ. ಎಲ್ಲರನ್ನೂ ಒಂದು ಗೂಡಿಸುವುದು ಮಾನವ ಧರ್ಮ ಮಾತ್ರ ಎಂದರು.

ಗೌತಮ ಶೈಕ್ಷಣಿಕ ಹೆಸರೇ ಅರ್ಥಪೂರ್ಣವಾಗಿದೆ. ಮಾನ ವೀಯ ತತ್ವಗಳನ್ನು ಹರಡಿದ ಕ್ರಾಂತಿಕಾರಿ ಚಿಂತಕರು ಗೌತಮ ಬುದ್ಧ. ನಾವೆಲ್ಲ ಭಗವಾನ್ ಬುದ್ಧರ ತತ್ವಗಳನ್ನು ಮೈಗೂಡಿಸಿ ಕೊಳ್ಳಬೇಕು. ಅವರ ಬೋಧನೆಯಿಂದ ಭರತಖಂಡ ಬದಲಾಯಿತು. ಯಾವುದೇ ಬಲ, ಸೈನ್ಯ ಬಳಸದೆ ಹಿಂಸೆ ಮಾಡದೇ ಅಹಿಂಸೆ, ಪ್ರೀತಿಯಿಂದ ತತ್ವ ಹರಡಿದರು ಎಂದು ಸ್ಮರಿಸಿದರು.

ಉಳಿದ ಎಲ್ಲ ಮತಸ್ಥಾಪಕ ಅನುಯಾಯಿಗಳು ರಕ್ತಪಾತ ಮಾಡಿ ದ್ದಾರೆ. ಅದಕ್ಕಾಗಿಯೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಯಾವ ಧರ್ಮ ಒಳ್ಳೆಯದೆಂದು ಅಧ್ಯಯನ ಮಾಡಿ ಕೊನೆಗೆ ಬೌದ್ಧ ಧರ್ಮವನ್ನೇ ಅನುಸರಿಸಿದರು. ಅಲ್ಬರ್ಟ್ ಐನ್‍ಸ್ಟೀನ್ ಕೂಡ ಬೌದ್ಧ ಧರ್ಮ ವೈಜ್ಞಾನಿಕ, ವೈಚಾರಿಕ, ಪ್ರಜಾಸತ್ತಾತ್ಮಕವೆಂದು ಪ್ರತಿಪಾದಿಸಿದರು ಎಂದು ಹೇಳಿದರು.

ಇಲ್ಲಿ ತತ್ವ, ಆಚರಣೆಗಳಿಗೆ ಬೆಲೆಯೇ ಹೊರತು ಮೌಢ್ಯ ಕಂದಾ ಚಾರಗಳಿಗೆ ಬೆಲೆ ಇಲ್ಲ. ಆ ದೃಷ್ಟಿಯಿಂದ ಮಾಡತಕ್ಕ ಎಲ್ಲಾ ಕಲಾ ತಂಡಗಳಿಗೆ ನೀಡುವ ತರಬೇತಿ ಅತ್ಯುತ್ತಮವಾಗಿರಲಿ. ಕಲೆಯನ್ನು ವಿಸ್ತರಿಸಿ, ಆಳವಾಗಿರಲಿ. ಕೇವಲ ಅಭಿನಯ, ಸಂಗೀತ ಉಪ ಕರಣಗಳ ಬಗ್ಗೆ ತರಬೇತಿ ಅಷ್ಟಕ್ಕೆ ನಿಲ್ಲದೇ ಬೌದ್ಧಿಕವಾಗಿ ಬೆಳೆಯಬೇಕು ಎಂದು ತಿಳಿಸಿದರು.

ರಂಗಾಯಣದ ಹಿರಿಯ ಕಲಾವಿದ ಮೈಮ್ ರಮೇಶ್ ಮಾತ ನಾಡಿ, ನನಗೆ ಹೆಸರು ನೀಡಿದ್ದು ರಂಗಭೂಮಿ. ಕಿರುತೆರೆಯಲ್ಲಿ ಮನುಷ್ಯ ಚಿಕ್ಕದಾಗಿ ಕಾಣುತ್ತಾನೆ. ಹಿರಿತೆರೆಯಲ್ಲಿ ಸ್ವಲ್ಪ ದೊಡ್ಡ ದಾಗಿ ಕಾಣುತ್ತಾನೆ. ಆದರೆ, ರಂಗಭೂಮಿಯಲ್ಲಿ ಮಾತ್ರ ಮನುಷ್ಯ ಮನುಷ್ಯನಾಗಿಯೇ ಕಾಣಿಸುತ್ತಾನೆ ಎಂದು ಬಿ.ವಿ.ಕಾರಂತರು ಹೇಳುತ್ತಿದ್ದರು. ಅವರ ಮಾತು ಅಕ್ಷರಶಃ ಸತ್ಯ ಎಂದು ಸ್ಮರಿಸಿದರು.

ರಂಗಭೂಮಿಯಲ್ಲಿ ದುಡಿಯುವವರು ಸಾಮಾಜಿಕ ಚಿಂತನೆ ಕುರಿತು ಹೋರಾಡಬೇಕು. ಆಗ ಮಾತ್ರ ನಿಜವಾಗಿ ಭಾರತದ ಪ್ರಜೆ ಯಾಗಲು ಸಾಧ್ಯ. ಕಲಿತಿರುವುದನ್ನು ಮುಂದೆ ಹೇಗೆ ಪೆÇೀಷಣೆ ಮಾಡಬೇಕು ಎನ್ನುವುದನ್ನು ಯೋಚಿಸಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ರಂಗಾಯಣ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಸಹಾಯಕ ಪ್ರಾಧ್ಯಾಪಕ ವಿ.ಸೋಮಶೇಖರ್, ಶಿಬಿರದ ನಿರ್ದೇಶಕ ಕೃಷ್ಣಮೂರ್ತಿ ತಲಕಾಡು ಉಪಸ್ಥಿತರಿದ್ದರು.

Translate »