ಮೈಸೂರು: ಎರಡು ಪ್ರತ್ಯೇಕ ಅಪಘಾತ ಗಳಲ್ಲಿ ಬೈಕ್ ಸವಾರ ಹಾಗೂ ಪಾದಚಾರಿಯೊಬ್ಬ ಮೃತಪಟ್ಟಿದ್ದಾರೆ. ಬೈಕ್ ಸವಾರ ಸಾವು: ಮರಿದೇವರು ಮತ್ತು ಮಹೇಶ್ ಇಬ್ಬರು ಪ್ರತ್ಯೇಕ ಬೈಕ್‍ಗಳಲ್ಲಿ ಆರ್‍ಟಿ ನಗರದ ಉರು ಕಾತೇಶ್ವರಿ ದೇವಸ್ಥಾನದ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಎಡಕ್ಕೆ ತಿರುವು ಪಡೆದಿದ್ದಾರೆ. ಈ ವೇಳೆ ಬಲಬಾಗದಿಂದ ವೇಗವಾಗಿ ಬಂದ ಲಾರಿ ಮಹೇಶ್ ಓಡಿಸುತ್ತಿದ್ದ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಗಾಯಗೊಂಡ ಮಹೇಶ್‍ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಕೆ.ಆರ್.ಸಂಚಾರ ಠಾಣೆಯಲ್ಲಿ…
ಪತ್ನಿಯನ್ನು ಕೊಂದ ಪತಿಗೆ ಜೀವಾವಧಿ ಶಿಕ್ಷೆ
July 2, 2018ಮೈಸೂರು: ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಮೈಸೂರಿನ ಕುಂಬಾರಕೊಪ್ಪಲಿನ ಗರಡಿ ಬೀದಿಯ ಮೂರ್ತಿ ಅಲಿಯಾಸ್ ಕೃಷ್ಣಮೂರ್ತಿ (37) ಜೀವಾವಧಿ ಶಿಕ್ಷೆಗೆ ಗುರಿಯಾದವ ನಾಗಿದ್ದು, ಈತ 2014ರ ಸೆ.25ರಂದು ತನ್ನ ಪತ್ನಿ ಸುವರ್ಣ ಅವರ ಶೀಲ ಶಂಕಿಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ಪರಿಣಾಮ ಸುಟ್ಟ ಗಾಯಗಳಿಂದ ಸುವರ್ಣ ಸಾವನ್ನಪ್ಪಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮೇಟಗಳ್ಳಿ ಪೊಲೀಸರು, ತನಿಖೆ…
ಜು.8ರಿಂದ 10ರವರೆಗೆ ಮೈಸೂರು ಅರಮನೆ ಪದ್ಮರಾಜಪಂಡಿತರ ಜೈನಬ್ರಾಹ್ಮಣ ವಿದ್ಯಾರ್ಥಿನಿಲಯದ ಶತಮಾನೋತ್ಸವ ಕಾರ್ಯಕ್ರಮ
July 2, 2018ಮೈಸೂರು: ಮೈಸೂರಿನ ಚಾಮುಂಡಿಪುರಂ ಜಾನ್ಸಿಲಕ್ಷ್ಮೀಬಾಯಿ ರಸ್ತೆಯ ಮೈಸೂರು ಅರಮನೆ ಪದ್ಮರಾಜ ಪಂಡಿತರ ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಶತಮಾನೋತ್ಸವ ಸಮಾರಂಭ ಜು.8ರಿಂದ 10ರವರೆಗೆ ನಡೆಯಲಿದೆ ಎಂದು ವಿದ್ವಾನ್ ಪ್ರತಿಷ್ಠಾಚಾರ್ಯ ಡಿ.ಶ್ರೀಪತಿ ಜೋಯಿಸ್ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಜು.8ರಂದು ಮಧ್ಯಾಹ್ನ 2 ಗಂಟೆಗೆ ಶತಮಾನೋತ್ಸವ ಸಮಾರಂಭಕ್ಕೆ ಮೂಡಬಿದಿರೆ ಶ್ರೀಮದಭಿನವ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಚಾಲನೆ ನೀಡುವರು. ಮಲೆಯೂರು ಕನಕಗಿರಿ ಶ್ರೀಕ್ಷೇತ್ರ ಜೈನಮಠದ ಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಎಸ್.ಎ.ರಾಮದಾಸ್, ಪಾಲಿಕೆ ಸದಸ್ಯ…
ಆಯುರ್ವೇದ ಪ್ರಚಾರ ಪರಿಷತ್ ಟ್ರಸ್ಟ್ ವತಿಯಿಂದ ವೈದ್ಯರ ದಿನಾಚರಣೆ: ಐವರು ವೈದ್ಯರಿಗೆ ‘ವೈದ್ಯ ಭಾಸ್ಕರ’ ಪ್ರಶಸ್ತಿ
