ಮೈಸೂರು: ಕೌಟುಂಬಿಕ ಕಲಹಕ್ಕೆ ಮಹಿಳೆಯೊಬ್ಬರು ಬಲಿಯಾಗಿರುವ ಘಟನೆ ಮೈಸೂರಿನ ಗಾಯತ್ರಿಪುರಂನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಗಾಯತ್ರಿಪುರಂ ನಿವಾಸಿ ಝರೀನ ತಾಜ್(56) ಸಾವನ್ನಪ್ಪಿದವರು. ಕೌಟುಂಬಿಕ ಕಲಹದಲ್ಲಿ ಉಂಟಾದ ನೂಕಾಟ-ತಳ್ಳಾಟದಲ್ಲಿ ಆಯ ತಪ್ಪಿ ಬಿದ್ದು ಗಾಯಗೊಂಡಿದ್ದ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ 9.30 ಗಂಟೆ ವೇಳೆಗೆ ಕೊನೆಯುಸಿರೆಳೆದಿದ್ದಾರೆ. ಝರೀನ ತಾಜ್‍ಳ ಸಹೋದರ ಮಹಮದ್ ರಫಿ ಎಂಬುವರ ಪುತ್ರಿ ಮುಸ್ಕಾನರನ್ನು ಒಂದೂವರೆ ವರ್ಷದ ಹಿಂದೆ ಸೈಯ್ಯದ್ ಸಲ್ಮಾನ್‍ಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ತದನಂತರ…
ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಂಡಗಣ್ಣ ವಿಶ್ವಕರ್ಮ ನೇಮಕಕ್ಕೆ ಮನವಿ
June 24, 2018ಮೈಸೂರು: ಜೆಡಿಎಸ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಮುಖಂಡ ಕೆಂಡಗಣ್ಣ ವಿಶ್ವಕರ್ಮ ಅವರಿಗೆ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕೆಂದು ಮೈಸೂರು ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಟಿ.ಎ.ಸಿದ್ದರಾಜು ಒತ್ತಾಯಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪರ ಕೆಲಸ ಮಾಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರ ಗೆಲುವಿಗೆ ಶ್ರಮಿಸಿದ್ದ ವಿಶ್ವಕರ್ಮ ಸಮುದಾಯ ಮುಖಂಡರಾದ ಕೆಂಡಗಣ್ಣ ಅವರಿಗೆ ರಾಜ್ಯ ವಿಶ್ವಕರ್ಮ…
ಜು.1ರಂದು ವೈದ್ಯ ಭಾಸ್ಕರ ಪ್ರಶಸ್ತಿ ಪ್ರದಾನ
June 24, 2018ಮೈಸೂರು: ಆಯುರ್ವೇದ ಪ್ರಚಾರ ಪರಿಷತ್ ಟ್ರಸ್ಟ್ ವತಿಯಿಂದ ವಿಶ್ವ ವೈದ್ಯ ದಿನಾಚರಣೆಯ ಅಂಗವಾಗಿ ವೈದ್ಯ ಭಾಸ್ಕರ ಪ್ರಶಸ್ತಿ ಪ್ರದಾನ ಸಮಾ ರಂಭವನ್ನು ಏರ್ಪಡಿಸಲಾಗಿದೆ. ಜುಲೈ 1ರಂದು ಬೆಳಿಗ್ಗೆ 10.15ಕ್ಕೆ ದಿ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿ ಖ್ಯಾತರಾಗಿರುವ ಐವರು ವೈದ್ಯರುಗಳಿಗೆ ವೈದ್ಯ ಭಾಸ್ಕರ ಪ್ರಶಸ್ತಿಯನ್ನು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪಿ.ವೆಂಕಟರಾಮಯ್ಯ ಪ್ರದಾನ ಮಾಡಲಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ…
ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನ
June 24, 2018ಮೈಸೂರು: ಮೈಸೂರು ಜಿಲ್ಲಾ ಸವಿತಾ ಸಮಾಜವು ಪದವಿ, ವೃತ್ತಿ ಶಿಕ್ಷಣ, ಇಂಜಿನಿಯರಿಂಗ್, ಸ್ನಾತಕೋತ್ತರ ಪದವಿ, ಎಸ್‍ಎಸ್‍ಎಲ್‍ಸಿ, ಪಿಯುಸಿ ವ್ಯಾಸಂಗ ಮಾಡುತ್ತಿರುವ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿನಿಲಯದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆಸಕ್ತರು: ಪಿ. ಶಿವಣ್ಣ, ಅಧ್ಯಕ್ಷರು, ನಾಗೇಶ್, ಕಾರ್ಯದರ್ಶಿ, ಎಂ.ವಿ. ಶಿವಕುಮಾರ್, ಖಜಾಂಚಿ ಇವರಿಗೆ ಮೈಸೂರು ಜಿಲ್ಲಾ ಸವಿತಾ ಸಮಾಜ ನಂ. 68, 6ನೇ ಮುಖ್ಯ ರಸ್ತೆ, ಜಯಲಕ್ಷ್ಮಿಪುರಂ, ಮೈಸೂರು-570 012 ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು. ಮೊ. 8105495679, 93790557, 9945890809 ಇವರನ್ನು ಸಂಪರ್ಕಿಸಬಹುದು.
