ಜು.8ರಿಂದ 10ರವರೆಗೆ ಮೈಸೂರು ಅರಮನೆ ಪದ್ಮರಾಜಪಂಡಿತರ ಜೈನಬ್ರಾಹ್ಮಣ ವಿದ್ಯಾರ್ಥಿನಿಲಯದ ಶತಮಾನೋತ್ಸವ ಕಾರ್ಯಕ್ರಮ
ಮೈಸೂರು

ಜು.8ರಿಂದ 10ರವರೆಗೆ ಮೈಸೂರು ಅರಮನೆ ಪದ್ಮರಾಜಪಂಡಿತರ ಜೈನಬ್ರಾಹ್ಮಣ ವಿದ್ಯಾರ್ಥಿನಿಲಯದ ಶತಮಾನೋತ್ಸವ ಕಾರ್ಯಕ್ರಮ

July 2, 2018

ಮೈಸೂರು:  ಮೈಸೂರಿನ ಚಾಮುಂಡಿಪುರಂ ಜಾನ್ಸಿಲಕ್ಷ್ಮೀಬಾಯಿ ರಸ್ತೆಯ ಮೈಸೂರು ಅರಮನೆ ಪದ್ಮರಾಜ ಪಂಡಿತರ ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಶತಮಾನೋತ್ಸವ ಸಮಾರಂಭ ಜು.8ರಿಂದ 10ರವರೆಗೆ ನಡೆಯಲಿದೆ ಎಂದು ವಿದ್ವಾನ್ ಪ್ರತಿಷ್ಠಾಚಾರ್ಯ ಡಿ.ಶ್ರೀಪತಿ ಜೋಯಿಸ್ ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜು.8ರಂದು ಮಧ್ಯಾಹ್ನ 2 ಗಂಟೆಗೆ ಶತಮಾನೋತ್ಸವ ಸಮಾರಂಭಕ್ಕೆ ಮೂಡಬಿದಿರೆ ಶ್ರೀಮದಭಿನವ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಚಾಲನೆ ನೀಡುವರು. ಮಲೆಯೂರು ಕನಕಗಿರಿ ಶ್ರೀಕ್ಷೇತ್ರ ಜೈನಮಠದ ಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಎಸ್.ಎ.ರಾಮದಾಸ್, ಪಾಲಿಕೆ ಸದಸ್ಯ ಮ.ವಿ.ರಾಮ್‍ಪ್ರಸಾದ್ ಭಾಗವಹಿಸುವರು. 9ರಂದು ಮಧ್ಯಾಹ್ನ ಗಂಟೆಗೆ ಮೂಡಬಿದರೆ ಜೈನಮಠದ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಮೈಸೂರಿನ ಎಸ್‍ಡಿಎಂ ಕಾಲೇಜಿನ ಉಪನ್ಯಾಸಕ ಎನ್.ದೇವೇಂದ್ರಕುಮಾರ್ ಧರ್ಮನುಡಿ ನೀಡಲಿದ್ದಾರೆ. 10ರಂದು ಬೆಳಗ್ಗೆ 8ಕ್ಕೆ ಚೈತ್ಯಾಲಯದಲ್ಲಿ 108 ಕಲಶ ಮಹಾಭಿಷೇಕ ಮತ್ತು ಶ್ರೀ ಕಲಿಕುಂಡ ಯಂತ್ರಾರಾಧನೆ ಪ್ರಾರಂಭವಾಗಲಿದ್ದು, ಭಟ್ಟಾರಕ ಸ್ವಾಮೀಜಿ ಸಾನ್ನಿದ್ಯ ವಹಿಸುವರು. ಮಧ್ಯಾಹ್ನ 2 ಗಂಟೆಗೆ ಮೂಡಬಿದರೆ ಮಠದ ಸ್ವಾಮೀಜಿ ಆಶೀರ್ವಚನ ನೀಡುವರು. ಹುಂಚ ಶ್ರೀಕ್ಷೇತ್ರ ಹೊಂಬುಜ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಅವರು `ಶತಮಾನ ದರ್ಶಿನಿ’ ಬಿಡುಗಡೆ ಮಾಡುವರು. ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದವರಿಗೆ ಪ್ರೋತ್ಸಾಹ ಕಾರ್ಯಕ್ರಮವಿದೆ.

ಪ್ರತಿದಿನ ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಲಕ್ಷ್ಮೀರಮಣ, ಜಿನರಾಜ ಪ್ರಸಾದ್, ಚಂದನ್‍ಕುಮಾರ್, ಮಹಾವೀರಪ್ರಸಾದ್ ಉಪಸ್ಥಿತರಿದ್ದರು.

Translate »