ಮೈಸೂರು

ಸಿಎಸ್‍ಐಆರ್-ಸಿಎಫ್‍ಟಿಆರ್‍ಐನಲ್ಲಿ ವಿದ್ಯಾರ್ಥಿ ಸಮ್ಮೇಳನಕ್ಕೆ ನೋಂದಣಿ ಆರಂಭ
ಮೈಸೂರು

ಸಿಎಸ್‍ಐಆರ್-ಸಿಎಫ್‍ಟಿಆರ್‍ಐನಲ್ಲಿ ವಿದ್ಯಾರ್ಥಿ ಸಮ್ಮೇಳನಕ್ಕೆ ನೋಂದಣಿ ಆರಂಭ

June 24, 2018

ಮೈಸೂರು: ಮೈಸೂರಿನ ಸಿಎಸ್‍ಐಆರ್-ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯವು ವಿಶಿಷ್ಠ ಸಮ್ಮೇಳನವೊಂದಕ್ಕೆ ಸಾಕ್ಷಿಯಾಗಲಿದೆ, ಭಾರತೀಯ ಆಹಾರ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಸಂಘದ ನೆರವಿನೊಂದಿಗೆ ವಿಶೇಷವಾಗಿ ವಿದ್ಯಾರ್ಥಿಗಳೇ ಕಲ್ಪಿಸಿ, ಆಯೋಜಿಸಿ, ಸಂಘಟಿಸುತ್ತಿರುವ “ಜೈವಿಕ ವಿಜ್ಞಾನದಲ್ಲಿ ಸಂಶೋಧನೆಗಳ ಮುನ್ನಡೆ” ಕುರಿತ ಸಿಎಸ್‍ಆರ್‍ಐ-ಸಿಎಫ್‍ಟಿಆರ್‍ಐ-ವಿದ್ಯಾರ್ಥಿಗಳ ಸಮ್ಮೇಳನ (ಸಿಸಿಎಸ್‍ಎಸ್2018) ಜುಲೈ 13ರಂದು ಸಿಎಫ್‍ಟಿಆರ್‍ಐನಲ್ಲಿ ಜರುಗಲಿದೆ. ಸಮ್ಮೇಳನವು ವಿವಿಧ ಜೀವ ವಿಜ್ಞಾನದ ಶಾಖೆಗಳಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳು ಹಾಗೂ ಸಂಶೊಧಕರ ನಡುವೆ ನಿಕಟ ಮಾತುಕತೆಗೆ ರಂಗವಾಗಲಿದೆ. ಸಿಎಸ್‍ಐಆರ್-ಸಿಎಫ್‍ಟಿಆರ್‍ಐ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜೀವ ವಿಜ್ಞಾನ ವಿಷಯದಲ್ಲಿ ಸಂಶೋಧನೆ…

ಇಬ್ಬರು ವಿದ್ಯಾರ್ಥಿಗಳ ಸಹಕಾರದಲ್ಲಿ ಮೂಡಿತು ಸಂಗೀತ ಸಾಮ್ರಾಟರ ಒಳಗೊಂಡ ಟೇಬಲ್ ಕ್ಯಾಲೆಂಡರ್
ಮೈಸೂರು