ಕಲೆ ಹಾಗೂ ಕಲಾವಿದರ ನೊಂದಣಿ
June 24, 2018ಮೈಸೂರು: ಭಾರತ ಸರ್ಕಾರದ ಸಾಂಸ್ಕೃತಿಕ ಮಂತ್ರಾಲಯ ಇವರು ಸಾಂಪ್ರದಾಯಿಕ ಹಾಗೂ ಅಸಂಪ್ರದಾಯಿಕ ಕಲೆ ಹಾಗೂ ಕಲಾವಿದರ ವಿವರವನ್ನು ಆನ್ ಲೈನ್ ಮೂಲಕ ನೋಂದಣಿ ಮಾಡಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಜೂನ್ 30 ಕೊನೆಯ ದಿನಾಂಕವಾಗಿದ್ದು, ಆನ್‍ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಇರುವ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಲಾ ಮಂದಿರದಲ್ಲಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ ದೂ.080-22213530 / 22221271 ಯನ್ನು ಸಂಪರ್ಕಿಸುವುದು.
ಮೋದಿಯನ್ನೇ ಇನ್ನು ಮೂರು ಅವಧಿಗೆ ಪ್ರಧಾನಿ ಮಾಡಿದರೆ ಮಾತ್ರ ದೇಶಕ್ಕೆ ಉಳಿಗಾಲ
June 23, 2018ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಪ್ರೊ.ಎಸ್.ಎಲ್.ಭೈರಪ್ಪ ಪ್ರತಿಪಾದನೆ ಮೈಸೂರು: ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿನ ಮೂರು ಅವಧಿಗೂ ಪ್ರಧಾನಿಯನ್ನಾಗಿ ಮಾಡಿದಾಗ ಮಾತ್ರ ದೇಶಕ್ಕೆ ಉಳಿಗಾಲ ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತ ಖ್ಯಾತ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿ ರುವ ತಮ್ಮ ನಿವಾಸದಲ್ಲಿ ಕೇಂದ್ರ ಸರ್ಕಾ ರದ ನಾಲ್ಕು ವರ್ಷಗಳ ಸಾಧನೆ ಕುರಿತಾದ ಕಿರುಹೊತ್ತಿಗೆಯನ್ನು ಸಂಸದ ಪ್ರತಾಪ ಸಿಂಹ ಅವರಿಂದ ಶುಕ್ರವಾರ ಸ್ವೀಕರಿಸಿದ ನಂತರ…
ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೇ ಕೆಲಸ ಮಾಡಿ
June 23, 2018ಬೆಂಗಳೂರು: ಮೈತ್ರಿ ಸರ್ಕಾರ ದಲ್ಲಿ ಬರುವ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಇಂದಿಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಹಿರಿಯ ಪೊಲೀಸ್ ಅಧಿಕಾರಿ ಗಳ ಸಭೆ ನಡೆಸಿದರು. ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿ ಶಾಂತಿ-ಸೌಹಾರ್ದತೆ ಕಾಪಾಡಿ ಜನಸ್ನೇಹಿಯಾಗಿರಬೇಕು. ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೆ ದಕ್ಷ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಸಮಾಜದಲ್ಲಿ ಶಾಂತಿ-ಸೌಹಾರ್ದತೆಯನ್ನು ಕಾಪಾಡಬೇಕು. ರೌಡಿ ಚಟುವಟಿಕೆಗಳನ್ನು ನಿರ್ದಾಕ್ಷಿಣ್ಯ ವಾಗಿ ನಿಯಂತ್ರಿಸಿ,…