July 2, 2018ಮೈಸೂರು: ತಮ್ಮ ಇಡೀ ಜೀವನವನ್ನು ಜನರ ಆರೋಗ್ಯಕ್ಕಾಗಿಯೇ ಮೀಸಲಿಟ್ಟು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಶ್ರಮಿಸುತ್ತಿರುವ ಐವರು ವೈದ್ಯರಿಗೆ ಮೈಸೂರಿನ ಆಯುರ್ವೇದ ಪ್ರಚಾರ ಪರಿಷತ್ ಟ್ರಸ್ಟ್ ವತಿಯಿಂದ ಭಾನುವಾರ `ವೈದ್ಯ ಭಾಸ್ಕರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ವೈದ್ಯರ ದಿನಾಚರಣೆ ಹಾಗೂ ಹಿರಿಯ ಸಾಹಿತಿ ಕೆ.ಭೈರವಮೂರ್ತಿ ಅವರ 74ನೇ ಹುಟ್ಟುಹಬ್ಬದ ಶುಭ ಹಾರೈಕೆ ಕಾರ್ಯಕ್ರಮದಲ್ಲಿ ಮೈಸೂರಿನ ಹೃದ್ರೋಗ ತಜ್ಞ ಡಾ.ಎಸ್.ಪಿ.ಯೋಗಣ್ಣ. ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎಂ.ಎಸ್.ವಿಶ್ವೇಶ್ವರ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ…
ಇಂದಿನಿಂದ ಕ್ಷಯರೋಗ ಪತ್ತೆ, ಚಿಕಿತ್ಸಾ ಆಂದೋಲನ
July 2, 2018ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜು.2ರಿಂದ 13ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಕ್ಷಯ ರೋಗವು ಮೈಕೋ ಬ್ಯಾಕ್ಟೀರಿಯಾದಿಂದ ಹರಡುವ ಒಂದು ಸಾಂಕ್ರಾಮಿಕ ರೋಗ. ಇದು ಸೋಂಕುಳ್ಳ ವ್ಯಕ್ತಿ ಸೀನಿದಾಗ ಮತ್ತು ಕೆಮ್ಮಿದಾಗ ಗಾಳಿಯ ಮೂಲಕ ಹರಡುತ್ತದೆ. ಚಿಕಿತ್ಸೆ ಪಡೆಯದ ವ್ಯಕ್ತಿ ಒಂದು ವರ್ಷದಲ್ಲಿ 10 ಅಥವಾ ಹೆಚ್ಚು ಜನರಿಗೆ ಸೋಂಕು ಹರಡಬಲ್ಲ. ಆದ್ದರಿಂದ ಈ ರೋಗದ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಇಲಾಖೆ ಅಧಿಕಾರಿಗಳು…
ಇಂದಿನಿಂದ ಚಾರ್ವಾಕ ಕಥಾ ನಾಟಕೋತ್ಸವ
July 2, 2018ಮೈಸೂರು: ಮೈಸೂರಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ ಜು.2ರಂದು ಬೆಳಿಗ್ಗೆ 10.30 ಗಂಟೆಗೆ ಚಾರ್ವಾಕ ಕಥಾ ನಾಟಕೋತ್ಸವದ ಉದ್ಘಾಟನೆ ನೆರವೇರಲಿದೆ. ವೈಚಾರಿಕ ಚಿಂತನೆ ಮತ್ತು ಚಿಂತಕರ ಕಗ್ಗೊಲೆ ಕುರಿತ ವಿಚಾರ ಸಂಕಿರಣಕ್ಕೆ ಮಾಜಿ ಎಂಎಲ್‍ಸಿ ಗೋ.ಮಧುಸೂದನ್ ಚಾಲನೆ ನೀಡುವರು. ವಿಚಾರವಾದಿ ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸುವರು. ನ್ಯಾಯವಾದಿ ಹೆಚ್.ಮೋಹನ್‍ಕುಮಾರ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪತ್ರಕರ್ತ ಡಾ.ಕೃಷ್ಣಮೂರ್ತಿ ಚಮರಂ, ವಿಚಾರವಾದಿ ಮಲ್ಕುಂಡಿ ಮಹದೇವಸ್ವಾಮಿ, ಚಾರ್ವಾಕ ಸಂಸ್ಥೆಯ ಅಧ್ಯಕ್ಷ ಗಿರೀಶ್ ಮಾಚಳ್ಳಿ ಭಾಗವಹಿಸುವರು. ಪ್ರತಿ ದಿನ ಸಂಜೆ 6.30ಕ್ಕೆ…
ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ನ ಚಕ್ರ ಕಳವು
July 2, 2018ಮೈಸೂರು: ಖದೀಮರು ಮನೆಯ ಮುಂದೆ ನಿಲ್ಲಿಸಿದ್ದ ಬೈಕ್‍ನ 2 ಚಕ್ರ ಮತ್ತು ಸೀಟನ್ನು ಕಳವು ಮಾಡಿರುವ ಘಟನೆ ಹೆಬ್ಬಾಳ್ ಪೊಲೀಸ್ ಕ್ವಾರ್ಟಸ್‍ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ದರ್ಶನ್, ಜೂ.25ರಂದು ರಾತ್ರಿ 9 ಗಂಟೆ ವೇಳೆಗೆ ಬೈಕನ್ನು ಮನೆಯ ಮುಂದೆ ನಿಲ್ಲಿಸಿದ್ದು, ಬೆಳಿಗ್ಗೆ ಎದ್ದು ನೋಡಿದಾಗ ಬೈಕ್ ಮನೆಯ ಮುಂದಿನ ಮರದ ಕೆಳಗೆ ಬಿದ್ದಿತ್ತು. ಸಮೀಪ ಹೋಗಿ ನೋಡಿದಾಗ ಖದೀಮರು ಬೈಕ್‍ನ 2 ಚಕ್ರ ಹಾಗೂ ಸೀಟನ್ನು ಕಳವು ಮಾಡಿದ್ದರು. ಈ ಸಂಬಂಧ ಹೆಬ್ಬಾಳ್…