ಇಬ್ಬರು ವಿದ್ಯಾರ್ಥಿಗಳ ಸಹಕಾರದಲ್ಲಿ ಮೂಡಿತು ಸಂಗೀತ ಸಾಮ್ರಾಟರ ಒಳಗೊಂಡ ಟೇಬಲ್ ಕ್ಯಾಲೆಂಡರ್

June 24, 2018

ಮೈಸೂರು: ಸಂಗೀತ ಶಿಕ್ಷಕಿಯೊಬ್ಬರು, ವಿಶ್ವ ಸಂಗೀತ ದಿನಾಚರಣೆ ಅಂಗವಾಗಿ ವಿಶಿಷ್ಟ ಕ್ಯಾಲೆಂಡರ್ ಹೊರತರುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಎಂ.ವಿ.ಅನಿತಾ ಅವರು, ಜೂ.11ರಂದು ಶಾಲೆಯಲ್ಲಿ ಆಚರಿಸಿದ ವಿಶ್ವ ಸಂಗೀತ ದಿನಾಚರಣೆ ಸಮಾರಂಭದಲ್ಲಿ ತಮ್ಮ ವಿಶಿಷ್ಟ ಪರಿಕಲ್ಪನೆಯಿಂದ ರೂಪಿಸಿದ್ದ ಟೇಬಲ್ ಕ್ಯಾಲೆಂಡರ್‍ನ್ನು, ಗಣ್ಯರಿಂದ ಬಿಡುಗಡೆ ಮಾಡಿಸುವ ಮೂಲಕ, ಶಾಲೆಯ ಸಹೋದ್ಯೋಗಿಗಳು ಹಾಗೂ ಮಕ್ಕಳನ್ನು ಅಚ್ಚರಿಗೊಳಿಸಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಬ್ಬರ ಸಹಕಾರ ಪಡೆದು, ರೂಪಿಸಿರುವ ಕ್ಯಾಲೆಂಡರ್ ಸಹಜ ಸುಂದರವಾಗಿದ್ದು, ದೇಶದ ಹೆಮ್ಮೆಯ ಸಂಗೀತ…

ವಕೀಲೆ ಸುಮನಗೆ ಪ್ರೇರಣಾ ಪ್ರಶಸ್ತಿ ಪ್ರಧಾನ ಶಕ್ತಿಧಾಮದ ಮಕ್ಕಳಿಂದ ಕಾರ್ಯಕ್ರಮ ಅಚ್ಚುಕಟ್ಟು ನಿರ್ವಹಣೆ
ಮೈಸೂರು

ವಕೀಲೆ ಸುಮನಗೆ ಪ್ರೇರಣಾ ಪ್ರಶಸ್ತಿ ಪ್ರಧಾನ ಶಕ್ತಿಧಾಮದ ಮಕ್ಕಳಿಂದ ಕಾರ್ಯಕ್ರಮ ಅಚ್ಚುಕಟ್ಟು ನಿರ್ವಹಣೆ

June 24, 2018

ಮೈಸೂರು: ಸುಂದರ ಸಂಜೆಯಲ್ಲಿ ಬಣ್ಣದ ಉಡುಗೆಗಳನ್ನು ತೊಟ್ಟ ಹೆಣ್ಣುಮಕ್ಕಳ ಮುಖದಲ್ಲಿ ಮಂದಹಾಸ ಮನೆ ಮಾಡಿತ್ತು. ಕಾರ್ಯಕ್ರಮದ ನಿರೂಪಣೆ ಹೊಣೆ ಹೊತ್ತಿದ್ದ ಮಕ್ಕಳು, ನಿರೂಪಣೆ, ಸ್ವಾಗತ, ವಂದನಾರ್ಪಣೆವರೆವಿಗೂ ತಮ್ಮ ತೊದಲು ನುಡಿಗಳಿಂದಲೇ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ತಾವೇ ರಚಿತ ಸ್ವಾಗತ ಹಾಡಿನ ಮೂಲಕ ವಿನೂತನವಾಗಿ ಆಹ್ವಾನಿಸಿದ್ದು ವಿಶೇಷವಾಗಿತ್ತು. ಊಟಿ ರಸ್ತೆಯ ಶಕ್ತಿಧಾಮದಲ್ಲಿ ಚಿಗುರು ಮಕ್ಕಳ ಕಲಾಸಂಸ್ಥೆ ಶನಿವಾರ ಆಯೋಜಿಸಿದ್ದ ಪ್ರೇರಣಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಕ್ಕಳು, ನಿರೂಪಣೆಯ ದಿಟ್ಟತನ ಪ್ರದರ್ಶಿಸಿ ಗಣ್ಯರು ನಿಬ್ಬೆರಗಾಗುವಂತೆ ಮಾಡಿದರು. ಈ…

ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ತೀವ್ರ ಹೋರಾಟ
ಮೈಸೂರು

ಹಜ್ ಭವನಕ್ಕೆ ಟಿಪ್ಪು ಹೆಸರಿಟ್ಟರೆ ತೀವ್ರ ಹೋರಾಟ

June 24, 2018

ಬೆಂಗಳೂರು: ನಗರದ ಹಜ್ ಭವನಕ್ಕೆ ಟಿಪ್ಪು ಸುಲ್ತಾನ್ ಹೆಸರಿಟ್ಟರೆ ಕರ್ನಾಟಕ ಮತ್ತೊಮ್ಮೆ ಹೊತ್ತಿ ಉರಿಯಲು ಕಾರಣವಾಗುತ್ತದೆ ಎಂದು ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇದ್ದಾಗ ಹಜ್ ಯಾತ್ರಿಕರಿಗೆ ಅನುಕೂಲ ಆಗಲು ಹಜ್ ಭವನ ನಿರ್ಮಾಣಕ್ಕೆ ಹಣ ಕೊಟ್ಟಿತ್ತೇ ಹೊರತು ಟಿಪ್ಪು ಹೆಸರು ಇಡಲು ಅಲ್ಲ, ಟಿಪ್ಪು ಒಬ್ಬ ಮತಾಂಧ, ಕೊಲೆ ಗಡುಕ ಎಂದು ಗುಡುಗಿದರು. ಹಜ್ ಭವನಕ್ಕೆ ಒಬ್ಬ ಮತಾಂಧ ಮತ್ತು ದೇಶದ್ರೋಹಿಯ ಹೆಸರು ಇಡಬಾರದು. ಟಿಪ್ಪು…

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬದಲು ಅಧಿಕಾರಿಗಳಿಗೆ ಉಸ್ತುವಾರಿ
ಮೈಸೂರು

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಬದಲು ಅಧಿಕಾರಿಗಳಿಗೆ ಉಸ್ತುವಾರಿ

June 24, 2018

ಬೆಂಗಳೂರು: ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇಮಕ ಮಾಡದ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಿಗೆ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ಹಂಚಿದ್ದಾರೆ. ಮುಖ್ಯಮಂತ್ರಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ ಅವರನ್ನು ಮೈಸೂರಿಗೆ, ಜಾವೇದ್ ಅಖ್ತರ್ ಮಂಡ್ಯಕ್ಕೆ, ಡಾ.ಜಿ.ಕಲ್ಪನಾ ಕೊಡಗು ಜಿಲ್ಲೆಗೆ, ರಾಜೇಂದ್ರ ಕುಮಾರ್ ಕಠಾರಿಯಾ ಅವ ರನ್ನು ಚಾಮರಾಜನಗರಕ್ಕೂ ನೇಮಕ ಮಾಡಿ ದ್ದಾರೆ. ಉಮಾಶಂಕರ ಅವರನ್ನು ದಾವಣಗೆರೆಗೂ, ಪಂಕಜ್ ಕುಮಾರ್ ಪಾಂಡೆ ಚಿತ್ರದುರ್ಗಕ್ಕೆ, ಬೆಂಗಳೂರು ನಗರ ಅಂಜುಂ ಪರ್ವೇಜ್, ಬೆಂಗಳೂರು ಗ್ರಾಮಾಂತರ ಡಾ.ಬಿ.ಬಸವರಾಜು, ರಾಮನಗರಕ್ಕೆ ಅಜಯ್ ಸೇಠ್ ನೇಮಕ…

ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ಪ್ರೊ.ಕೆ.ಎಸ್.ರಂಗಪ್ಪ ನೇಮಕ ಪ್ರಸ್ತಾಪವಿಲ್ಲ
ಮೈಸೂರು

ಉನ್ನತ ಶಿಕ್ಷಣ ಇಲಾಖೆ ಸಲಹೆಗಾರರಾಗಿ ಪ್ರೊ.ಕೆ.ಎಸ್.ರಂಗಪ್ಪ ನೇಮಕ ಪ್ರಸ್ತಾಪವಿಲ್ಲ

June 24, 2018

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಸಲಹೆಗಾರ ರಾಗಿ ಮೈಸೂರು ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ನೇಮಕ ಮಾಡುವ ಪ್ರಸ್ತಾಪವಿಲ್ಲ. ಆದರೆ ಅವರ ಸಲಹೆಯನ್ನು ನಾವು ಪಡೆಯುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ. ಪ್ರೊ. ರಂಗಪ್ಪ ನೇಮಕಾತಿಗೆ ಕೆಲವರು ವಿರೋಧ ವ್ಯಕ್ತಪಡಿಸಿ ನೀಡಿದ ಮನವಿ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತ ನಾಡಿದ ಸಚಿವರು, ಪ್ರೊ. ರಂಗಪ್ಪಮೇಲೆ ಭ್ರಷ್ಟಚಾರದ ಆರೋಪಗಳಿವೆ. ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯ ಹಗರಣದ ಆರೋಪ ಕುರಿತು ವಿಧಾನ ಮಂಡಲ ಹಕ್ಕು ಬಾಧ್ಯತಾ…