ರೇವಣ್ಣನೂ ಸಿಎಂ ಆಗುವ ತಯಾರಿ
June 23, 2018ಈಗಾಗಲೇ ಚಾಣಾಕ್ಷ ಪಿಆರ್ ನೇಮಕಕ್ಕೆ ನಿರ್ಧಾರ ಮಾಸಿಕ 5 ರಿಂದ 6 ಲಕ್ಷ ವೇತನ, ಪಂಚತಾರಾ ಫೆಸಿಲಿಟೀಸ್ ಬೆಂಗಳೂರು: ಕಿರಿಯ ಸಹೋದರ ಹೆಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಯಾಗಿದ್ದು, ನಾನೂ ಒಂದು ಬಾರಿ ಏಕೆ ಆಗಬಾರದು ಎಂಬ ಅಭಿಲಾಷೆಯನ್ನು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೊಂದಿ ದ್ದಾರೆ. ಈ ಅವಧಿ ಯಲ್ಲಿ ಅಲ್ಲದಿದ್ದರೂ ಮುಂದೆ ಅಧಿಕಾರ ಹಿಡಿಯುವ ಅವಕಾಶ ಎದುರಾದಾಗ ಮುಖ್ಯಮಂತ್ರಿ ಗಾದಿಗೆ ಏರಲೇಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ. ಇದಕ್ಕಾಗಿ ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮತ್ತು ಮಾಧ್ಯಮದ…
9 ಮಂದಿ ಒಳಗೊಂಡ ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ
June 23, 2018ಬೆಂಗಳೂರು: ರಾಜ್ಯ ಸರ್ಕಾರದ ವಿರೋಧದ ನಡುವೆಯೂ ಕಾವೇರಿ ನದಿ ನೀರು ಹಂಚಿಕೆಗಾಗಿ ಕೇಂದ್ರ ಸರ್ಕಾರವು 9 ಮಂದಿ ಇರುವ ಕಾವೇರಿ ನೀರು ನಿರ್ವ ಹಣಾ ಮಂಡಳಿಯನ್ನು ರಚಿಸಿದೆ. ಈ ಸಂಬಂಧ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವು ಇಂದು ಅಧಿಕೃತ ಆದೇಶ ಹೊರಡಿಸಿದ್ದು, ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಇಂಜಿನಿಯರ್ ನವೀನ್ ಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಮತ್ತೋರ್ವ ಮುಖ್ಯ ಇಂಜಿನಿಯರ್ ಕೆ.ಎಸ್.ಗೋಯಲ್ ಅವರನ್ನು ಸದಸ್ಯ…
ಮನಸ್ಸಿಲ್ಲದಿದ್ದರೂ ಉನ್ನತ ಶಿಕ್ಷಣ ಖಾತೆ ವಹಿಸಿಕೊಂಡ ಜಿ.ಟಿ. ದೇವೇಗೌಡ
June 23, 2018ಬೆಂಗಳೂರು: ತಮಗೆ ದೊರೆತ ಖಾತೆ ವಹಿಸಿ ಕೊಳ್ಳಲು ಮೊದಲು ಹಿಂಜರಿದಿದ್ದ ಜಿ.ಟಿ. ದೇವೇಗೌಡ ಅವರು ಇಂದು ಉನ್ನತ ಶಿಕ್ಷಣ ಇಲಾಖೆಯ ಹೊಣೆಗಾರಿಕೆಯನ್ನು ಕೊನೆಗೂ ವಹಿಸಿ ಕೊಂಡರು. ವಿಧಾನಸೌಧದ 3ನೇ ಮಹಡಿಯ ತಮ್ಮ ಕೊಠಡಿಯಲ್ಲಿ ಪೂಜೆ ಸಲ್ಲಿಸಿ, ಮುಖ್ಯಮಂತ್ರಿ ಕುಮಾರಸ್ವಾಮಿ ವಹಿಸಿಕೊಟ್ಟ ಹೊಣೆ ಗಾರಿಕೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಇಲಾಖಾ ಅಧಿಕಾರಿಗಳು, ಸಂಪುಟದ ಇತರೆ ಸಚಿವರು, ಸ್ನೇಹಿತರು, ಹಿತೈಷಿ ಗಳು, ಪಕ್ಷದ ಕಾರ್ಯಕರ್ತರು ಶುಭ ಕೋರಿದರು. ನನ್ನ ವಿದ್ಯಾ ಭ್ಯಾಸವೇ 8ನೇ ತರಗತಿ, ನಾನು ಹೇಗೆ ಉನ್ನತ…