ರೇವಣ್ಣನೂ ಸಿಎಂ ಆಗುವ ತಯಾರಿ
ಮೈಸೂರು

ರೇವಣ್ಣನೂ ಸಿಎಂ ಆಗುವ ತಯಾರಿ

June 23, 2018
  • ಈಗಾಗಲೇ ಚಾಣಾಕ್ಷ ಪಿಆರ್ ನೇಮಕಕ್ಕೆ ನಿರ್ಧಾರ
  • ಮಾಸಿಕ 5 ರಿಂದ 6 ಲಕ್ಷ ವೇತನ, ಪಂಚತಾರಾ ಫೆಸಿಲಿಟೀಸ್

ಬೆಂಗಳೂರು: ಕಿರಿಯ ಸಹೋದರ ಹೆಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಯಾಗಿದ್ದು, ನಾನೂ ಒಂದು ಬಾರಿ ಏಕೆ ಆಗಬಾರದು ಎಂಬ ಅಭಿಲಾಷೆಯನ್ನು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಹೊಂದಿ ದ್ದಾರೆ. ಈ ಅವಧಿ ಯಲ್ಲಿ ಅಲ್ಲದಿದ್ದರೂ ಮುಂದೆ ಅಧಿಕಾರ ಹಿಡಿಯುವ ಅವಕಾಶ ಎದುರಾದಾಗ ಮುಖ್ಯಮಂತ್ರಿ ಗಾದಿಗೆ ಏರಲೇಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ. ಇದಕ್ಕಾಗಿ ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮತ್ತು ಮಾಧ್ಯಮದ ಮೂಲಕ ಮುಖ್ಯಮಂತ್ರಿ ಗಾದಿಗೆ ತಕ್ಕ ವ್ಯಕ್ತಿ ಎಂಬ ಅಭಿಪ್ರಾಯ ಮೂಡಿಸಲು ಹೊರಟಿದ್ದಾರೆ. ಆಂಧ್ರ ಮೂಲದ ಖ್ಯಾತ ಪಿಆರ್ (ಸಾರ್ವಜನಿಕ ಸಂಪರ್ಕಾಧಿಕಾರಿ) ನೇಮಿಸಿಕೊಳ್ಳಲು ತಯಾರಿ ನಡೆಸಿದ್ದಾರೆ. ಈತ ಹಿಂದೆ ಧರ್ಮ ಸಿಂಗ್, ರಾಜೀವ್ ಚಂದ್ರಶೇಖರ್ ಹಾಗೂ ಯಡಿಯೂರಪ್ಪ ಅವರಿಗೆ ಸೇವೆ ಸಲ್ಲಿಸಿದ್ದರು.

ಕಳೆದ ಮೇನಲ್ಲಿ ಯಡಿಯೂರಪ್ಪ ಮತ್ತು ಈ ವ್ಯಕ್ತಿಯ ನಡುವಿನ ಒಪ್ಪಂದ ಕೊನೆ ಗೊಂಡಿದೆ. ಒಪ್ಪಂದ ಮುಗಿಯುತ್ತಿದ್ದಂತೆ ಅವರನ್ನು ನೇಮಿಸಿ ಕೊಳ್ಳುವ ಮಾತು ಕತೆ ನಡೆದಿದೆ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ನೇಮಕಾತಿಗೆ ಆಸಕ್ತಿ ತೋರಿ, ಮುಂದಿನ ಪ್ರಕ್ರಿಯೆಗಳಲ್ಲಿ ನಿರತರಾಗಿ ದ್ದಾರೆ. ಒಂದು ವೇಳೆ ಅವರ ನೇಮಕವಾದರೆ ಮಾಸಿಕ 5 ರಿಂದ 6 ಲಕ್ಷ ರೂ.ವರೆಗೆ ವೇತನ ಮತ್ತು ಇತರ ಪಂಚತಾರಾ ಸವಲತ್ತು ಗಳನ್ನು ಕಲ್ಪಿಸಲಾಗುತ್ತದೆ. ಅವರ ಬೇಡಿಕೆಗೆ ಪ್ರಜ್ವಲ್ ಸಮ್ಮತಿಸಿದ್ದಾರೆ, ಸರ್ಕಾರದಿಂದ ಈ ಬೃಹತ್ ಮೊತ್ತದ ವೇತನ ಕೊಡಿಸಲು ಸಾಧ್ಯವಿಲ್ಲ, ತಮ್ಮ ಹಣದಿಂದಲೇ ನೀಡಬೇಕಾಗುತ್ತದೆ. ಪಿಆರ್ ಈ ಹಿಂದೆ ಯಾರ ಬಳಿ ಕೆಲಸ ಮಾಡಿದ್ದರೋ ಅವರೆಲ್ಲರಿಗೂ ಸಾರ್ವಜನಿಕವಾಗಿ ಒಳ್ಳೆಯ ಪ್ರಚಾರ ಮತ್ತು ಪ್ರಮುಖ ಹುದ್ದೆಗಳೂ ದೊರೆತಿವೆ. ಇದನ್ನೇ ಮಾನದಂಡ ಮಾಡಿಕೊಂಡಿರುವ ಪ್ರಜ್ವಲ್ ತಮ್ಮ ತಂದೆಯನ್ನು ಮುಖ್ಯಮಂತ್ರಿಯಾಗಿ ಮಾಡಲೇಬೇಕು ಮತ್ತು ತಾನೂ ರಾಜಕೀಯವಾಗಿ ಬೆಳೆಯಲೇಬೇಕೆಂದು ಇಂತಹ ನೇಮಕ ಮಾಡಲು ಹೊರಟಿದ್ದಾರೆ.

ರೇವಣ್ಣ ಅವರಿಗೆ ಇದು ಇಷ್ಟ ಇದೆಯೋ, ಇಲ್ಲವೋ. ಆದರೆ ಕುಟುಂಬದ ಒತ್ತಾಯಕ್ಕೆ ಮಣಿಯಲೇಬೇಕಿದೆ. ಗ್ರಾಮೀಣ ಬದುಕಿನ ರೇವಣ್ಣ, ಪಿಆರ್ ಮೂಲಕ ಯಾವ ರೀತಿ ಬಿಂಬಿಸಿಕೊಳ್ಳುತ್ತಾರೋ ಕಾದು ನೋಡಬೇಕು.

Translate »