ಹಳ್ಳಿಗಳಲ್ಲಿ ಮಿನಿ ಸೂಪರ್ ಮಾರ್ಕೆಟ್ ಆರಂಭ
ಮೈಸೂರು

ಹಳ್ಳಿಗಳಲ್ಲಿ ಮಿನಿ ಸೂಪರ್ ಮಾರ್ಕೆಟ್ ಆರಂಭ

June 24, 2018

ಬೆಂಗಳೂರ: ಗ್ರಾಮೀಣ ಪ್ರದೇಶದ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರಾಜ್ಯಾದ್ಯಂತ ಹಳ್ಳಿಗಳಲ್ಲಿ ಮಿನಿ ಸೂಪರ್ ಮಾರ್ಕೆಟ್ ಆರಂಭಿಸಲು ಮುಂದಾಗಿದೆ. ಹಳ್ಳಿಗಳಲ್ಲಿ ಮಿನಿ ಸೂಪರ್ ಮಾರ್ಕೆಟ್ ಆರಂಭಿಸಲು ಸರ್ಕಾರ ಸದ್ಯ 5 ಸಾವಿರ ಗ್ರಾಮೀಣ ಉದ್ಯಮಿಗಳನ್ನು ಟಾರ್ಗೆಟ್ ಮಾಡುತ್ತಿದ್ದು, ಪ್ರತಿ ಜಿಲ್ಲೆಯಲ್ಲೂ 200 ಮಿನಿ ಸೂಪರ್ ಮಾರ್ಕೆಟ್‍ಗಳನ್ನು ಆರಂಭಿಸುವ ಯೋಚನೆ ಇದೆ. ಈ ಸಂಬಂಧ ಶೀಘ್ರದಲ್ಲೇ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಉತ್ಪನ್ನಗಳ ಖರೀದಿಗೆ ರಾಜ್ಯ ಸರ್ಕಾರ ಯಾವುದೇ…

ಎನ್‍ಆರ್ ಮೊಹಲ್ಲಾದ ದೊಡ್ಡಮ್ಮ ತಾಯಿ ಛತ್ರದ ಮಾಲೀಕ ರಾಜು ಆತ್ಮಹತ್ಯೆ
ಮೈಸೂರು

ಎನ್‍ಆರ್ ಮೊಹಲ್ಲಾದ ದೊಡ್ಡಮ್ಮ ತಾಯಿ ಛತ್ರದ ಮಾಲೀಕ ರಾಜು ಆತ್ಮಹತ್ಯೆ

June 24, 2018

ಮೈಸೂರು:  ದೇವಾಲಯದ ಅರ್ಚಕರೂ ಆದ ಛತ್ರವೊಂದರ ಮಾಲೀಕ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ. ಎನ್.ಆರ್.ಮೊಹಲ್ಲಾದ ಗಣೇಶ ದೇವಾಲಯ ರಸ್ತೆಯಲ್ಲಿರುವ ದೊಡ್ಡಮತಾಯಿ ದೇವಾಲಯದ ಅರ್ಚಕ ಹಾಗೂ ದೊಡ್ಡಮ್ಮತಾಯಿ ಛತ್ರದ ಮಾಲೀಕ ರಾಜು(45), ಛತ್ರದ ಹಿಂಭಾಗದಲ್ಲಿರುವ ಬಾತ್‍ರೂಂನಲ್ಲಿ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಎನ್.ಆರ್.ಠಾಣೆ ಪೊಲೀಸರು, ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ರಾಜು ಅವರ ಕುಟುಂಬದವರೆಲ್ಲಾ ಚಾಮರಾಜನಗರಕ್ಕೆ ತೆರಳಿದ್ದು, ವಿಷಯ ತಿಳಿಸಲಾಗಿದೆ. ಸಾಲ ಮಾಡಿಕೊಂಡಿದ್ದ ರಾಜು, ಮನನೊಂದು…

