ಮೋದಿಯನ್ನೇ ಇನ್ನು ಮೂರು ಅವಧಿಗೆ ಪ್ರಧಾನಿ ಮಾಡಿದರೆ ಮಾತ್ರ ದೇಶಕ್ಕೆ ಉಳಿಗಾಲ
ಮೈಸೂರು

ಮೋದಿಯನ್ನೇ ಇನ್ನು ಮೂರು ಅವಧಿಗೆ ಪ್ರಧಾನಿ ಮಾಡಿದರೆ ಮಾತ್ರ ದೇಶಕ್ಕೆ ಉಳಿಗಾಲ

June 23, 2018

ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಪ್ರೊ.ಎಸ್.ಎಲ್.ಭೈರಪ್ಪ ಪ್ರತಿಪಾದನೆ

ಮೈಸೂರು: ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿನ ಮೂರು ಅವಧಿಗೂ ಪ್ರಧಾನಿಯನ್ನಾಗಿ ಮಾಡಿದಾಗ ಮಾತ್ರ ದೇಶಕ್ಕೆ ಉಳಿಗಾಲ ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತ ಖ್ಯಾತ ಸಾಹಿತಿ ಡಾ. ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಕುವೆಂಪುನಗರದಲ್ಲಿ ರುವ ತಮ್ಮ ನಿವಾಸದಲ್ಲಿ ಕೇಂದ್ರ ಸರ್ಕಾ ರದ ನಾಲ್ಕು ವರ್ಷಗಳ ಸಾಧನೆ ಕುರಿತಾದ ಕಿರುಹೊತ್ತಿಗೆಯನ್ನು ಸಂಸದ ಪ್ರತಾಪ ಸಿಂಹ ಅವರಿಂದ ಶುಕ್ರವಾರ ಸ್ವೀಕರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದುವರೆಗೂ ನರೇಂದ್ರ ಮೋದಿ ಅವರಂತಹ ಪ್ರಧಾನಿಯನ್ನು ನಮ್ಮ ದೇಶ ಕಂಡಿಲ್ಲ. ದೇಶದ ಒಳಿತಿಗಾಗಿ ಸದಾ ಚಿಂತನೆ ಮಾಡುವುದರೊಂದಿಗೆ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಉತ್ತಮ ಆಡಳಿತ ನೀಡಿ, ಹಲವಾರು ಸುಧಾರಣೆ ತಂದಿದ್ದಾರೆ. ಈ ಅವಧಿಯಲ್ಲಿ ಮೋದಿ ಅವರ ಸರ್ಕಾರ ಉತ್ತಮ ಟೇಕಾಫ್ ಆಗಿದೆ. ಇನ್ನಷ್ಟು ಎತ್ತರಕ್ಕೆ ಹಾರಾಟ ನಡೆಸುವುದಕ್ಕಾಗಿ ಕಾಲಾವಕಾಶ ಬೇಕಾಗಿದೆ. ಇದರಿಂದ 2019ರ ಚುನಾವಣೆಯಲ್ಲಿ ಮಾತ್ರವಲ್ಲದೆ, 2024 ಹಾಗೂ 2029ರಲ್ಲಿಯೂ ಮೋದಿ ಅವರನ್ನೇ ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು.

ಮೋದಿ ಸೋಲಿಸುವುದು ಅವಿವೇಕಿ ತನ: ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮೋದಿ ಅವರನ್ನು ಸೋಲಿಸಲು ವಿರೋಧ ಪಕ್ಷಗಳ ಐದಾರು ಗುಂಪುಗಳು ಒಂದಾ ಗಿವೆ. ಇವು ಕೇವಲ ಮೋದಿ ಅವರನ್ನು ಸೋಲಿಸಿ ಎಂದು ಹೇಳುತ್ತಿವೆ. ಮೋದಿ ಯನ್ನು ಸೋಲಿಸಿ ತಾವೇನು ಮಾಡುತ್ತೇವೆ ಎಂದು ಹೇಳುತ್ತಿಲ್ಲ.

ಅವರು ಗೆದ್ದ ನಂತ ರವಾ ದರೂ ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಮೋದಿಯನ್ನು ಸೋಲಿಸು ವುದು ಅವಿವೇಕಿತನದ ಕೆಲಸವಾಗಿದೆ. ವಿರೋಧ ಪಕ್ಷಗಳ ಮೋದಿ ವಿರುದ್ಧದ ನಡೆ ಯನ್ನು ಪ್ರಜ್ಞಾವಂತರು ಗಮನಿಸಬೇಕು. ಆ ಮೂಲಕ ಮುಂದಿನ ಚುನಾವಣೆಯಲ್ಲಿ ಯಾರಿಗೆ ಮತ ಹಾಕಬೇಕು, ಯಾವ ಕಾರಣಕ್ಕೆ ಮತಹಾಕಬೇಕು ಎನ್ನುವುದನ್ನು ಹಳ್ಳಿ ಹಳ್ಳಿಗೆ ಹೋಗಿ ಜಾಗೃತಿ ಮೂಡಿಸುವಂತೆ ಅವರು ಸಲಹೆ ನೀಡಿದರು.

