ಮೈಸೂರಿಗೆ `ಶೂನ್ಯ’ ಕೊಡುಗೆಯ ಬಜೆಟ್
ಮೈಸೂರು

ಮೈಸೂರಿಗೆ `ಶೂನ್ಯ’ ಕೊಡುಗೆಯ ಬಜೆಟ್

February 10, 2019

ಮೈಸೂರು: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ ಕೇವಲ ಸುಳ್ಳಿನ ಕಂತೆಯಾಗಿದೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಬೇಕಾದವರಿಗೆ ಎಷ್ಟು ಬೇಕೋ ಅಷ್ಟು ಹಂಚಿಕೆ ಮಾಡುವ ಲೆಕ್ಕಾ ಚಾರದ ಪುಸ್ತಕವಾಗಿದ್ದು, ಮೈಸೂರಿಗೆ ಶೂನ್ಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ನಗರದ ಕಸ ವಿಲೇವಾರಿ ಘಟಕ ಸ್ಥಾಪನೆ, ಶಿಥಿಲವಾಗಿರುವ ದೇವರಾಜ ಮಾರುಕಟ್ಟೆ, ಅಗ್ರಹಾರದ ವಾಣಿ ವಿಲಾಸ ಹಾಗೂ ಮಂಡಿ ಮಾರುಕಟ್ಟೆ ಅಭಿವೃದ್ಧಿ ಅಥವಾ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತಹ ಬೇಡಿಕೆಗೆ ಸ್ಪಂದಿಸಿಲ್ಲ. ಹಳೆಯ ಒಳಚರಂಡಿ ಪೈಪ್ ಲೈನ್ ಬದಲಾವಣೆ ಕುರಿತು ಚಕಾರವಿಲ್ಲ. ಹಿರಿಯ ನಾಗರಿಕರ ಸಾಮಾಜಿಕ ಭದ್ರತೆ ನಗರಕ್ಕೆ ಅಗತ್ಯವಿದ್ದ 10 ಡೇ ಕೇರ್ ಬಗ್ಗೆಯೂ ಪ್ರಸ್ತಾಪವಿಲ್ಲ ಎಂದು ಆರೋಪಿಸಿದರು.
ಶಿಕ್ಷಣದ ಗುಣಮಟ್ಟ ಕುಸಿತದಿಂದ ಶೇ. 82ರಷ್ಟು ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದು, ವಿದ್ಯಾರ್ಥಿ ಕೊರತೆ ಯಿಂದ 16 ಇಂಜಿನಿಯರಿಂಗ್ ಕಾಲೇಜು ಗಳನ್ನು ಮುಚ್ಚಲಾಗುತ್ತಿದೆ. ಇಂತಹ ಸಮಯ ದಲ್ಲಿ ಹಾಸನದಲ್ಲಿ ಹೊಸ ವಿವಿ ತರುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದರು.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ನ್ಯೂನತೆ ಸರಿಪಡಿಸಿ
ಪ್ರಧಾನಿ ನರೇಂದ್ರ ಮೋದಿಯವರ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾ ಟಕ ಯೋಜನೆಯಲ್ಲಿನ ನ್ಯೂನತೆಗಳನ್ನು ತುರ್ತಾಗಿ ಸರಿಪಡಿಸುವಂತೆ ತಾವು ರಾಜ್ಯ ಸರ್ಕಾರವನ್ನು ಕೋರಿದ್ದು, ಆದರೂ ನ್ಯೂನತೆ ಗಳನ್ನು ಸರಿಪಡಿಸದೆ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಇದರಿಂದ ರಾಜ್ಯದ ಜನಸಾಮಾನ್ಯರಿಗೆ ಬಹಳ ತೊಂದರೆ ಯಾಗುತ್ತಿದೆ ಎಂದು ದೂರಿದರು.

ಈ ಯೋಜನೆಯಲ್ಲಿರುವ ನ್ಯೂನತೆ ಗಳನ್ನು ಸರಿಪಡಿಸದಿದ್ದಲ್ಲಿ ರಾಜ್ಯದ ಜನ ಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಹೈಕೋರ್ಟ್‍ನಲ್ಲಿ ದಾವೆ ಹೂಡಲು ನಿರ್ಧ ರಿಸಿರುವುದಾಗಿ ರಾಮದಾಸ್ ತಿಳಿಸಿದರು.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯ ಕ್ರಮದಡಿ ಕೇಂದ್ರ ಸರ್ಕಾರದ ಮಾರ್ಗ ಸೂಚಿಯನ್ನು ಪಾಲಿಸದೆ 150ಕ್ಕೂ ಹೆಚ್ಚು ಕಾರ್ಯ ವಿಧಾನಗಳನ್ನು ಕೇಂದ್ರದ ಅನು ಮತಿಯನ್ನು ಪಡೆಯದೇ ಏಕಾಏಕಿ ರಾಜ್ಯ ಅಳವಡಿಸಿಕೊಂಡಿರುವುದರಿಂದ ಇದು ವರೆಗೆ ಈ ಯೋಜನೆಯಡಿ ಚಿಕಿತ್ಸೆ ನೀಡಿರುವ ನೆಟ್‍ವರ್ಕ್ ಆಸ್ಪತ್ರೆಗಳಿಗೆ ಯಾವುದೇ ಹಣವು ಕೇಂದ್ರದಿಂದ ಮಂಜೂರಾಗಿಲ್ಲ ಎಂದರು. ಗೋಷ್ಠಿಯಲ್ಲಿ ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಶಿವ ಕುಮಾರ್, ಎಂ.ಸಿ.ರಮೇಶ್ ಉಪಸ್ಥಿತರಿದ್ದರು.

Translate »