ಕಾವೇರಿ ಪ್ರಾಧಿಕಾರ, ನೀರು ನಿರ್ವಹಣಾ ಸಮಿತಿ ರಚನೆ: ಸುಪ್ರೀಂಕೋರ್ಟ್‍ನಲ್ಲಿ ಮೂಲ ದಾವೆ ಹೂಡಲು ಸರ್ವಪಕ್ಷ ಸಭೆಯಲ್ಲಿ ನಿರ್ಧಾರ
July 1, 2018ಬೆಂಗಳೂರು: ಕಾವೇರಿ ನಿರ್ವಹಣಾ ಪ್ರಾಧಿಕಾರ ಹಾಗೂ ನದಿ ನೀರು ನಿರ್ವಹಣಾ ಸಮಿತಿ ರಚನೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಮೂಲ ದಾವೆ ಹೂಡಲು ಇಂದಿಲ್ಲಿ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ಸರ್ವ ಸಮ್ಮತ ತೀರ್ಮಾನ ತೆಗೆದುಕೊಳ್ಳಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕೇಂದ್ರ ಸರ್ಕಾರದ ಏಕಪಕ್ಷೀಯ ತೀರ್ಮಾನದ ವಿರುದ್ಧ ಪ್ರತಿಭಟನೆ ಹಾಗೂ ಕಾನೂನು ಹೋರಾಟ ಮಾಡುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಪ್ರಾಧಿಕಾರ ಜುಲೈ 2 ರಂದು ಕರೆದಿರುವ…
ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಟಿ.ಎಂ. ವಿಜಯಭಾಸ್ಕರ್ ಅಧಿಕಾರ ಸ್ವೀಕಾರ
July 1, 2018ಬೆಂಗಳೂರು: ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಟಿ.ಎಂ. ವಿಜಯಭಾಸ್ಕರ್ ಇಂದಿಲ್ಲಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ವಿಜಯಭಾಸ್ಕರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ಇದಕ್ಕೂ ಮುನ್ನ ಸರ್ಕಾರ ಸೇವಾ ಹಿರಿತನದ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಟಿ.ಎಂ. ವಿಜಯಭಾಸ್ಕರ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ನೂತನ ಮುಖ್ಯ ಕಾರ್ಯದರ್ಶಿ ಆಯ್ಕೆ ಕುರಿತು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಮುಖ್ಯಮಂತ್ರಿಯವರ ನಿರ್ಧಾರಕ್ಕೆ ಬಿಡಲಾಗಿತ್ತು. ಆಂಧ್ರ ಪ್ರದೇಶ…
ಕಾವೇರಿ ಸಂಬಂಧ ಸರ್ವಪಕ್ಷ ಸಭೆಗೆ ಸಿದ್ದರಾಮಯ್ಯ ಗೈರು
July 1, 2018ಬೆಂಗಳೂರು: ಕಾವೇರಿ ನದಿ ನೀರು ಸಮಸ್ಯೆ ಕುರಿತು ಇಂದು ಕರೆದಿದ್ದ ಸರ್ವಪಕ್ಷ ಸಭೆಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರ ಉಳಿದಿದ್ದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಸರ್ಕಾರ ಅಧಿಕೃತವಾಗಿ ಆಹ್ವಾನ ನೀಡಿತ್ತು. ಅಷ್ಟೇ ಅಲ್ಲ ಕಾವೇರಿ ಜಲಾನಯನ ಭಾಗದ ಪ್ರಮುಖ ಮುಖಂಡರು ಕೂಡ. ಸಭೆಯಲ್ಲಿ ಕಾವೇರಿ ಕೊಳ್ಳದ ಶಾಸಕರು, ಸಂಸದರು ಭಾಗವಹಿಸಿದ್ದರು. ಆದರೆ, ಸಭೆಗೆ ಹಾಜರಾಗದ ಸಿದ್ದರಾಮಯ್ಯನವರು ಮನೆಯಲ್ಲೇ ಉಳಿದಿದ್ದರು. ಸಿದ್ದರಾಮಯ್ಯ ಈಗ ಬಾದಾಮಿ ಕ್ಷೇತ್ರದ ಶಾಸಕ. ಒಂದೊಮ್ಮೆ ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿದ್ದರೆ ಆಗ…