ವಿದೇಶದಲ್ಲಿ ಭಾರತದ ಮೇಲಿನ ಮನೋಭಾವ ಬದಲಾಗಿದೆ: ಕಳೆದ ನಾಲ್ಕು ವರ್ಷದಿಂದ ಮೋದಿ ಅವರು ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಭಾರತದ ಮೇಲಿನ ಮನೋ ಭಾವವನ್ನು ಬದಲಾಗುವಂತೆ ಮಾಡಿದ್ದಾರೆ. ಅಂತರರಾಷ್ಟ್ರೀಯ ಯೋಗ ದಿನ ಇದಕ್ಕೆ ಉದಾಹರಣೆಯಾಗಿದೆ. ಉತ್ಸಾಹದಿಂದ ಕೆಲಸ ಮಾಡು ತ್ತಿದ್ದಾರೆ. ಭಾರತದ ಭವಿಷ್ಯವನ್ನು ನೋಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸ್ವಿಸ್ ಬ್ಯಾಂಕ್‍ಗೆ ಹಣ ಹೋಗುವುದನ್ನು ತಡೆದಿದ್ದಾರೆ

ಚುನಾವಣೆ ಸಮೀಪಿ ಸುತ್ತಿದ್ದಂತೆ ಸಣ್ಣ ಸಣ್ಣ ವಿಷಯವನ್ನು ಮುಂದಿಟ್ಟುಕೊಂಡು ಅಪಪ್ರಚಾರ ಮಾಡುವುದಕ್ಕೆ ವಿರೋಧ ಪಕ್ಷಗಳು ಯತ್ನಿಸುತ್ತಿವೆ. ಸ್ವಿಸ್ ಬ್ಯಾಂಕ್‍ನಿಂದ ಕಪ್ಪು ಹಣ ತರಲಿಲ್ಲ ಎಂದು ಆರೋಪ ಮಾಡಲಾಗುತ್ತಿದೆ. ಆದರೆ ಮೋದಿ ತಂದಿರುವ ಸುಧಾರಣೆಯಿಂದ ಸ್ವಿಸ್ ಬ್ಯಾಂಕ್‍ಗೆ ಹರಿದು ಹೋಗುತ್ತಿದ್ದ ಹಣದ ಪ್ರಮಾಣಕ್ಕೆ ಕಡಿವಾಣ ಹಾಕಿದ್ದಾರೆ. ತ್ವರಿತಗತಿಯಲ್ಲಿ ಕೆಲಸ ಮಾಡಿದ್ದಾರೆ.

ವಿದೇಶಿ ಪ್ರವಾಸವನ್ನು ದೇಶದ ಒಳಿತಿಗಾಗಿ ಕೈಗೊಂಡರೂ ವಿರೋಧ ಪಕ್ಷಗಳು ಟೀಕಿಸುತ್ತಿವೆ. ಭಾರತದ ವಿರೋಧಿ ರಾಷ್ಟ್ರಗಳಾದ ಪಾಕಿಸ್ತಾನ, ಚೀನಾದಂತಹ ರಾಷ್ಟ್ರಗಳಿಗೂ ಪ್ರಧಾನಿ ಮೋದಿಯ ನಡೆ ಭಯ ಹುಟ್ಟಿಸಿರುವುದು ಸಾಮಾನ್ಯ ಸಂಗತಿಯಾ? ಎಂದು ಪ್ರಶ್ನಿಸಿದ ಅವರು, ಈ ಹಿಂದೆ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ದೇಶದ ಪರಿಸ್ಥಿತಿ ಹೇಗಿತ್ತು? ಯಾವುದೇ ಕೆಲಸವನ್ನು ಮಾಡ ಬೇಕಾದರೂ `ಮೇಡಂ’ ಅನುಮತಿ ಕೇಳಬೇಕಾದ ದುಸ್ಥಿತಿಯಿತ್ತು. ದೇಶದ ಯಾವುದೇ ಮೂಲೆ ಯಲ್ಲಿ ಯಾವೊಬ್ಬ ವಿದ್ಯಾರ್ಥಿನಿ ನನ್ನ ವಿದ್ಯಾಭ್ಯಾಸಕ್ಕೆ ಕಷ್ಟ ವಾಗುತ್ತಿದೆ ಎಂದು ಹೇಳಿದರೆ ಸಾಕು ತಕ್ಷಣ ಸ್ಪಂದಿಸುವ ಪ್ರದಾನಮಂತ್ರಿ ನರೇಂದ್ರ ಮೋದಿ ಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿಯನ್ನು ದ್ವೇಷಿಸುವುದನ್ನು ಬಿಟ್ಟು ಅವರು ಮಾಡಿರುವ ಕೆಲಸವನ್ನು ಪ್ರೀತಿಸಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಪ್ರತಾಪಸಿಂಹರಲ್ಲದೆ ಶಾಸಕ ಎಲ್.ನಾಗೇಂದ್ರ, ಪಾಲಿಕೆ ಸದಸ್ಯ ಎಂ.ವಿ.ರಾಮಪ್ರಸಾದ್ ಸೇರಿದಂತೆ ಇನ್ನಿತರರು ಉಪ ಸ್ಥಿತರಿದ್ದರು. ನಂತರ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಲ್.ನಾಗೇಂದ್ರ, ‘ಮೈಸೂರು ಮಿತ್ರ’ ಕಾರ್ಯಾಲಯಕ್ಕೆ ಭೇಟಿ ನೀಡಿ, ಪತ್ರಿಕೆ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಅವರಿಗೂ ಕಿರು ಹೊತ್ತಿಗೆ ಸಲ್ಲಿಸಿದರು. ಬಳಿಕ ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಕೈಗಾರಿಕೊದ್ಯಮಿ ಗೋಪಿನಾಥ್ ಶೆಣೈ ಅವರನ್ನು ಭೇಟಿ ಮಾಡಿದರು.

Translate »