ಮದುವೆ ಛತ್ರಗಳಲ್ಲಿ ಕಳವು ಮಾಡುತ್ತಿದ್ದ ಕಳ್ಳಿ ಬಂಧನ
ಮೈಸೂರು

ಮದುವೆ ಛತ್ರಗಳಲ್ಲಿ ಕಳವು ಮಾಡುತ್ತಿದ್ದ ಕಳ್ಳಿ ಬಂಧನ

June 24, 2018

ಮೈಸೂರು:  ಸಮಾರಂಭಗಳು ನಡೆಯುವ ಸಂದರ್ಭದಲ್ಲಿ ಛತ್ರಗಳಿಗೆ ತೆರಳಿ, ಚಿನ್ನಾಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳಿ, ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ಸರಗೂರು ಗ್ರಾಮದ ನಿವಾಸಿ ಶಶಿಕಲಾ(50), ಮೈಸೂರಿನ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆಯುತ್ತಿದ್ದ ಸಮಾರಂಭವೊಂದರಲ್ಲಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದಾಗ ಲಕ್ಷ್ಮೀಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಆಕೆ ನೀಡಿದ ಮಾಹಿತಿ ಮೇರೆಗೆ ವಿವಿಧೆಡೆ ಅಡವಿಟ್ಟಿದ್ದ ಸುಮಾರು 20 ಗ್ರಾಂ ಚಿನ್ನಾಭರಣ ಹಾಗೂ 1600 ಗ್ರಾಂ ಬೆಳ್ಳಿ ಪದಾರ್ಥಗಳನ್ನು…

ಸುತ್ತೂರು ಮಠದಲ್ಲಿ ಜೂ.28ಕ್ಕೆ ವಿದುಷಿ ಸುಕನ್ಯಾ ರಾಮಗೋಪಾಲ್ ತಂಡದಿಂದ ಲಯವಾದ್ಯಗೋಷ್ಠಿ
ಮೈಸೂರು

ಸುತ್ತೂರು ಮಠದಲ್ಲಿ ಜೂ.28ಕ್ಕೆ ವಿದುಷಿ ಸುಕನ್ಯಾ ರಾಮಗೋಪಾಲ್ ತಂಡದಿಂದ ಲಯವಾದ್ಯಗೋಷ್ಠಿ

June 24, 2018

ಮೈಸೂರು:  ಮೈಸೂರಿನ ಸುತ್ತೂರು ಮಠದಲ್ಲಿ ಜೂನ್ 28ರ (ಗುರುವಾರ) ಸಂಜೆ 6 ಗಂಟೆಗೆ ಬೆಳದಿಂಗಳ ಸಂಗೀತದ ಅಂಗವಾಗಿ ವಿದುಷಿ ಸುಕನ್ಯಾ ರಾಮಗೋಪಾಲ್ ತಂಡದಿಂದ ಲಯವಾದ್ಯಗೋಷ್ಠಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಸಾನಿದ್ಯವನ್ನು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಶ್ರೀಮತಿ ಸುಕನ್ಯಾ ರಾಮಗೋಪಾಲ್‍ರವರು ದೇಶದ ಏಕೈಕ ಮಹಿಳಾ ಘಟಂ ಕಲಾವಿದರು. 12ನೇ ವರ್ಷದಲ್ಲಿ ಚೆನ್ನೈನ ಶ್ರೀಜಯಗಣೇಶ ತಾಳವಾದ್ಯ ವಿದ್ಯಾಶಾಲೆಯಲ್ಲಿ ವಿದ್ವಾನ್ ಟಿ.ಆರ್.ಹರಿಹರ ಶರ್ಮರ ಬಳಿ ಮೃದಂಗವನ್ನು ವಿದ್ವಾನ್ ಗುರುಮೂರ್ತಿಯವರ ಬಳಿ ವಯೊಲಿನ್ ಮತ್ತು ವಿದ್ವಾನ್ ವಿಕ್ಕು ವಿನಾಯಕರಾಮ್‍ರವರ…

1 1,529 1,530 1,531 1,532 1,533 1,611
Translate »